ಕುಂದಾಪುರದಲ್ಲಿ ಪಾದ ತೊಳೆಯುವ ದಿನ – ಯೇಸು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾರೆ: ಫಾ|ಆಲ್ವಿನ್ ಸೀಕ್ವೆರಾ

JANANUDI.COM NETWORK


ಕುಂದಾಪುರ,ಎ.14; “ಯೇಸು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾನೆ, ಆತನ ಪ್ರೀತಿಗೆ ಎಲ್ಲೆ ಇಲ್ಲ, ಅವನು ಕೂಡ ನಮ್ಮ ಪ್ರೀತಿಯನ್ನು ಆಶಿಸುತ್ತಾನೆ, ಅದಕ್ಕೆ ನಾವು ಪರರನ್ನು ಪ್ರೀಸಬೇಕು” ಎಂದು 450 ವರ್ಷಗಳ ಪುರಾತನವಾದ ಕುಂದಾಪುರ ರೋಜರಿ ಚರ್ಚಿನಲ್ಲಿ ಯೇಸುವಿನ ಕೊನೆಯ ಭೋಜನದ ಆಚರಣೆಯನ್ನು ನಡೆಸಿಕೊಟ್ಟ ಕಟ್ಕರೆ ಬಾಲ ಯೇಸುವಿನ ಆಶ್ರಮದ ಮೇಲ್ವಿಚಾರಕರಾದ ವಂ|ಫಾ|ಆಲ್ವಿನ್ ಸೀಕ್ವೇರಾ ಸಂದೇಶ ನೀಡಿದರು. ನೀಡಿದರು


“ಪರಮ ಪ್ರಸಾದದ ರೂಪದಲ್ಲಿ ಯೇಸುವಿವ ಶರೀರ ನಮಗೆ ನೀಡಿದ್ದು, ಯೇಸು ನಮಗೆ ನೀಡಿದ ಬಹುದೊಡ್ಡ ಕಾಣಿಕೆಯಾಗಿದೆ. ಯೇಸುವು ತಾನು ತಮ್ಮ ಜೀವವನ್ನು ಶಿಲುಭೆಯ ಮೇಲೆ ಬಲಿದಾನ ನೀಡುವ ಮುನ್ನಾ ದಿನ ತನ್ನ ಶಿಸ್ಯರಿಗೆ ತಮ್ಮ ಭೋದನೆ, ಆರಾದನೆ ಮುನ್ನೆಡಸಲು ಯಾಜಕೀ ದೀಕ್ಷೆಯ ನೀಡಿದರು, ಅಲ್ಲದೇ ನಾನು ನಿಮ್ಮ ಗುರು, ಆದರೆ ಗುರುಗಾಳದವರು, ಪರರ ಸೇವೆ ಮಾಡಬೇಕು ಎಂಬುದು ಯೇಸುವಿನ ಭೋದನೆ, ಅದರಂತೆ, ತಮ್ಮ ಶಿಸ್ಯರ ಪಾದ ತೊಳೆದರು, ಹೀಗೆ ನಾವು ಪರರ ಸೇವೆ ಮಾಡಬೇಕು, ಹೀಗೆ ಸೇವೆ ಪ್ರೀತಿ ನೀಡುತ್ತಾ ನಾವು ಮರಣಿಸಿದರೆ, ಯೇಸುವಿನಂತೆ ನಮಗೆ ಪುರ್ನಜ್ಮನ ದೊರೆತು ಸದ್ಗತಿ ದೊರಕುವುದೆಂದು” ತಿಳಿಸಿ ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು.


ಕುದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ವಾಳೆಯ ಪ್ರತಿನಿಧಿಗಳ ಪಾದ ತೊಳೆಯುವ ಆಚರಣೆ ನೆರವೇರಿಸಿದರು. ಹೀಗೆ ಪಾದ ತೊಳೆಯುವ ವಿಧಿ, ಪರಮ ಪ್ರಸಾದದ ಸಂಸ್ಕಾರದ ಅವಿಷ್ಕಾರ, ಯಾಜಕೀ ದೀಕ್ಷಾ ಸಂಸ್ಕಾರದ ಅವಿಷ್ಕಾರಗಳ ಹೀಗೆ ತ್ರೀ ಸಂಸ್ಕಾರಗಳ ಸಂಭ್ರಮದ ಪವಿತ್ರ ದಿನದ ಈ ಧಾರ್ಮಿಕ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ ಭಾಗಿಯದರು. ಈ ಧಾರ್ಮಿಕ ಆಚರಣೆಯಲ್ಲಿ ಅಪಾರಾ ಭಕ್ತಾಧಿಗಳು ಪಾಲ್ಗೊಂಡರು.