ದೇಶದಲ್ಲಿ ಮೊದಲ ಕೊರೊನಾ ರೂಪಾ೦ತರಿ XE  ವೈರಸ್‌ – ಮುಂಬಯಲ್ಲಿ ಪತ್ತೆ 

JANANUDI.COM NETWORK

ಮುಂಬೈ : ಭಾರತಕ್ಕೂ ಕೊರೊನಾ ರೂಪಾ೦ತರಿ XE ವೈರಸ್‌ ಪತ್ತೆಯಾಗಿದ್ದು, ಹೀಗೆ ರೂಪಾ೦ತರಿ XE ವೈರಸ್‌ ಕಾಲಿಟ್ಟಂದತಾಗಿದೆ, XE ವೈರಸ್‌ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.ಇಂಗ್ಲೆಂಡ್‌ ನಲ್ಲಿ ಪತ್ತೆಯಾಗಿದ್ದ, ಕೊರೊನಾ ರೂಪಾ೦ತರಿ ವೈರಸ್‌ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದು 376ಜನರನ್ನ ಪರೀಕ್ಟೆ ಗಳಪಡಿಸಲಾಗಿತ್ತು ಅದರಲ್ಲಿ 50 ವರ್ಷದ ವ್ಯಕ್ತಿಯಲ್ಲಿ XE ಕೊರೊನಾ ರೂಪಾ೦ತರಿ ದೃಡಪಟ್ಟಿದೆ. ಅವರು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದರು. ಮಾರ್ಚ್‌ ರಂದು ಅವರು.ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದರು ಎ೦ದು bmcತಿಳಿಸಿದೆ.
ಈ ಹೊಸ ರೂಪಾಂತರಿಯು ಓಮಿಕ್ರಾನ್‌ ತಳಿಯ ಬಿಎ.2 ಉಪ ತಳಿಗಿ೦ತಲೂ ಶೇ 30ರಷ್ಟು ಹೆಚ್ಚು ಪ್ರಸರಣ ಶಕ್ತಿಹೊಂದಿದೆ ಎನ್ಶಲಾಗುತ್ತಿದೆ. ಒಮಿಕ್ರಾನ್‌ ತಳಿಯ ಬಿಎ.1 ಮತ್ತು ಬಿಎ.2 ಉಪತಳಿಗಳ ರೂಪಾಂತರವನ್ನು ಗುರುತಿಸಲಾಗಿದ್ದು, ಇದಕ್ಕೆ ಎಕ್ಸ್‌ಇ ವೇರಿಯ೦ಟ್‌ ಎ೦ದು ಹೆಸರಿಡಲಾಗಿತ್ತು.
ಜನವರಿ 19ರ೦ದು ಇಂಗ್ಲೆಂಡಿನಲ್ಲಿ ಮೊದಲ ಬಾರಿಗೆ ಈ ವೈರಸ್‌ ಪತ್ತೆಯಾಗಿದ್ದು, ಹೊಸ ರೂಪಾ೦ತರದ 637 ಪ್ರಕರಣಗಳು ದೇಶದಲ್ಲಿ ಇದುವರೆಗೆ ವರದಿಯಾವೆ. ಇದು ಹೆಚ್ಚು ವ್ಯಾಪಕವಾಗಿ ಹರಡದಿದ್ದರೂ ಮುಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಾಗಿ ಹರಡುವ ಸಾಧ್ಯತೆ ಇದೆ ಎ೦ದು ಹೇಳಲಾಗುತ್ತಿದೆ. ವೈರಸಿನ ಹೊಸ ರೂಪಾ೦ತರಿ ಹೊಂದಿರುವ ರೋಗಿಗಳು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗ ಲಕ್ಷಣಗಳನ್ನು ಹೊಂದಿಲ್ಲ. ಹೊಸ ರೂಪಾಂತರ ವೈರಸ್ ಯಾವುದೇ ಕೋವಿಡ್ 19 ಕಿಂತ ಹೆಚ್ಚು ಹರಡಬಹುದು ಎ೦ದು ವಿಶ್ವ ಆರೋಗ್ಯ ಸ೦ಸ್ಥೆ ಕಳೆದ ವಾರ ಎಚ್ಚರಿಕೆ ನೀಡಿತ್ತು .