ಕೋಲಾರ,ಜಿಲ್ಲೆಯ ಜ. ನ. ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಿಂದ ಮಹಿಳೆ ಮತ್ತು ತೃತೀಯ ಲಿಂಗಿಗಳ ಸಬಲೀಕರಣಕ್ಕಾಗಿ ಆಕ್ಟ್ ಸಂಸ್ಥೆ ಆರಂಭ 

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮಹಿಳೆಯರು ಮತ್ತು ತೃತೀಯ ಲಿಂಗಿಗಳ ಸಬಲೀಕರಣಕ್ಕಾಗಿ ಸ್ಥಾಪಿಸಿರುವ ಆಕ್ಟ್ (ಆಶ್ರಯ ಚಾರಿಟೇಬಲ್ ಟ್ರಸ್ಟ್) ಸಂಸ್ಥೆಯನ್ನು ಉದ್ಘಾಟಿಸಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾದ ಶ್ರೀ ಬ್ಯಾಲಹಳ್ಳಿ ಎಂ ಗೋವಿಂದ ಗೌಡರು ಮಾತನಾಡಿ ಎಲ್ಲಾ ಐಟಿ ಕ್ಷೇತ್ರದಲ್ಲಿ ರುವವರು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿ ಕೊಂಡಿರುವುದು ತಿಳಿದು ತುಂಬಾ ಸಂತೋಷವಾಯಿತು.ನಿಮ್ಮ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಿಗೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ನಿಮ್ಮ ಸಾಮಾಜಿಕ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಿ ರೆಂದು ಹಾರೈಸಿದರು. ಜವಾಹರ್ ನವೋದಯ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ವತಿಯಿಂದ ಶ್ರೀ ಬ್ಯಾಲಹಳ್ಳಿ ಎಂ ಗೋವಿಂದ ಗೌಡ ರನ್ನ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಕಾರ್ಯದರ್ಶಿ ಶ್ರೀ ಕೆ ಎಂ ಅನಂತಕೀರ್ತಿ,ಆಕ್ಟ್ ಸಂಸ್ಥೆಯ ಶ್ರೀಮತಿ ವಿ.ಸುಮಾ, ಶ್ರೀ ಗಂಗೇಶ್ ಬಾಬು, ಶ್ರೀಮತಿ ವರಲಕ್ಷ್ಮಿ, ಶ್ರೀಮತಿ ಸುಧಾ, ಶ್ರೀ ಪ್ರದೀಪ್ ರವರು ಉಪಸ್ಥಿತರಿದ್ದರು.