ಕಳೆದ ಎರಡು ವಾರಗಳಲ್ಲಿ11ನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚಳ

JANANUDI.COM NETWORK

INDIA-OIL-ENERGY-PETROL

ಹೊಸದಿಲ್ಲಿ ಮಾ.3: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೊಮ್ಮೆ ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಲಾಗಿದೆ.ಇದು ಕಳೆದ ಎರಡು ವಾರಗಳಲ್ಲಿ ಇದು 13 ದಿನಗಳಲ್ಲಿ  11ನೇ ಬಾರಿಯ ಹೆಚ್ಚಳವಾಗಿದೆ. ಪ್ರತಿ ಲೀಟರ್ ಬೆಲೆಯಲ್ಲಿ ಒಟ್ಟಾರೆಯಾಗಿ 8ರೂ. ಹೆಚಿದೆ. 

    ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 102.61 ರಿಂದ 103.41 ರಷ್ಟಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ 93.87 ರಿಂದ94.67 ಕ್ಕೆ ಏರಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ 108.14 ,ಚನೈ-108.21, ಭೂಪಾಲ್-115,ಔರಂಗಾಬದ್ -119,ಆಗ್ರಾ -102.23,ಅಹಮದಾಬಾದ್- 102.29,ಅಲಹಾಬಾದ್ 102.53,ಔರಂಗಾಬಾದ್-119.18,ಭುವನೇಶ್ವರ- 109.50,ಚಂಡೀಗಢ- 101.99,ಡೆಹ್ರಾಡೂನ್ -100.99 ಇದೆ.

ತೈಲಬೆಲೆ ನಿರಂತರವಾಗಿ ಹೆಚ್ಚಳದಿಂದಾಗಿ, ಜನಸಾಮಾನ್ಯರಿಗೆ ತೈಲದ ಬಿಸಿ ತಟ್ಟುವುದಲ್ಲದೆ, ತೈಲ ಬೆಲೆ ಹೆಚ್ಚಿದ್ದರಿಂದ ಸಾಗಾಣೆಯ ಬೆಲೆ ಜಾಸ್ತಿಯಾಗುವುದರ ಜೊತೆ ದೀನ  ನಿತ್ಯದ ಬಳಕೆಯ ಎಲ್ಲಾ ವಸ್ತುಗಳಿಗೂ ಬೆಲೆ ಏರುವುದು ಖಚಿತವಾಗಿದೆ. ನಿರಂತರವಾಗಿ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುತ್ತಿರುವುದು ಇದು  ಜನಸಾಮಾನ್ಯರಿಗೆ ಕಳವಳಕಾರಿ ವಿಷಯವಾಗಿದೆ