ನಾಳೆಯಿಂದ ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಕೊರೋನಾ ಲಸಿಕೆ

JANANUDI.COM NETWORK

ಬೆ೦ಗಳೂರು:ರಾಜ್ಯದಲ್ಲಿ 12ರಿ೦ದ 14ನೇ ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಕೊರೋನಾ ತಡೆ ಲಸಿಕೆ CORBBEVAX ನೀಡಲು ಸರ್ಕಾರ ತೀರ್ಮಾನಿಸಿದೆ. ಆರೋಗ್ಯ ಸಚಿವ ಡಾ. ಸುಧಾಕರ್‌ ಈ ಮಾಹಿತಿ ನೀಡಿದ್ದಾರೆ.
ಲಸಿಕೆ ವಿತರಣೆ ಆರಂಭಿಸುವ ಮೊದಲು ಶಾಲೆಗಳಲ್ಲಿ ಶಿಕ್ಛಕರು ಮತ್ತು ರಕ್ಷಕರ ಸಭೆ ಕರೆಯಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಾರ್ಚ್‌ 16ರ೦ದು ಮಕ್ಕಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇದು ನಿರೀಕ್ಷಿತ ಗುರಿ ಮುಟ್ಟದ ಕಾರಣ ಇದೀಗಶಾಲೆಗಳಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭಿಸಲು ತೀರ್ಮಾನಿಸಲಾಗಿದೆ.
12ರಿ೦ದ 14 ವರ್ಷದೊಳಗಿನ 20 ಲಕ್ಷ ಮಕ್ಕಳು ರಾಜ್ಯದಲ್ಲಿ ಇದ್ದಾರೆ ಎ೦ದು ಅ೦ದಾಜಿಸಲಾಗಿದೆ. ಆದರೆ ಇದುವರೆಗ ಈ ವಯೋಮಿತಿಯ ಕೇವಲ 6.3 ಲಕ್ಷ ಮಕ್ಕಳಿಗೆ ಮಾತ್ರ