ಆಸ್ಪತ್ರೆ ಶವ ಸಾಗಾಟಕ್ಕೆ ಆಂಬ್ಯುಲೆನ್ಸ್ ನೀಡದಕ್ಕೆ ಮಹಿಳೆಯರೇ ಶವವನ್ನು ಕಿ.ಮೀ.ಗಟ್ಟಲೆ ಹೊತ್ತು ಸಾಗಿದರು

JANANUDI.COM NETWORK

ರೇವಾ ಮಾ. 30 : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರದಿಂದ ಆಂಬ್ಯುಲೆನ್ಸ್ ನೀಡಿಲ್ಲಎಂದು ನಾಲ್ವರು ಮಹಿಳೆಯರು ಮಂಚದ ಮೇಲೆ ಸಂಬಂಧಿಕರ ಶವವನ್ನು ಹೊತ್ತೊಯ್ಯುದ ಕರಾಳ ಘಟನೆ ನಡೆದಿದೆ.
ಇದರ ವೀಡಿಯೋ ರಾಷ್ಟ್ರವ್ಯಾಪಿಯಾಗಿದ್ದು ಮಹಿಳೆಯರು ಹೆಗಲ ಮೇಲೆ ಮತ್ತು ತಲೆಯ ಮೇಲೆ ಮಂಚವನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗುತ್ತಿರುವುದನ್ನು ಕಾಣಬಹುದು.
ರೇವಾ ನಿವಾಸಿ ಮೊಲಿಯಾ ಕೇವತ್ (80) ಎಂಬವರು ಅನಾರೋಗ್ಯಕ್ಕೆ ಒಳಪಟ್ಟಿದ್ದಾರೆಂದು ರಾಯಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ ಆದರೆ ಮಹಿಳೆಯ ಸ್ಥಿತಿ ಹದಗೆಟ್ಟಿದ್ದು, ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದಾಳೆ. ಶವವನ್ನು ಮನೆಗೆ ಕೊಂಡೊಯ್ಯಲು ಆರೋಗ್ಯ ಕೇಂದ್ರದಿಂದ ಆಂಬ್ಯುಲೆನ್ಸ್ ನೀಡಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.
ನಾವು ಶವವನ್ನು ಮಂಚದ ಮೇಲೆ ಸಾಗಿಸುತ್ತಿದ್ದೇವೆ. ಆರೋಗ್ಯ ಕೇಂದ್ರವಾಗಲಿ ಅಥವಾ ಆಡಳಿತ ಮಂಡಲಿಯಾಗಲಿ ನಮಗೆ ಸಹಾಯ ಮಾಡಲಿಲ್ಲ ಎಂದು ಮಹಿಳೆಯರ ಆರೋಪವಾಗಿದೆ