ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪುರಸಭೆಯ 2022-23 ನೇ ಸಾಲಿನ ಆಯ ವ್ಯಯ ಸಭೆಯಲ್ಲಿ, ಎಂಟು ತಿಂಗಳಿದ ಸದಸ್ಯರ ಸಾಮಾನ್ಯ ಸಭೆ ಕರೆಯದಿರುವ ಬಗ್ಗೆ ಹಾಗೂ ಸಭೆಯಲ್ಲಿ ಚರ್ಚಿಸದೆ ನಿರ್ಣಯಗಳನ್ನು ಕೈಗೊಂಡಿರುವುದರ ಬಗ್ಗೆ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸೋಮವಾರ ಬೆಳಿಗ್ಗೆ ಸರ್ವಸದಸ್ಯರ ಸಾಮಾನ್ಯ ಸಭೆ ಹಾಗೂ ಮಧ್ಯಾಹ್ನ ಆಯ ವ್ಯಯ ಸಭೆ ಏರ್ಪಡಿಸಲಾಗಿತ್ತು. ಎರಡೂ ಸಭೆಗಳನ್ನು ಒಂದೇ ದಿನ ಕರೆದಿರುವ ಬಗ್ಗೆ ಸದಸ್ಯರು ಆಕ್ಷೇಪಣೆ ವ್ಯಕ್ತಪಡಿಸಿದ ನಿನ್ನೆಲೆಯಲ್ಲಿ ಸಾಮಾನ್ಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಮುಂದೂಡಲಾಯಿತು. ಈ ಸಂದರ್ಭದಲ್ಲಿ ಸದಸ್ಯ ಬಿ.ಆರ್.ಭಾಸ್ಕರ್ ಮಾತನಾಡಿ, ಅಧ್ಯಕ್ಷರು ಕಳೆದ ೮ ತಿಂಗಳಿAದ ಪುರಸಭೆ ಸದಸ್ಯರ ಸಾಮಾನ್ಯ ಸಭೆ ನಡೆಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಪುರಸಭೆ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಶಾಸಕ ಕೆ.ಆರ್.ರಮೇಶ್ ಕುಮರ್ ಅವರು ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತಂದರೂ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್‌ಗೆ ಅನುಮೋದನೆ ನೀಡುತ್ತಿಲ್ಲ ಎಂದು ದೂರಿದರು. ಸದಸ್ಯ ಶಬ್ಬೀರ್ ಮಾತನಾಡಿ, ೧೬ನೇ ವಾರ್ಡ್ನಲ್ಲಿ ಒಳಚರಂಡಿ ನೀರು ಕುಡಿಯುವ ನೀರಿನೊಂದಿಗೆ ಬೆರೆಯುತ್ತಿದೆ. ಇದರಿಂದ ನಾಗರಿಕರ ಆರೋಗ್ಯ ಕೆಡುತ್ತಿದೆ. ಕೂಡಲೆ ಒಡೆದಿರುವ ಪೈಪ್‌ಗಳನ್ನು ತೆಗೆದು ಹೊಸ ಪೈಪ್ ಅಳವಡಿಸಬೇಕು ಎಂದು ಎಂದು ಆಗ್ರಹಿಸಿದರು. ಅಧ್ಯಕ್ಷರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಾಮ ನಿರ್ದೇಶಿತ ಸದಸ್ಯ ರಾಮಾಂಜಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ರೂ.೧೫ ಕೋಟಿ ಅನುದಾನ ತರಲಾಗಿದೆ. ನಗರೋತ್ಥಾನ ಯೋಜನೆಯಡಿ ೮.೫೦ ಕೋಟಿ ಮಂಜೂರಾಗಿದೆ. ಈ ಹಣವನ್ನು ಉದ್ದೇಶಿತ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಕೋರಿದರು. ಮಾತಿನ ಚಕಮಕಿ ನಡುವೆ ಹೆಚ್ಚು ಚರ್ಚೆ ಇಲ್ಲದೆ ರೂ೨೮,೬೨೦೦೦ ಉಳಿತಾಯ ಬಜೆಟ್‌ಗೆ ಸಭೆ ಅನುಮೋದನೆ ನೀಡಿತು. ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಕಂದಾಯ ನಿರೀಕ್ಷರಾದ ವಿ.ನಾಗರಾಜು, ಶಂಕರ್, ಫಾತಿಮಾ .ನಾಗೇಶ್ .ಪ್ರತಾಪ್.ಶ್ರೀನಾಥ್. ಸದಸ್ಯರಾದ.ಕೆ.ಅನ್ನೀಸ್ ಅಹಮದ್. ಸಂಜಯ್ ಸಿಂಗ್. ಮುನಿರಾಜು ಸದ್ತಾರ್.ನಾಗರಾಜ್.ಅಪೋರ್.ರಾಜು.ಅನಂದ್.ಶಬ್ಬೀರ್.ಬಾಬಜಾನ್. ಶಾಂತಮ್ಮ. ಜಯಲಕ್ಷ್ಮಿ.ರಾಮಾಂಜಿ .ನಲ್ಲಪಲ್ಲಿ .ರೆಡ್ಡಪ್ಪ.ರಮೇಶ್. ಜಯಣ್ಣ.ಷೇಕ್ ಷಫ್ತಿಉಲ್ಲ.ಇದ್ದರು.