ಗ್ರಹಘತಿ ಸರಿಯಿಲ್ಲವೆಂದು ಎಳೆ ಮಗುವನ್ನು ಜಲಾಶಯಕ್ಕೆ ಎಸೆದು ಕೊಂದ ಪಾತಕಿ ಸ್ವಂತ ತಾಯಿ

JANANUDI.COM NETWORK

ಚಿತ್ರ ಎರವಲು (ಸಾಂದರ್ಭಿಕ)

ದಿಂಡಿಗಲ್ ; ಇವತ್ತು ಪ್ರಪಂಚ ವಿಜ್ಞಾನದಲ್ಲಿ ಇಷ್ಟು ಮುಂದುವರೆದಿಯಾದರೂ, ಭಾರತದಲ್ಲಿ ಶಿಕ್ಷಣ ಇದ್ದರೂ, ಜ್ಞಾನದ ಕೊರತೆಯಿಂದ ಮೂಢ ನಂಬಿಕೆಗೆ ಮರುಳಾಗಿ, ರಾಶಿ, ಭವಿಷ್ಯ, ಗ್ರಹಘತಿಗಳು ಎಂದು ಭಾರತದಲ್ಲಿ ಇನ್ನೂ ನಂಬಿಕೆಗೆ ಅನರ್ಹವಾದ ಶೋಚನೀಯ ಘಟನೆಗಳು ನಡೆಯುತ್ತಲೇ ಇವೆ.
ತಮಿಳುನಾಡಿನ ಮಹಿಳೆಯಬ್ಬಳು ಮೂಢನಂಬಿಕೆಗೆ ಮರುಳಾಗಿ,ತನ್ನ ಮಗುವನ್ನು ಜಲಾಶಯಕ್ಕೆ ಎಸೆದುಕೊಂದ ಘಟನೆ ನಡೆದಿದೆ. ತಮಿಳುನಾಡಿನ ದಿಂಡಿಗಲ್ ನಲ್ಲಿ ಈ ಘಟನೆ ನಡೆದಿದ್ದು, ಲತಾ ಹಾಗೂ ಮಹೇಶ್ವರನ್ ಅವರಿಗೆ ನಾಲ್ಕು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಮಗುವಿಗೆ ಗೋಕುಲ್ ಎಂದು ಹೆಸರಿಟ್ಟಿದ್ದರು. ಇತ್ತ ಲತಾಗೆ ಮಗುವಿನ ರಾಶಿ, ಭವಿಷ್ಯ ಗ್ರಹಘತಿಗಳದ್ದೇ ಚಿಂತೆ ಕಾಡುತಿತ್ತು. ಹೀಗಾಗಿ ಆಕೆ ವಿಚಿತ್ರವಾಗಿ ವರ್ತಿಸುತಿದ್ದಳು. ಎಂದು ಹೇಳಲಾಗುತ್ತದೆ.
ಮಗುವಿನ ಗ್ರಹಘತಿ ಚೆನ್ನಾಗಿಲ್ಲವೆಂದು ಯೋಚಿಸಿ ಈ ಹೀನ ಕ್ರತ್ಯ ಮಾಡಿದ ಮಹಿಳೆಗೆ ಈಗ ತನ್ನ ಮಗುವಿನ ಗ್ರಹಘತಿ ಸರಿಯಿಲ್ಲವೋ ಅಥವ ತನ್ನ ಗ್ರಹಘತಿ ಸರಿ ಇರಲಿಲ್ಲವೋ ಎಂದು ಚಿಂತಿಸುವ ಕಾಲ ಬಂದಿದೆ. ಯಾಕೆಂದರೆ ಇವಳಿಗೀಗ ಕೊಲೆ ಆರೋಪದಲ್ಲಿ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ.