ಕುಂದಾಪುರ, ಮಾ.19: ಇಲ್ಲಿನ ಕಾರ್ಮೆಲ್ ಸಂಸ್ಥೆಯ ಕಾರ್ಮೆಲ್ ಧರ್ಮಭಗಿನಿಯರು ಸಂತ ಜೋಸೆಫರಿಗೆ ಸಮರ್ಪಿಸಲ್ಪಟ್ಟ ಕಾನ್ವೆಂಟ್ ಮತ್ತು ವಿದ್ಯಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಾರೆ ದಿನಾಂಕ 19 ರಂದು ಸಂತ ಜೋಸೆಫರ ಹಬ್ಬದಂದು ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು.
Dಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಧಾನ ಗುರುಗಳಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಧರ್ಮಭಗಿನಿಯರಿಗೆ ಶುಭ ಕೋರಿದರು.
ಕಟ್ಕರೆ ಬಾಲ ಯೇಸುವಿನ ಮುಖ್ಯಸ್ಥರಾದ ವಂ|ಆಲ್ವಿನ್ ಸಿಕ್ವೇರಾ “ಯೇಸುವಿನ ಪಿತ ಸಂತ ಜೋಸೆಫ್ ದೇವರ ದಾಸನಾಗಿದ್ದನು, ಒಂದು ಕತ್ತೆ ಪ್ರಮಾಣಿಕವಾಗಿ ಮಾಲೀಕನ ಹೊರೆಗಳನ್ನು ಹೊರುತ್ತದೋ, ಹಾಗೆ ಅವನು ದೇವರ ಅಪ್ಪಣೆ ಮತ್ತು ಮಾತುಗಳು ತನಗೆ ಹೊರೆಯಾದರೂ, ಪ್ರಮಾಣಿಕವಾಗಿ ಆ ಹೊರೆಗಳನ್ನು ಹೊತ್ತು ಯೇಸುವನ್ನು ಮತ್ತು ಆತನ ತಾಯಿಯನ್ನು ಹಲವು ಗಂಡಾಂತರಗಳಿಂದ ಕಾಪಾಡಿದ ದೇವದಾಸನಾಗಿದ್ದಾನೆ ಸಂತ ಜೋಸೆಫನು, ನಾವು ಕೂಡ ಅವನಂತೆ ಪರರ ಕಶ್ಟ ದುಖಗಳ ಹೊರೆಗಳನ್ನು ಹೊರಲು ಸಿದ್ದರಿರಬೇಕು” ಎಂದು ಸಂದೇಶ ನೀಡಿದರು.
ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೇಜೆಸ್ ಸಹಬಲಿದಾನವನ್ನು ಅರ್ಪಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಧರ್ಮಭಗಿನಿ ಸಂಗೀತ ವಂದಿಸಿದರು.