15 ಸಾವಿರ ಶಿಕ್ಷಕರ ನೇಮಾಕಾತಿ: ವಿವರಣೆ ನೀಡಿದ ಸಚಿವ ಬಿ.ಸಿ.ನಾಗೇಶ್

JANANUDI.COM NETWORK

ಬೆ೦ಗಳೂರು: 15000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.
ಬೆ೦ಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1-8ನೇ ತರಗತಿ ಶಾಲೆಗಳಲ್ಲಿ 36,000 ಶಿಕ್ಷಕರ ಕೂರತೆಯಿದೆ. ಅದರಲ್ಲಿ 21 ಸಾವಿರ ಗಣಿತ ಶಿಕ್ಷಕರ ಕೊರತೆ ಇದೆ ಎಂದು ತಿಳಿಸುತ್ತಾ, ಹೀಗಾಗಿ ಉತ್ತಮ ಗುಣಮಟ್ಟದ ಶಿಕ್ಷಣಕಕ್ಕಾಗಿ ಶಿಕ್ಷಕರ ನೇಮಕಾತಿಗೆ ಇಲಾಖೆ ಮುಂದಾಗಿದೆ ಎ೦ದರು.
ಹೈದರಾಬಾದ್‌-ಕರ್ನಾಟಕ ಭಾಗಕ್ಕೆ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದ್ದು, ಉಳಿದೆಡೆ. 10 ಸಾವಿರ ಶಿಕ್ಷಕರ ನೇಮಕಾತಿಗೆ ನಿರ್ಧರಿಸಲಾಗಿದೆ. ಗಣಿತ ಶಿಕ್ಷಕರ ನೇಮಕಾತಿಗಾಗಿ ಮಾರ್ಚ್‌ 23ರರಿ೦ದ ಆನ್‌ ಲೈನ್‌ ನಲ್ಲಿ ಅರ್ಜಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್‌ 23 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಮೇ21 ಹಾಗೂ 22ರಂದು ಶಿಕ್ಷಕರಿಗೆ ಪರೀಕ್ಷೆ ನಿಗದಿಯಾಗಿದೆ. ಈ ಬಾರಿ ಎ೦ಜಿನಿಯರಿ೦ಗ ಪದವಿಧರರು ಕೂಡ ಗಣಿತ ಶಿಕ್ಷಕರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆ 400 ಅ೦ಕಗಳಲ್ಲಿ ನಡೆಯಲಿದ್ದು, ಮೊದಲ ಪತ್ರಿಕೆ ಜನರಲ್‌ ಪೇಪರ್‌-150 ಅಂಕ ನಿಗದಿಯಾಗಿದೆ. 2ನೇ ಪತ್ರಿಕೆ ವಿಷಯವಾರು- 150 ಮಾರ್ಕ್‌ ಇದ್ದು. ಪಾಸ್‌ ಆಗಲು 45 ಮಾರ್ಕ್ಸ್‌ ಕಡ್ಡಾಯ. 3 ನೇ ಪತ್ರಿಕೆ ಭಾಷಾವಾರು ಪರೀಕ್ಷೆಯಾಗಿದ್ದು,100 ಅಂಕಗಳಿಗೆ ಪರೀಕ್ಷೆ ನಡಯಲಿದೆ.
ಪಾಸ್‌ ಆಗಲು 50 ಮಾರ್ಕ್ಸ್‌ ಕಡ್ಡಾಯವಾಗಿದೆ ಎ೦ದು ವಿವರಣೆ ನೀಡಿದರು.