ಮಾರ್ಚ್ ಆರಂಭದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಸಾಧ್ಯತೆ

JANANUDI.COM NETWORK

ಬೆಂಗಳೂರು, ಫೆ.28: ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಅಂದರೆ ಮಾರ್ಚ್ 1ರಂದು ಈ ವರ್ಷದಲ್ಲಿ ಮೊದಲ ಭಾರಿಯಾಗಿ ವಾಯುಭಾರ ಕುಸಿತವು ಬಂಗಾಳಕೂಲ್ಲಿಯಲ್ಲಿ ಉಂಟಾಗುವ ಲಕ್ಷಣಗಳಿದ್ದು ಶ್ರೀಲಂಕಾ ಅಥವಾ ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ.ಎಂದು ಹವಮಾನ ಇಲಾಖೆ ತಿಳಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ  ಮಾರ್ಚ್ 3ರಂದು ತಮಿಳುನಾಡಿನಾದ್ಯಂತ ಭಾರಿ ಮಳೆಯಾಗಲಿದ್ದು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಭಾಗಗಳಲ್ಲಿ ಸಹ ಇದರ ಪರಿಣಾಮವಾಗಿ ಮಳೆಯಾಗಲಿದ್ದು,ಮಾರ್ಚ್ 7ರ ತನಕ ಕೇರಳ ಹಾಗೂ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯ ಸಾಧ್ಯತೆ ಇದೆಯೆಂದು ತೀಳಿಸಿದೆ.