JANANUDI.COM NETWORK
ಎಂಐಟಿ ಕುಂದಾಪುರದ ಎಂಬಿಎ ವಿದ್ಯಾರ್ಥಿಗಳು ಸಿದ್ಧಪಡಿಸಿದ “ಜನತಾ ಗ್ರೂಪ್‌ಗಾಗಿ ಸಾಮರ್ಥ್ಯ ಆಧಾರಿತ ಸಂದರ್ಶನಕ್ಕಾಗಿ ಪ್ರಶ್ನಾವಳಿ” ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು 25 ಫೆಬ್ರವರಿ 2022 ರಂದು ಕೋಟಾದ ಜನತಾ ಗ್ರೂಪ್‌ನಲ್ಲಿ ನಡೆಯಿತು./ ಜನತಾ ಗ್ರೂಪ್ ಕೋಟ ಇದರ ಸಿಇಒ, ಡಾ.ಧಾನೇಶ್ ಜೇವಾನಿ, ಸಿಎಫ್‌ಒ ಅಶ್ವಥ್ ಶೆಟ್ಟಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಎಂ.ಎಸ್. ಕೃಷ್ಣ, ಪ್ರಮೋಟರ್ ಗಳಾದ ಶ್ರೀ ಪ್ರಶಾಂತ್ ಕುಂದರ್, ಶ್ರೀ ರಕ್ಷಿತ್ ಕುಂದರ್, ಕಾರ್ಖಾನೆಯ ಉಸ್ತುವಾರಿ ಶ್ರೀ ಶ್ರೀನಿವಾಸ ಕುಂದರ್, ಮೂಡ್ಲಕಟ್ಟೆ ಕಾಲೇಜಿನ ಶೈಕ್ಷಣಿಕ ವಿಭಾಗದ ಡೀನ್ ಹಾಗೂ ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಪ್ರತಿಭಾ ಎಂ. ಪಟೇಲ್, ಉದ್ಯೋಗ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಅಮೃತಮಾಲಾ, ಜನತಾ ಗ್ರೂಪ್‌ನ ಅನೇಕ ಸಿಬ್ಬಂದಿಗಳು ಮತ್ತು ಪ್ರೊಜೆಕ್ಟ್ ನಿರ್ವಹಿಸಿದ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜನತಾ ಗ್ರೂಪ್‌ನ ಎಚ್‌ಆರ್ ಶ್ರೀ ಆತ್ಮ ಶಾಮನೂರು ಅವರು ನಿರ್ವಹಿಸಿದರು./ಈ ಉಪಯುಕ್ತ ಪುಸ್ತಕವನ್ನು ಸಿದ್ಧಪಡಿಸುವಲ್ಲಿ ಎಂಐಟಿ ಕುಂದಾಪುರ ಎಂಬಿಎ ವಿಭಾಗದ ಹಳೆ ವಿದ್ಯಾರ್ಥಿಗಳಾಗಿ ಪ್ರಸ್ತುತ ಜನತಾ ಗ್ರೂಪ್ ನ ಉದ್ಯೋಗಿಗಳಾಗಿರುವ ಅನಂತ್ ನಾಯಕ್, ಅಸರ್ ಮೊಹಮ್ಮದ್, ಸುದೇಷ್ಣ ಶೆಟ್ಟಿ ಹಾಗೂ ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳಾದ ಹರೀಶ್ ಹೊಳ್ಳ ಕೆ, ನಾಗಶ್ರೀ ಹೆಗ್ಡೆ, ಪೂರ್ಣಿಮಾ ಆರ್ ಶೆಟ್ಟಿ, ಪ್ರಸಾದ್ ಕೆಪಿ, ಶಬೀನಾ, ಸುಶ್ಮಿತಾ ಎಂ, ಸುಶ್ಮಿತಾ ಎಸ್ ಮತ್ತು ಶ್ರೀಮತಿ ವಿಜೇತಾ ರೆಡ್ಡಿ ಇವರುಗಳು ಕೊಡುಗೆ ನೀಡಿರುತ್ತಾರೆ. / ಈ ಪುಸ್ತಕವನ್ನು ಜನತಾ ಗ್ರೂಪ್ ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಂ. ಎಸ್ ಕೃಷ್ಣ , ಕಾಲೇಜಿನ ಡೀನ್ ಡಾ. ಪ್ರತಿಭಾ ಎಂ. ಪಟೇಲ್ ಹಾಗೂ ಶ್ರೀಮತಿ ಅಮೃತಮಾಲಾ ಇವರುಗಳ ಮಾರ್ಗದರ್ಶನದಲ್ಲಿ ಸಿದ್ದಪಡಿಸಲಾಯಿತು.