ಬುರ್ಕಾ, ನಿಕಾಬ್ ತೆಗೆಯುತ್ತೇವೆ ಹಿಜಾಬ್ ತೆಗೆಯುವುದಿಲ್ಲ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಿ ಮುಸ್ಲಿಂ ವಿದ್ಯಾರ್ಥಿಗಳ ಆಗ್ರಹ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ :ನಾವು ಬುರ್ಕಾ ಹಾಗೂ ನಿಕಾಬ್ ತೆಗೆದು ತರಗತಿಗಳಿಗೆ ಹಾಜರಾಗುತ್ತೇವೆ . ಆದರೆ , ಹಿಜಾಬ್ ತೆಗೆಯುವುದಿಲ್ಲ . ನಮಗೆ ಹಿಜಾಬ್ ಮತ್ತು ಶಿಕ್ಷಣ ಎರಡೂ ಬೇಕಾಗಿದ್ದು , ತರಗತಿ ಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಬೇಕೆಂದು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಆಗ್ರಹಿಸಿದರು .
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈನಾ ಕೌಸರ್ , ಬುರ್ಕಾ , ನಿಕಾಬ್ ತೆಗೆದರೆ ನಮ್ಮ ಮುಖ ಗುರುತು ಸಿಗುತ್ತದೆ . ಆದರೆ , ಕೂದಲು ಕಾಣದಂತೆ ಹಿಜಾಬ್ ಧರಿಸುತ್ತೇವೆ . ಯಾವುದೇ ಕಾರಣಕ್ಕೂ ಹಿಜಾಬ್ ಮಾತ್ರ ತೆಗೆಯುವುದಿಲ್ಲ . 12 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂದು ಕುರಾನ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ . ಹೀಗಾಗಿ ಪೋಷಕರು ಹೇಳಿದರೂ ನಾವು ತೆಗೆಯುವುದಿಲ್ಲ ಎಂದರು . ಕಳೆದ 10 ದಿನಗಳಿಂ ದಲೂ ಪ್ರತಿದಿನವೂ ಕಾಲೇಜಿನ ಬಳಿ ಹೋಗುತ್ತಿದ್ದು , ಪ್ರಾಂಶುಪಾಲರು ಸರಿಯಾಗಿ ಮಾತನಾಡುತಿಲ್ಲ . ಪೊಲೀಸರು ಅಸಭ್ಯವಾಗಿ ವರ್ತಿಸುತ್ತಾರೆ . ಪರೀಕ್ಷೆ ಸಮಯದಲ್ಲಿ ಹೀಗೆ ಆದರೆ ಪರಿಸ್ಥಿತಿ ಏನಾಗಬಹುದು ಎನ್ನುವ ಆತಂಕ ಮನೆ ಮಾಡಿದೆ .
ಕಾಲೇಜಿನ ಸಿಡಿಸಿ ಯಲ್ಲಿ ಏನಿದೆಯೋ ನಮಗೆ ಹೇಳುತಿಲ್ಲ . ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು , ಸಿಡಿಸಿ ಯನ್ನು ನೋಡಿಕೊಂಡು ಹೋಗಿ ಎಂದು ಹೇಳಿದ್ದಾರೆ . ಆದರೆ ಪ್ರಾಂಶುಪಾಲರು ಮಾತ್ರ ತೋರಿಸುತ್ತಿಲ್ಲ ಎಂದು ದೂರಿದರು
ಪ್ರಥಮ ಪಿಯುಸಿಯಲ್ಲಿ ಸುಮಾರು 30 ಮಂದಿಯ ಪೈಕಿ 5 ಮಂದಿ ಮಾತ್ರವೇ ಹಿಜಾಬ್ ತೆಗೆದು ತರಗತಿಗೆ ಹಾಜರಾಗುತ್ತಿದ್ದಾರೆ . ಅದು ಅವರ ವೈಯಕ್ತಿಕ ವಿಚಾರ , ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗಾದರೂ ನಮಗೆ ಹಿಜಾಬ್ ಧರಿಸಿ ಕೊಂಡು ಹೋಗಲು ಅವಕಾಶ ನೀಡಲಿ ಎಂದು ಮನವಿ ಮಾಡಿದರು .ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ಸುಮಯಾ , ಫಿರ್ದೋಸ್ , ಹರ್ಷಿಯಾ , ಮಿಸ್ಬಾ ಮತ್ತಿತರರಿದ್ದರು