ಬೈಂದೂರು ಸಂಚಾಲ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಉದ್ಘಾಟನೆ

JANANUDI.COM NETWORK


ಬೈಂದೂರು, ಫೆ.19 : ಈ ಇಪ್ಪತ್ತೊಂದನೇ ಶತಮಾನವನ್ನು ಭಾರತೀಯ ಶತಮಾನ ಎಂಬ ಮಾತಿದೆ ಅದರಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡುತ್ತಿದ್ದೇವೆ, ನ್ಯಾಯಾಲಯಗಳು ಜನಸ್ನೇಹಿಯಾಗಿ ಇಂದು ವರ್ಚವಲ್ ನ್ಯಾಯಲಯವನ್ನು ಈ ಕೋವಿಡ್ ಸಂದರ್ಭದಲ್ಲಿ ನೆಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇಂಟರ್ನೆಟ್ ಸೌಲಭ್ಯಗಳು, ಸಾಮಾಜಿಕ ಜಾಲತಾಣಗಳು ಜನರಿಗೆ ಪೂರಕದ ಜೊತೆಗೆ ಮಾರಕವು ಆಗಿದೆ ಏಕೆಂದರೆ ಅನೇಕ ರೀತಿಯ ಕ್ರಿಮಿನಲ್ ಚಟುವಟಿಗೆಗಳು ಈ ಇಂಟರ್ ನೆಟ್ ಸೌಲಭ್ಯದಿಂದ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ.
ಗೌರವನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅಬ್ದುಲ್ ನಝೀರ್ ಅವರು ದೇಶದ ಪ್ರಮುಖ ವಿಷಯಗಳಾದ ಶ್ರೀ ರಾಮ ಜನ್ಮ ಭೂಮಿ, ತ್ರಿವಳಿ ತಲಾಕ್ ವಿಚಾರದಲ್ಲಿ ನ್ಯಾಯಾಲಯದಲ್ಲಿ ತೀರ್ಪುನ್ನು ನೀಡಿದ್ದಾರೆ ಅವರು ನಮ್ಮ ಕ್ಷೇತ್ರಕ್ಕೆ ಬಂದಿರುವುದು ನಮ್ಮ ಹೆಮ್ಮೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು. ಬೈಂದೂರಿನ ಮಯ್ಯಾಡಿಯಲ್ಲಿ ದಿನಾಂಕ: 19ನೇ ಫೆಬ್ರವರಿ, 2022ರಂದು ಉಡುಪಿ ಜಿಲ್ಲಾ ನ್ಯಾಯಾಂಗ,ಲೋಕೋಪಯೋಗಿ ಇಲಾಖೆ,ವಕೀಲರ ಸಂಘ, ಬೈಂದೂರು ಇವರ ಸಂಯುಕ್ತಾಶ್ರಯದಲ್ಲಿ ನೂತನವಾಗಿ ನಿರ್ಮಿಸಿದ ಬೈಂದೂರು ಸಂಚಾಲ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೌರವನ್ವಿತ ನ್ಯಾಯಮೂರ್ತಿಗಳು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಉದ್ಘಾಟಿಸಿ ಮಾತನಾಡಿ ” ರಾಷ್ಟ್ರೀಯ ಹೆದ್ದಾರಿಗೆ ಹತ್ತಿರವಾಗಿ ಎರಡು ವರೆ ಜಾಗವನ್ನು ಹಾಗೂ ಹಣವನ್ನು ಮಿಸಲಿಟ್ಟಿದ್ದಾರೆ, ಅಲ್ಲಿ ಶಾಶ್ವತವಾದ ಕಟ್ಟಡದ ಶೀಘ್ರವಾಗಿ ಉದ್ಘಾಟನೆಯನ್ನು ಕೂಡ ಇಲ್ಲಿರುವ ಮುಖ್ಯ ಅತಿಥಿಗಳು ಬಂದು ನೆರವೇರಸಬೇಕಿದೆ. ಬಾರ್ ಕೌನ್ಸಿಲ್ ಕಟ್ಟಡ, ಲೈಬ್ರರಿ ಮತ್ತು ಇನ್ನಿತರ ವ್ಯವಸ್ಥೆಗೆ ಆದ್ಯತೆಯಮೇರೆಗೆ ಸರ್ಕಾರದ ಸಹಾಯದಿಂದ ಮಾಡುವ ಕೆಲಸ ಮಾಡುತ್ತೇನೆ, ಈ ಬೈಂದೂರು ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ಕೊಟ್ಟಿದಾರೆ ಇಂದು ನಾನು ಅವರ ಕೆಲಸ ಮಾಡಲು ಸದಾ ಜನತೆಯ ಜೊತೆಗೆ ಇದ್ದು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಸ್. ಅಬ್ದುಲ್ ನಝೀರ್.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ರಿತು ರಾಜ್ ಅವಸ್ಥಿ.
ಉಡುಪಿ ಜಿಲ್ಲೆಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ
ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ರಂಗಸ್ವಾಮಿ ನಟರಾಜ್.
ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿಗಳಾದ ಶ್ರೀ ಟಿ.ಜಿ. ಶಿವಶಂಕರೇಗೌಡ,
ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಶ್ರೀ ಉದಯ ಹೊಳ್ಳ,
ಉಡುಪಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸುಬ್ರಮಣ್ಯ ಜೆ.ಎನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.