ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ಪ್ರತಿಭಟನೆ ತೀವ್ರತೆ – ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ

JANANUDI.COM NETWORK

ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ಕೆನಡಾದಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಶಮನಗೊಳಿಸಲು ಪ್ರಧಾನಿ ಜಸ್ಟಿನ್‌ ಟ್ರುಡೊ ಕೋವಿಡ್‌ ನಿರ್ಬಂಧಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಇದನ್ನು ತಡೆಯುವ ನಿಟ್ಟಿನಲ್ಲಿ ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಗೊಳಿಸಿದೆ.
ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಸರ್ಕಾರಕ್ಕೆ ಅಲ್ಪಾಧಿಯಲ್ಲಿ ಹೆಚ್ಚಿನ ಅಧಿಕಾರ ದೊರೆಯಲಿದೆ. ಸಾರ್ವಜನಿಕ ಸಭೆಯನ್ನು ನಿಷೇಧಿಸುವ, ನಿರ್ದಿಷ್ಟ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ನಿರ್ಬಂಧಿಸುವ, ಕಾನೂನು ಸುವ್ಯವಸ್ಥೆಯನ್ನು ಸ್ಥಾಪಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಆಯ್ಕೆಗಳು ಸರ್ಕಾರಕ್ಕೆ ಇರಲಿದೆ.
ಆದರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿಡಲು ಸರ್ಕಾರ ಈ ಕಾನೂನನ್ನು ಬಳಸುವುದಿಲ್ಲ ಎಂದೂ ಟ್ರುಡೋ ಸರ್ಕಾರ ಸ್ಪಷ್ಟಪಡಿಸಿದೆ.
ಕೆನಡಾದಲ್ಲಿ 1988ರಲ್ಲಿ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಕ್ವಿಬೆಕ್‌ನಲ್ಲಿನ ಭಯೋತ್ಪಾದನಾ ಬಿಕ್ಕಟ್ಟನ್ನು ತಡೆಯಲು ಟ್ರುಡೊ ಅವರ ತಂದೆ, ಪ್ರಧಾನಿ ಪಿಯರೆ ಎಲಿಯಟ್‌ ಟ್ರುಡೊ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದರು. ಅದಾದ ನಂತರ, ಎರಡನೇ ಬಾರಿಗೆ ಮಗ ಟ್ರುಡೊ ಅವರೂ ತುರ್ತು ಪರಿಸ್ಥಿತಿ ಜಾರಿಗೆ ತಂದಿದ್ದಾರೆ.
ಪೊಲೀಸರು ವಿಫಲರಾಗಿದ್ದಾರೆ ಎಂದು ದೇಶದಾದ್ಯಂತ ಅಸಮಾಧಾನ ವ್ಯಕ್ತವಾಗಿದೆ. ಟ್ರುಡೋ ಸರ್ಕಾರ ಪ್ರತಿಭಟನೆಗಳನ್ನು ತಡೆಯಲು ಆರಂಭದಲ್ಲೇ ಕಾರ್ಯಪ್ರವೃತ್ತವಾಗಬೇಕಾಗಿತ್ತು ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಸೋಮವಾರದಂದು ಕೆನಡಾದ ಪ್ರಧಾನಿ ಅತಿ ವಿರಳ ಎನಿಸುವ ಕಾನೂನು ಕ್ರಮ ಕೈಗೊಂಡಿದ್ದಾರೆ. ದೇಶದಲ್ಲಿ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದಿದ್ದಾರೆ.