ವಕ್ಸ್ ಬೋರ್ಡ್ ನಿಂದ ಸೌಲಭ್ಯಗಳನ್ನು ಬಳಕೆ ಮಾಡಿ ಕೊಂಡು ಅಲ್ಪ ಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು :ಕೆ.ಆರ್ ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ವಕ್ಸ್ ಬೋರ್ಡ್ ನಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮಸೀದಿ , ಈದ್ಯಾ , ಸ್ಮಶಾನಗಳನ್ನು ಅಭಿವೃದ್ಧಿಪಡಿಸಿಕೊಂಡು ಅಲ್ಪ ಸಂಖ್ಯಾತ ಬಂದುಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಶಾಸಕ ಕೆ.ಆರ್ ರಮೇಶ್ ಕುಮಾರ್ ರವರು ತಿಳಿಸಿದ್ದಾರೆ . ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಅಲ್ಪ ಸಂಖ್ಯಾತರ ಸಭೆಯಲ್ಲಿ ರಮೇಶ್ ಕುಮಾರ್‌ ಮಾತನಾಡಿ ಪಟ್ಟಣ ಮತ್ತು ತಾಲ್ಲೂಕಿನ ಬಹುತೇಕ ಮುಸ್ಲಿಂ ಸಮಾಜ ವಿರುವ ಹಳ್ಳಿಗಳಲ್ಲಿ ಮಸೀದಿ , ಸ್ಮಶಾನ , ಈದ್ದಾ , ದರ್ಗಾ ಪ್ರಾರ್ಥನಾ ಮಂದಿರಗಳಿಗೆ ಈಗಾಗಲೇ ಅನುದಾನವನ್ನು ಬಿಡುಗಡೆ ಮಾಡಿದ್ದು ಕೆಲವು ಕಾಮಗಾರಿಗಳು ಪೂರ್ಣವಾಗಿದ್ದು ಕೆಲವು ಪ್ರಗತಿಯಲ್ಲಿದ್ದು ಬಾಕಿ ಇರುವ ಕೆಲಸಗಳ ಮಾಹಿತಿಯನ್ನು ಪಡೆದು ತಗಲುವ ವೆಚ್ಚವನ್ನು ಶೀಘ್ರವೇ ಸರ್ಕಾರದಿಂದ ಬಿಡುಗಡೆ ಮಾಡಿಸಿ ಮುಸ್ಲಿಂ ಮುದಾಯಕ್ಕೆ ಹೆಚ್ಚು ಹೊತ್ತು ನೀಡಲು ಬದ್ಧನಾಗಿದ್ದೇನೆ ಎಂದರು . ಜೊತೆಗೆ ಪಟ್ಟಣದ ಮುಸ್ಲಿಂ ಸಮಾಜದ ವಾರ್ಡಗಳು ಮತ್ತು ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ ಬೀದಿ ದ್ವೀಪ , ಕುಡಿಯುವ ನೀರು , ರಸ್ತೆ- ಚರಂಡಿ ಇವೆಲ್ಲವೂ ಪೂರ್ಣಪ್ರಮಾಣದಲ್ಲಿ ಆಗಬೇಕು ನಿಮ್ಮ ಬೇಡಿಕೆ ಯಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುತ್ತೇನೆ , ಜೊತೆಗೆ ರೇಷ್ಮೆ ನೇಕಾರರಿಗೆ ಮತ್ತು ಗುಡಿ ಕೈಗಾರಿಕೆ ಮಾಡುವವರಿಗೆ ಬ್ಯಾಂಕಿನ ಮೂಲಕ ಸಾಲ ನೀಡುವ ವ್ಯವಸ್ತೆಯನ್ನು ಮಾಡಿಸುತ್ತೇನೆ ಇವುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬುವುದು ನನ್ನ ಗುರಿಯಾಗಿದೆ ಎಂದರು . ವಿಧಾನಪರಿಷತ್ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ ನಮ್ಮ ಮುಸ್ಲಿಂ ಸಮಾಜ ಬೆಳಕಿಗೆ ಬರಲು ಬೆನ್ನೆಲಬಾಗಿ ನಿಂತಿರುವುದು ಈ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಏಕೈಕವಾಗಿದ್ದು , ವಿಶೇಷವಾಗಿ ನಮ್ಮ ದರ್ಮದ ಸಿದ್ಧಾಂತಗಳನ್ನು ಅರಿತು ಸದಾ ನಮ್ಮ ಶ್ರೇಯಸ್ಸಿಗೆ ಶ್ರಮಿಸುವ ದೀಮಂತ ನಾಯಕ ಕೆ.ಆರ್ ರಮೇಶ್ ಕುಮಾರ್ ರವರಾಗಿದ್ದು ಇವರಿಗೆ ನಮ್ಮ ಸಮಾಜ ಸದಾ ಬೆಂಬಲವಾಗಿ ನಿಂತು ಅವರ ಕೈಬಲಪಡಿಸಲು ನಾವೆಲ್ಲರೂ ಒಂದಾಗೋಣ ಎಂದರು . ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ .ಶ್ರೀನಿವಾಸನ್ ಮಾತನಾಡಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ನಮ್ಮಜೊತೆ ಅಣ್ಣ ತಮ್ಮಂದಿರಹಾಗೆ ಬೆರೆತು ಜೀವನ ಸಾಗಿಸುತ್ತಿರುವ ಮುಸ್ಲಿಂ ಬಾಂದವರು ಅವರ ಬದುಕು ಹಸನಾಗಿಸಿಕೊಳ್ಳಲು ಅನೇಕ ವ್ಯಾಪಾರ , ವ್ಯವಸಾಯ ಗಳನ್ನು ಮಾಡಿಕೊಂಡು ಬದುಕುತ್ತಿದ್ದ ನಿಮಗೆ ಬಿಜೆಪಿ ಸರ್ಕಾರ ಬಂದಾಗಿನಿಂದ ಸಂಕಷ್ಟಕ್ಕೆ ಸಿಲುಕಿದ್ದೀರ ಮುಂದೆ ನಿಮ್ಮ ಜೀವನ ಹೇಗಿರಬೇಕು ಎಂಬುದು ನಿಮ್ಮ ಕೈಯಲ್ಲಿದೆ , ಈ ದೇಶದಲ್ಲಿ ದಲಿತರು ಮತ್ತು ಮುಸ್ಲಿಮರು ಒಂದಾದಾಗ ಮಾತ್ರ ನಮ್ಮನ್ನು ಯಾರೂ ಏನೂ ಮಾಡಲಾಗುವುದಿಲ್ಲಾ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಷ್ಟಗಳನ್ನು ಅನುಭವಿಸುವ ಮೊದಲೇ ಹೆಚ್ಚೆತ್ತುಕೊಂಡು ನಾವು ಒಂದಾಗಬೇಕು ಎಂದು ಕಿವಿಮಾತು ತಿಳಿಸಿದರು . ರಾಜ್ಯ ವಕ್ಸ್ ಬೋರ್ಡ ಮಂಡಳಿ ಸದಸ್ಯ ರಿಯಾಜ್ ಅಹಮದ್ ಖಾನ್ ಮಾತನಾಡಿ ನಮ್ಮ ಬೋರ್ಡ ನಿಂದ ಬರುವ ಆದೇಶಗಳನ್ನು ನಮ್ಮ ಮಸೀದಿಗಳಲ್ಲಿ ನಿಯಮ ನಿಷ್ಠೆಯಿಂದ ಪಾಲಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಅನುವು ಮಾಡಿಕೊಡಬಾರದು , ತಾಲ್ಲೂಕು ಕಮಿಟಿ ಸದಸ್ಯ ಮಂಡಳಿಯ ಪದಾಧಿಕಾರಿಗಳು ಮಸೀದಿ ಸ್ಥಳಗಳಲ್ಲಿನ ಅಂಗಡಿಗಳನ್ನು ಬಾಡಿಗೆಗೆ ಕೊಡಬೇಕಾದರೆ ಪಲಾನುಭವಿಗಳಿಂದ ರಿಜಿಸ್ಟರ್ ಮಾಡಿಸಿಕೊಂಡು ಸಭೆಯ ತೀರ್ಮಾನ ದಂತೆ ಬಾಡಿಗೆ ಗಳನ್ನು ನಿಗದಿ ಪಡಿಸಿಕೊಳ್ಳಬೇಕು . ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಮಾಡಿಸಿಕೊಂಡು ಅದರಲ್ಲಿ ಆಧಾರ್ ಸಂಖ್ಯೆ ಮತ್ತು ಪೋನ್ ಸಂಖ್ಯೆಗಳನ್ನು ನಮೂದಿಸಿ ಕೊಳ್ಳಬೇಕು . ಮುಂಬರುವ ವಿಧಾನ ಸಭಾ ಚುನಾವಣೆಗೆ ಮತದಾರರ ಪಟ್ಟಿಗಳಲ್ಲಿ ಎಲ್ಲಾ 18 ವರ್ಷ ತುಂಬಿರುವವರನ್ನು ಸೇರಿಸಿ , ನಮ್ಮ ಜನಾಂಗದ ಬಗ್ಗೆ ಹಿತವನ್ನು ಬಯಸುವ ಅಂತಹವರನ್ನು ಆಯ್ಕೆ ಮಾಜಿಕೊಳ್ಳಲು ಸಲಹೆ ಸೂಚನೆ ಗಳನ್ನು ತಿಳಿಸಿದರು . ಈ ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಮುಜಾಯಿದ್ ಅನ್ಸಾರಿ , ರಾಜ್ಯ ವಕ್ಸ್ ಬೋರ್ಡ ಅಧಿಕಾರಿ ಜಾವೀದ್ ಅಹಮದ್‌ , ಮುಖ್ಯಾಧಿಕಾರಿ ಸತ್ಯನಾರಾಯಣ , ಹಿರಿಯ ಮುಖಂಡರಾದ ಅಮೀರ್ ಸಾಬ್ , ಬಿ.ಜಿ ಖಾದರ್ , ಅಕ್ಟರ್‌ ಷರೀಪ್ , ದಿಂಬಾಲ್ ಅಶೋಕ್ , ಸಂಜಯ್ ರೆಡ್ಡಿ , ಕೆಕೆ ಮಂಜುನಾಥ್ , ಗೋಪಾಲ್ , ಪುರಸಭೆ ಸದಸ್ಯರಾದ ಅನೀಸ್ ಅಹಮದ್ , ಇಪ್ಲಿಕಾರ್‌ ಅಹಮದ್ , ಮುನಿರಾಜ್ , ತಾಲ್ಲೂಕಿನ ಎಲ್ಲಾ ಮಸೀದಿಗಳ ಕಮಿಟಿ ಸದಸ್ಯರು ಹಾಗು ಮುತುವಲ್ಲಿಗಳು ಹಾಜರಿದ್ದರು .