ಜಿಲ್ಲಾಸ್ಪತ್ರೆಯಲ್ಲಿನ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಅನದೀಕೃತ ಅಂಗಡಿಗಳನ್ನು ತೆರೆವುಗೊಳಿಸಿ – ರೈತ ಸಂಘ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ.07: ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿನ ದಲ್ಲಾಗಳಿಗೆ ಹಾವಳಿಗೆ ಕಡಿವಾಣ ಹಾಕಿ ಅನದೀಕೃತ ಅಂಗಡಿಗಳನ್ನು ತೆರೆವುಗೊಳಿಸುವಂತೆ ರೈತ ಸಂಘದಿಂದ ಜಿಲ್ಲಾ
ಶಸ್ತ್ರ ಚಿಕಿತ್ಸಕಾರಿಗಳಾದ ಡಾ. ರಘುನಾಥ್‍ರೆಡ್ಡಿರವರಿಗೆ ಮನವಿ ನೀಡಿ
ಒತ್ತಾಯಿಸಲಾಯಿತು. ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೆ ಆಹಾರದಿಂದ ಔಷಧಿಗಳವರೆಗೂ ಬಡವರು ಪಡೆಯಬೇಕಾದರೆ ಜಿಲ್ಲಾಸ್ಪತ್ರೆಯಲ್ಲಿ ದಲ್ಲಾಳಿಗಳ ನೆರಳು ಇಲ್ಲದೆ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲವೆಂದು
ಅವ್ಯವಸ್ಥೆ ವಿರುದ್ದ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಮನವಿ ನೀಡಿ ಮಾತನಾಡಿದವರು 100 ಹಾಸಿಗೆಗಳ ಆಸ್ಪತ್ರೆ ಬಡ ಹೆಣ್ಣು ಮಕ್ಕಳ ಪಾಲಿಗೆ ಇದ್ದು ಇಲ್ಲದಂತಾಗಿದೆ. ಹೆರಿಗೆಗೆ ಬರುವ ಬಡವರಿಗೆ ನೂರೊಂದು ನೆಪ ಹೇಳಿ ಖಾಸಗಿ ಆಸ್ಪತ್ರೆಗಳ ರವಾನೆ ಮಾಡುವ ದಂದೆ ಜೊತೆಗೆ ಹೆರಿಗೆ ವಿಭಾಗದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ ಜೊತೆಗೆ ಮಕ್ಕಳ ವಾರ್ಡ್‍ಗಳಲ್ಲಿ ಸ್ಕ್ರೀನ್‍ಗಳಿಲ್ಲದೆ ಮಕ್ಕಳಿಗೆ ಹಾಲುಣಿಸಲು ಕಷ್ಟವಾಗುತ್ತದೆಂದು ವಿವರಿಸಿದರು.
ಕೋಲಾರ ತಾಲ್ಲೂಕು ಅದ್ಯಕ್ಷ ಈಕಂಬಳ್ಳಿ ಮಂಜುನಾಥ್ಮಾತನಾಡಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅನಧೀಕೃತ ಅಂಗಡಿ ಮಳಿಗೆಗಳ ಹೆಚ್ಚಾಗಿ ಹೆಚ್ಚಿನ ಬೆಲೆಗೆ ಮಾರಾಟಮಾಡುವ ಜೊತೆಗೆ ಟೆಂಡರ್ ಇಲ್ಲದ ಅಮಗಡಿಗಳನ್ನು ತೆರೆವುಗೊಳಿಸಬೇಕೆಂದು ಒತ್ತಾಯ ಮಾಡಿದರು. ಆಸ್ಪತ್ರೆಯಲ್ಲಿ ಗುತ್ತಿಗೆ ಆದಾರದ ಮೇಲೆ ದುಡಿಯುತ್ತಿರುವ 172 ಜನರ 5 ತಿಂಗಳ ವೇತನ ಜೊತೆಗೆ ಪಿ.ಎಪ್ , ಇ,ಎಸ್,ಐ ನೀಡದೇ ಯಾವುದೇ ಮೂಲ ಭೂತ ಸೌಕರ್ಯಗಳನ್ನು ಒದಗಿಸದೆ ಗುತ್ತಿಗೆದಾರರ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಮತ್ತು ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಮಾತನಾಡಿದ ಡಾ. ರಘುನಾಥ್‍ರೆಡ್ಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ದಲ್ಲಾಳಿಗಳ ಹವಳಿಗೆ ಕಡಿವಾಣ ಹಾಕಿ ಅನಧಿಕೃತ ಅಂಗಡಿ ಮಳಿಗೆ ತೆರೆವುಗೊಳಿಸಿ, ಬಡ ಕಾರ್ಮಿಕರಿಗೆ ವೇತನ ಕೊಡುವ ಗುತ್ತಿಗೆದಾರ ವಿರುದ್ದ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮನವಿ ನೀಡುವಾಗ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಐತಾಂಡಹಳ್ಳಿ ಮುನ್ನಾ, ವಕ್ಕಲೇರಿ ಹನುಮಯ್ಯ, ಯಲ್ಲಪ್ಪ, ಯಾರಂಗಟ್ಟ ಗೀರೀಶ್, ಕುವಣ್ಣ, ಸುರೇಶ್‍ಬಾಬು, ಮಂಜುನಾಥ್, ಮುಂತಾದವರಿದ್ದರು.