ಕುಂದಾಪುರ : ಕೊರೊನಾ ಸುರಕ್ಷತೆ ಬಗ್ಗೆ ಮಾಹಿತಿ ಕಾರ್ಯಕ್ರಮ

JANANUDI.COM NETWORK


ಕುಂದಾಪುರ, ಜ.6: ಕೊರೋನಾ ಬಗ್ಗೆ ಮಾಹಿತಿ ಕಾರ್ಯಕ್ರಮ ಕುಂದಾಪುರ ರೋಜರಿ ಚರ್ಚಿನಲ್ಲಿ ನಡೆಯಿತು. ಮಣಿಪಾಲ ಆಸ್ಪತ್ರೆಯ ಮಕ್ಕಳ ವಿಭಾಗದ ಎಚ್.ಒ.ಡಿ ಡಾ| ಲೆಸ್ಲಿ ಲುವಿಸ್ ಕೊರೊನಾದ ಬಗ್ಗೆ ಹೇಗೆ ಎಚ್ಚರವಹಿಸಬೇಕು ಎಂದು ಹೇಳುತ್ತಾ, ಪ್ರಥಮ ಮತ್ತು ದ್ವೀತಿಯ ಅಲೆಯಲ್ಲಿ ಹಲವರಿಗೆ ಸೂಕ್ತ ರೀತಿಯ ಚಿಕಿತ್ಸೆ, ವೆಂಟಿಲೇಟರ್ ಲಭ್ಯವಿಲ್ಲದೆ ಸಾವನ್ನಪ್ಪಿದ್ದಾರೆ.

ಕೊರೊನಾದಿಂದ ನಾವು ಸುರಕ್ಷಿತವಾಗಿರಲು, ವ್ಯಾಕ್ಸಿನ್‍ನ್ನು ಎಲ್ಲರೂ ತೆಗೆದುಕೊಳ್ಳಬೇಕು, ವಾಕ್ಸಿನ್ ತೆಗೆದುಕೊಳ್ಳುವದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ, ವಾಕ್ಸಿನ್ ತೆಗೆದುಕೊಳ್ಳುವುದರಿಂದ ಸಾವುಗಳು ಸಂಭವವಿಸುದಿಲ್ಲ, ಸಾವನ್ನಪ್ಪಲು ಬೇರೆ ಕಾರಣಗಳಿವೆ. ಕೊರೊನಾ ಬಂದು ನಂತರ ಹ್ರದಯಘಾತವಾಗುವುದೆಂಬು ಕೂಡ ಸತ್ಯವಲ್ಲವೆಂಬುದು ವೈದ್ಯಕೀಯ ವರದಿಗಳು ಹೇಳುತ್ತವೆ.ಮಕ್ಕಳಿಗೆ ಕೊರೊನಾ ಹೆಚ್ಚು ಭಾದಿಸಲಿಲ್ಲ, ಕೊರೊನಾಕ್ಕೆ ತಾವೇ ಮದ್ದು ಮಾಡುವುದು ಸರಿಯಲ್ಲ, ತಜ್ನ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕೆಂದು’ ಅವರು ತಿಳುವಳಿಕೆ ನೀಡಿದರು.


ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಸ್ತಾವಿಸಿ ಸ್ವಾಗತಿಸಿದರು. ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಚರ್ಚ್ ಆರೋಗ್ಯ ಆಯೊಗದ ಸದಸ್ಯರು ಉಪಸ್ಥಿತರಿದ್ದರು. ಆರೋಗ್ಯ ಆಯೋಗದ ಸಂಚಾಲಕಿ ಡಾ|ಸೋನಿ ಡಿಕೋಸ್ತಾ ಧನ್ಯವಾದಗಳನ್ನು ಆರ್ಪಿಸಿದರು.