ಶಾಸ್ವತವಾಗಿ ಸ್ವರ ನಿಲ್ಲಿಸಿದ ಗಂಧರ್ವ ಗಾನ ಕೋಗಿಲೆ ಲತಾ ಮಂಗೇಶ್ಕರ್

JANANUDI.COM NETWORK

ಮುಂಬಯ್, ಜ.6: ಕೋರೊನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿದ್ದ ಅತ್ಯಂತ ಜನಪ್ರಿಯ ಗಾಯಕಿ, ಭಾರತರತ್ನ ಪ್ರಶಸ್ತಿ ಪುರಸ್ಕøತೆ ಗಾನಕೋಗಿಲೆ ಲತಾ ಮಂಗೇಶ್ಕರ್(92) ಇಂದು ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.
92 ವರ್ಷದ ಲತಾ ಮಂಗೇಶ್ಕರ್ ಅವರು ಕೋವಿಡ್ ಲಕ್ಷಣಗಳೊಂದಿಗೆ ಜನವರಿ 11 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರ ಅರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಎಂಬುದಾಗಿ ವೈದ್ಯರು ಹೇಳಿದ್ದರು.
ಆದರೆ ಶನಿವಾರ ಲತಾ ಮಂಗೇಶ್ಕರ್ ಆರೋಗ್ಯ ಮತ್ತೊಮ್ಮೆ ಉಲ್ಬಣಗೊಂಡು ಆರೋಗ್ಯದಲ್ಲಿ ಏರುಪೇರಾಗಿದ್ದು. ಅವರನ್ನು ಉಳಿಸಲು ವೈದ್ಯರು ಬಹಳ ಪ್ರಯತ್ನಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಲತಾ ಮಂಗೇಶ್ಕರ್ ಕೊನೆಯುಸಿರೆಳೆದಿದ್ದಾರೆ.
ಲತಾ ಮಂಗೇಶ್ಕರ್ ಗೆ ಭಾರತೀಯ ಸಿನಿಮಾದಲ್ಲಿ ಕಾಡುಗಾರಿಕೆಯಲ್ಲಿ ಉನ್ನತ ಮಟ್ಟದ ಸ್ಥಾನ ಇತ್ತು. ಅವರು ಹಿಂದಿ ಅಲ್ಲದೆ ಹಲವು ಭಾರತೀಯ ಮತ್ತು ವಿದೇಶಿ ಭಾμÉಗಳು ಸೇರಿದಂತೆ 30 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದರು. ಲತಾ ಮಂಗೇಶ್ಕರ್, ಹೆಚ್ಚಾಗಿ ಹಿಂದಿ, ಮರಾಠಿ ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿ ಕೂಡ ಹಾಡಿದ್ದಾರೆ
ಭಾರತ ಸರ್ಕಾರದಿಂದ ಅತ್ಯುನ್ನತ ಪ್ರಶಸ್ತಿಗಳು ಸ್ವೀಕರಿಸಲ್ಪಟ್ಟ ಅದ್ವೀತಿಯ ಗಾಯಕಿ ಆಗಿದ್ದ ಲತಾ ಮಂಗೇಶ್ಕರ್. ಭಾರತೀಯ ಸಂಗೀತಕ್ಕೆ ಅವರು ನೀಡಿದ ಸೇವೆಗೆ 1969 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿತ್ತು. ನಂತರ 1999 ರಲ್ಲಿ ಪದ್ಮ ವಿಭೂಷಣ್ ನೀಡಿ ಗೌರವಿಸಲಾಯಿತು. 2001ರಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತರತ್ನ’ವನ್ನು ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಅವರಿಂದ ಲತಾ ಮಂಗೇಶ್ಕರ್ ಸ್ವೀಕರಿಸಿದರು. 1989 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸ್ವೀಕರಿಸಿದ್ದ ಲತಾ, ಫ್ರಾನ್ಸ್ ಸರ್ಕಾರ ‘ದಿ ಲಿಜಿಯನ್ ಆಫ್ ಹಾನರ್’ ಪ್ರಶಸ್ತಿಯನ್ನು ಪಡೆದಿದ್ದರು.


ಚೀನಾ-ಭಾರತ ಯುದ್ಧದಲ್ಲಿ ಭಾರತದ ಅನೇಕ ಸೈನಿಕರು ತಮ್ಮ ಪ್ರಾಣ ತೆತ್ತರು. ಇವರ ನೆನಪಿನಲ್ಲಿ ಒ0ದು ವಿಶೇಷ ಗೀತೆಯನ್ನು ಪ್ರದೀಪ್ ಎ0ಬ ಕವಿ ರಚಿಸಿದರು. ಈ ಗೀತೆಯನ್ನು ಸಿ. ರಾಮಚ0ದ್ರ ಅವರ ಸ0ಗೀತ ನಿರ್ದೇಶನದಲ್ಲಿ ಲತಾ ಅವರು 1963 ಜನವರಿ 27ರ0ದು ನವದೆಹಲಿಯಲ್ಲಿ ನಡೆದ ಸಮಾರ0ಭದಲ್ಲಿ ಹಾಡಿದರು. “ಹೇ ಮೇರೆ ವತನ್ ಕೇ ಲೋಗೋ0. ಜರಾ ಆಂಖ್ ಮೇ ಭರಲೋ ಪಾನಿ” ಎ0ದು ಪ್ರಾರಂಭವಾಗುವ ಗೀತೆಯನ್ನು ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಕೇಳಿ ಅವರು ಕಣ್ಣಿರಿಟ್ಟಿದ್ದರು. ಕಾರ್ಯಕ್ರಮದ ನಂತರ ನೆಹರು ಅವರು ಲತಾ ಮಂಗೇಶ್ಕರ್ ಹತ್ತಿರ ಮಾತಾಡಿ “ನೀನು ನನ್ನನ್ನು ಅಳಿಸಿಬಿಟ್ಟಿ.` ಎ0ದು ಭಾವುಕರಾಗಿ ಹೇಳಿದ್ದರಂತೆ.


ಲತಾ ಮಂಗೆಶ್ಕರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದಯೆ ಮತ್ತು ಕಾಳಜಿಯುಳ್ಳ ಲತಾ ದೀದಿ ನಮ್ಮನ್ನು ಅಗಲಿದ್ದು, ನಮ್ಮ ದೇಶದಲ್ಲಿ ತುಂಬಲಾರದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ. ಅವರ ಮಧುರ ಧ್ವನಿಯು ಜನರನ್ನು ಮಂತ್ರಮುಗ್ಧಗೊಳಿಸುವ ಅಪ್ರತಿಮ ಸಾಮಥ್ರ್ಯವನ್ನು ಹೊಂದಿತ್ತು ಎಂದು ಹೇಳಿದ್ದಾರೆ. ಅವರ ಜೊತೆಗೆ ಇತರ ರಾಜಕೀಯ ಗಣ್ಯರು, ಚಿತ್ರ ರಂಗದ ಗಣ್ಯರು ಲತಾ ಮಂಗೇಶ್ಕರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.