ಕೋಲಾರ : – ಕೇಂದ್ರ ಬಜೆಟ್‌ನಲ್ಲಿ ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಶೇ .೧೮ ರಿಂದ ಶೇ .೧೫ ಕ್ಕೆ ಇಳಿಕೆ ಮಾಡಿದ್ದು , ಜತೆಗೆ ೧ ಕೋಟಿಗಿಂತ ಹೆಚ್ಚು ಹಾಗೂ ೧೦ ಕೋಟಿವರೆಗಿನ ಆದಾಯ ಹೊಂದಿರುವ ಸಂಘಗಳ ಸರ್‌ಚಾರ್ಜ್‌ಅನ್ನು ಶೇ .೧೨ ರಿಂದ ೭ ಕ್ಕೆ ಇಳಿಕೆ ಮಾಡಿದ್ದು , ಸ್ವಾಗತಾರ್ಹ ಆದರೆ ಸಂಪೂರ್ಣವಾಗಿ ತೆಗೆದು ಹಾಕಬೇಕಾಗಿತ್ತು ಎಂದು ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟಿದ್ದಾರೆ . ನದಿಗಳ ಜೋಡಣೆಯಿಂದ ರೈತರಿಗೆ ಅನುಕೂಲ ಮತ್ತು ಕೃಷಿ , ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಅವರು , ಕೃಷಿ ಅಭಿವೃದ್ಧಿಗೆ ಪೂರಕವಾಗಿ ರೈತರಿಗೆ ನೀಡುವ ಸಾಲವನ್ನು ಶೂನ್ಯಬಡ್ಡಿಯಲ್ಲಿ ನೀಡಲು ಕ್ರಮವಹಿಸಬೇಕಾಗಿತ್ತು ಎಂದಿದ್ದಾರೆ .