ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಗೆ ರೂ ೨೫.೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ್ ರವರಿಗೆ ನಗರಸಭೆ ಸದಸ್ಯರು ಮನವಿ ನೀಡಿದರು . ಕೋಲಾರ ನಗರಸಭೆಯು ೩೫ ವಾರ್ಡ್‌ಗಳಿಂದ ಕೂಡಿದ್ದು , ೨೦೧೧ ರ ಜನಗಣತಿಯ ಪ್ರಕಾರ ೧೩೮೫೫೩ ಜನಸಂಖ್ಯೆ ಹೊಂದಿದ್ದು ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರದಿಂದ ಕೋಲಾರ ನಗರಸಭೆಗೆ ಅನುದಾನಗಳು ಮಂಜೂರಾಗುತ್ತಿಲ್ಲ . ಇದರಿಂದ ನಗರವು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ . ಸುಮಾರು ೨೬.೫೩ ಚ.ಕಿ.ಮೀ ವಿಸ್ತೀರ್ಣ ಹೊಂದಿರುತ್ತದೆ . ಈ ಪೈಕಿ ಹಲವಾರು ರಸ್ತೆಗಳು ಮಣ್ಣಿನಿಂದ ಕೂಡಿರುತ್ತದೆ . ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿಯಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಿದ್ದು , ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುತ್ತದೆ . ನಗರದಲ್ಲಿ ಸಾರ್ವಜನಿಕರು ಮುಕ್ತವಾಗಿ ಓಡಾಟ ಮಾಡಲು ಹಾಗೂ ವಾಹನಗಳು ಸಂಚಾರ ಮಾಡಲು ತುಂಬಾ ತೊಂದರೆಯಾಗುತ್ತಿದೆ .
ಆದ್ದರಿಂದ ರಸ್ತೆ ಮತ್ತು ಚರಂಡಿ ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಗೆ ರೂ ೨೫.೦೦ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಯಿತು . ಇದರ ಜೊತೆಗೆ ನಗರಸಭೆ ಕಚೇರಿ ಕಟ್ಟಡಕ್ಕೆ ವಿಶೇಷ ಅನುದಾನ , ಹೆಚ್ಚುವರಿ ಸಿಬ್ಬಂದಿ , ೧೫ ನೇ ಹಣಕಾಸಿನ ಬಗ್ಗೆ ಮತ್ತು ಎಸ್.ಎಫ್.ಸಿ ಅನುದಾನದ ಬಗ್ಗೆ ಹೆಚ್ಚುವರಿ ಅನುದಾನ ನೀಡಲು ಕ್ರಮ ವಹಿಸುವಂತೆ ಮನವಿ ಸಲ್ಲಿಸಲಾಯಿತು . ಮನವಿ ಸ್ವೀಕರಿಸಿ ಮಾತನಾಡಿದ ಪೌರಾಡಳಿತ ಸಚಿವರಾದ ಎಂ.ಟಿ.ಬಿ ನಾಗರಾಜ್ ರವರು ಮುಂದಿನ ಬಜೆಟ್ ಅಧಿವೇಶನದಲ್ಲಿ ತಮ್ಮೆಲ್ಲಾ ಬೇಡಿಕೆಗಳ ಬಗ್ಗೆ ಧ್ವನಿ ಎತ್ತಿ ಶೀಘ್ರವಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು . ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ನಾಜಿಯಾ ಬಾಬಾಜಾನ್ , ಭಾಗ್ಯಮ್ಮ ಜೆ.ಕೆ ಜಯರಾಮ್ , ಲಕ್ಷ್ಮೀದೇವಮ್ಮ ಕುರಿಗಳ ರಮೇಶ್ , ಜುಗುನು ಅಸ್ಲಂ , ಜುಟ್ಟು ಮಂಜುನಾಥ್ , ಪಾವನ ಜನಾರ್ಧನ್ , ಗುಣಶೇಖರ್ , ನಾ ಏಜಾಜ್ ನೂರಿ ಕಮರ್ , ರಂಗಮ್ಮ ಟಿಲ್ಲಿ ಮಂಜುನಾಥ್ , ನಿಖತ್ ಫಾತಿಮಾ ಶಾಮೀ , ಖಾಜಾ ಮೋಯುದ್ದೀನ್ , ಶಮೀವುಲ್ಲಾ ( ಚೋಟು ) , ತಾಸೀನ್ ತಾಜ್ ( ಏಜಾಜ್ ) , ಮುಖಂಡರಾದ ಅಣ್ಣಮ್ಮ ಮಹೇಂದ್ರ , ಗಣೇಶ್ ಯಾದವ್ ಇನ್ನಿತರರು ಉಪಸ್ಥಿತರಿದ್ದರು .