ಕೋಲಾರ ನಗರಸಭೆಗೆ ಸೇರಿದ ಬಾಡಿಗೆ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಾಚರಣೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೋಲಾರ ನಗರಸಭೆಗೆ ಸೇರಿದ 205 ಬಾಡಿಗೆ ಅವಧಿ ಮುಗಿದಿರುವ ವಾಣಿಜ್ಯ ಮಳಿಗೆಗಳನ್ನು ಸೋಮವಾರ ಬೆಳಗ್ಗೆ ಹೈ ಕೋರ್ಟ್ ಆದೇಶದ ಮೇರೆಗೆ ಪೆÇೀಲೀಸರ ಸಹಕಾರದೊಂದಿಗೆ ನಗರಸಭೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಜೊತೆಗೂಡಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಳೆದ 45 ದಿನಗಳ ಹಿಂದೆಯೆ ನಗರಸಭೆವತಿಯಿಂದ ಅಂಗಡಿ ನಡೆಸುತ್ತಿರುವವರಿಗೆ ನೋಟೀಸು ಜಾರಿ ಮಾಡಿದ್ದರೂ ,ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ತೆರೆವುಗೊಳಿಸದ ಕಾರಣ ನಗರದ ಎಂ.ಜಿ.ರಸ್ತೆಯಲ್ಲಿರುವ ಎಸ್.ಎಸ್.ಕಾಂಪ್ಲೆಕ್ಸ್ ನಲ್ಲಿರುವ ನಗರಸಭೆಯ ಮಳಿಗೆಗಳನ್ನು ಖಾಲಿ ಮಾಡಿಸಲು ನಗರಸಭೆ ಪೌರಾಯುಕ್ತ ಎಸ್. ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ಪೆÇಲೀಸ್‍ಬಿಗಿ ಭದ್ರತೆಯಲ್ಲಿ ನಡೆಯಿತು.ಕೆಲವು ಅಂಗಡಿ ಮಾಲೀಕರು ಮಾತಿನ ಚಕಮಕಿಗೆ ಇಳಿದರಾದರೂ ಪೊಲೀಸರು ಯಾವುದೇ ಗಲಾಟೆಗೆ ಅವಕಾಶ ನೀಡಲಿಲ್ಲ, ಪರಿಸ್ಥಿತಿಯ ತೀವ್ರತೆ ಅರಿತ ಕೆಲವು ಅಂಗಡಿ ಮಾಲೀಕರು ಸ್ವತಃ ತಾವೇ ಅಂಗಡಿಯಲ್ಲಿನ ಸರಕನ್ನು ಹೊತ್ತೊಯದ್ದು, ಖಾಲಿ ಮಾಡುತ್ತಿದ್ದ ದೃಶ್ಯಗಳು ಕಂಡು ಬಂತು.
ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ವಾಣಿಜ್ಯ ಮಳಿಗೆಗಳಲ್ಲಿದ್ದ ವ್ಯಾಪಾರಿಗಳು ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅಧಿಕಾರಿಗಳು ಕೋರ್ಟ್ ಆದೇಶವನ್ನು ತೋರಿಸಿ ಮಳಿಗೆ ಖಾಲಿ ಮಾಡಿಸುತ್ತಿದ್ದಾರೆ. ಅಧಿಕಾರಿಗಳು ಬೀಗ ಒಡೆದು ಮಳಿಗೆಗಳನ್ನ ಸೀಸ್ ಮಾಡುವುದರ ಮೂಲಕ ಮುಂದೆ ಹರಾಜುದಾರರಿಗೆ ನೀಡಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಖಾಲಿ ಮಾಡದ ಕಾರಣ ನಗರಸಭೆ ಸಿಬ್ಬಂದಿ ಮಳಿಗೆಗಳ ಬೀಗ ಹೊಡೆದು, ಮಳಿಗೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕುವ ಕೆಲಸ ಮಾಡಿದ್ದಲ್ಲದೆ, ಮಳಿಗೆಯಲ್ಲಿದ್ದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡರು.
ಕಳೆದ ಒಂದೂವರೆ ವರ್ಷದ ಹಿಂದೆ ಹಲವಾರ ಬಿಡ್ ದಾರರು ಹೆಚ್ಚಿನ ಬಾಡಿಗೆ ಹಾಗೂ ಮುಂಗಡ ನೀಡಲು ಒಪ್ಪಿ ಹಾರಾಜಿನಲ್ಲಿ ಮಳಿಗೆಗಳನ್ನು ಪಡೆದುಕೊಂಡಿದ್ದು,
ಇದುವರೆವಿಗೆ ಹಲವಾರು ಬಾರಿ ನಗರಸಭೆ ನೋಟೀಸು ನೀಡಿ ತೆರವು ಗೊಳಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಕಾನೂನಿನ ತೊಡಕುಗಳನ್ನು ನಿವಾರಿಸಿಕೊಂಡಿರುವ ನಗರಸಭೆ ಕೋರ್ಟ್ ಆದೇಶದಂತೆ ಮಳಿಗೆಗಳ ತೆರವಿಗೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಮಳಿಗೆಗಳನ್ನು ತೆರವು ಗೊಳಿಸುವ ಕಾರ್ಯದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಎಸ್.ಎಸ್.ಕಾಂಪ್ಲೆಕ್ಸ್ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿತ್ತು ಹಾಗೂ ಸ್ಥಳದಲ್ಲಿ ಹೆಚ್ಚಿನ ಪೆÇೀಲಿಸ್ ಬಂದೋಬಸ್ತ್ ಹಾಕಲಾಗಿತ್ತು.
ಪೊಲೀಸರು ಬೆಳಗ್ಗೆ 8 ಗಂಟೆಯಿಂದಲೇ ತೆರವು ಕಾರ್ಯಾಚರಣೆ ನಡೆಸುವ ಭಾಗದ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‍ಗಳನ್ನು ಹಾಕಿ ಬಂದ್ ಮಾಡಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಲಿಲ್ಲ.