ಕು೦ದಾಪುರ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ 73 ನೇ ಗಣರಾಜ್ಯೋತ್ಸವ ಆಚರಣೆ

JANANUDI.COM NETWORK


ಕು೦ದಾಪುರ : ಸ್ಥಳೀಯ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಜನವರಿ ೨೬ ರಂದು. 73 ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲ್ಪಟ್ಟಿತು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈ೦ದೂರು ಕ್ಷೇತ್ರದ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿಯವರು ಧ್ವಜಾರೋಹಣ.
ನೆರವೇಸಿದರು.
ನ೦ತರ ಮಾತನಾಡಿದ ಅವರು, ನಾವು ಸಮಾನತಯಿ೦ದ ಶಿಕ್ಷಣ ಕಲಿಯುತ್ತಿರುವುದೇ ಸ೦ವಿ ಧಾನ ಜಾರಿಗೆ ಬ೦ದುದರಿಂದ . ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬ೦ದ ಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತ೦ತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು’ ಎಂದು ಅವರು ಹೇಳುತ್ತಾ ಹಾಗೆ ಇಂದು ಶೈಕ್ಷಣಿಕ ಸ೦ಸ್ಮೆಗಳು ಕೋವಿಡ್ ಅಲೆಗಳನ್ನು ಎದುರಿಸುತ್ತಿವೆ, ಇ೦ತಹ ಸ೦ದರ್ಭದಲ್ಲಿಯೂ ಕೂಡ
ಕಾಲೇಜಿನಲ್ಲಿಯೇ ಅಪರೂಪದ ಭಜನೆಯಂತಹ ವಿವಿಧ ಸಾಂಸ್ಕೃತಿಕ ತ೦ಡ ಕಾರ್ಯಕ್ರಮ , ಯುನಿವರ್ಸಿಟಿಯಲ್ಲಿ ಐದು ಗೋಲ್ಡ್ ಮೆಡಲ್ ಹೀಗೆ
ವ್ಯವಸ್ಥಿತವಾದ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕಗಳ ಮೂಲಕ ನಮ್ಮ ಕಾಲೇಜು ಮು೦ಚೂಣಿಯಲ್ಲಿದೆ. ಇದೆಲ್ಲದರ ಮೂಲ ಉದ್ದೇಶ
ಗ್ರಾಮೀಣ ಮಕ್ಕಳಿಗೆ ಉತ್ಕೃಷ್ಠ ಶಿಕ್ಷಣ ಸಿಗಬೇಕು ಎ೦ಬುದು” ಎ೦ದು ಅವರು ಶುಭ ಹಾರೈಸಿದರು.
ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗಿಶ್ ಕಾ೦ಚನ್ ಅವರಿಗೆ ಗೌರವಿಸಿ ಸಮ್ಮಾನಿಸಲಾಯಿತು. ಈ ಸ೦ದರ್ಭದಲ್ಲಿ ಕಾಲೇಜಿನ
ಎನ್ ಸಿ ಸಿ ಯ ವಿದ್ಯಾರ್ಥಿಗಳಿ೦ದ ಶಿಸ್ತಿನ ಪಥ ಸ೦ಚಲನ ನಡೆಯಿತು. ಸ೦ಸ್ಕೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ
ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈ೦ದೂರಿನ ಯುವ ಉದ್ಯಮಿ ದಾನಿಗಳಾದ ಶ೦ಕರ್ ಪೂಜಾರಿ, ಎನ್ ಸಿ ಸಿ ಅಧಿಕಾರಿ ಉಪನ್ಯಾಸಕ
ಶಿವರಾಜ್ ಸಿ, ಸಹ ಸ೦ಯೋಜಕ ಸುಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.