ಕುಂದಾಪುರ 73 ನೇ ಗಣರಾಜ್ಯೋತ್ಸವ “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು” ಪ್ರತಿಪಾದಿಸಿ ಅನುಷ್ಠಾನದ ಪುಣ್ಯ ದಿನ: ಸ.ಆಯುಕ್ತ ರಾಜು ಕೆ.

JANANUDI.COM NETWORK


ಕುಂದಾಪುರ, ಜ.26: ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಎನ್ನುವ ಹೆಗ್ಗಳಿಕೆ ಹೊಂದಿರುವ ನಮ್ಮ ಸಂವಿಧಾನದ ಅನುಷ್ಠಾನವಾಗಿ ಅದು ಸಾಗಿ ಬಂದದನ್ನು ಸ್ಮರಿಸುವುದರೊಂದಿಗೆ ಮುಂದಿನ ದಿನಗಳನ್ನ ರೂಪಿಸುವ ಸಂದರ್ಭವೂ ಇದಾಗಿದೆ. “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು” ಎಂದು ಪ್ರತಿಪಾದಿಸಿದ್ದನ್ನು ಮಂಡಿಸಿ ಅನುಷ್ಠಾನ ಮಾಡಿದ ಪುಣ್ಯ ದಿನ ಇದಾಗಿದೆ. ಎಂದು ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ಹೇಳಿದರು.
ಅವರು ಬುಧವಾರ ತಾಲೂಕು ಆಡಳಿತದ ವತಿಯಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ಜರುಗಿದ 73 ನೇ ಗಣರಾಜ್ಯೋತ್ಸವ ಸಂದಭ್ರ್ದಲ್ಲಿ ದ್ವಜಾರೋಹಣಗೈದು ಅವರು ಹೇಳಿದರು.
ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಜಯಿಸಿ ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶವನ್ನು ನವನಿರ್ಮಾಣ ಮಾಡುವ, ಹೆಜ್ಜೆಯಿಟ್ಟು ನಮ್ಮ ಹಿರಿಯರು ಚಾಲನೆ ನೀಡಿದ ದಿನ ಇದಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಸಾರಥ್ಯದಲ್ಲಿ ಎಲ್ಲಾ ಮಹನೀಯರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ.
ಅನೇಕ ಶಿಕ್ಷಣ ತಜ್ಞರು, ಮುತ್ಸದ್ಧಿಗಳು, ಜನಪ್ರತಿನಿಧಿಗಳು ಭವಿಷ್ಯದ ದೃಷ್ಟಿಯಿಂದ 2 ವರ್ಷ 11 ತಿಂಗಳು 18 ದಿನ ಒಟ್ಟು 166 ಸಭೆಗಳ ಮೂಲಕ ರೂಪುಗೊಳಿಸಿದ ಸಂವಿಧಾನ ನಮ್ಮ ದೇಶದ್ದಾಗಿದೆ. ಜನತೆಯ ಹಕ್ಕುಗಳ ಮೂಲವಾಗಿ ಸಮರ್ಪಿತವಾಗಿದ್ದು, ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಸಮಾನತೆ ಇದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವ ತತ್ವದ ಮೇಲೆ ನಮ್ಮ ಸಂವಿಧಾನ ಆಧಾರಿತವಾಗಿದೆ.
ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಪಾಲನೆಯ ಜೊತೆಗೆ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ನಾವು ದೃಢವಾಗಿ ಎದುರಿಸಬೇಕಾಗಿದೆ. ಕೋವಿಡ್‍ನಂತಹ ಸಾಮೂಹಿಕ ಆತಂಕಗಳ ನಡುವೆಯೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕರಾವಳಿಯ ಭೌಗೋಳಿಕ ಹಾಗೂ ಸಾಂಸ್ಕøತಿಕ ವೈಶಿಷ್ಟತೆಯನ್ನು ಜಗತ್ತಿಗೆ ಇನ್ನಷ್ಟು ಪರಿಚಯಿಸಿ, ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕಾಯಕಲ್ಪ ನೀಡಬೇಕಾಗಿದ್ದು. ಸಮಾನತೆ, ಸಹೋದರತ್ವ, ಸಾಮಾಜಿಕ ನ್ಯಾಯದ ಆಶಯಗಳ ಮೇಲೆ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಅನುಷ್ಠಾನ ಮಾಡುವ ಬದ್ಧತೆಯೂ ನಮ್ಮದಾಗಿದೆ. ಇದರ ಫಲಶ್ರುತಿಯನ್ನು ಸರ್ವ ವರ್ಗಗಳಿಗೂ ತಲುಪಿಸುವ ಪ್ರಯತ್ನ ನಮ್ಮದಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ನಮ್ಮ ಕರಾವಳಿ ಪ್ರದೇಶದಲ್ಲಿ ಕಿರು ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ದಿಸೆಗೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯ ಪ್ರವತ್ತನಾಗಬೇಕಿದೆ. ಸಾಮಾಜಿಕ ಭದ್ರತೆಯ ಯೋಜನೆಗಳನ್ನು ವ್ಯವಸ್ಥಿತವಾಗಿ ನಾಗರಿಕರಿಗೆ ತಲುಪಿಸುವುದರಲ್ಲಿ ಮುಂಚೂಣಿಯಲ್ಲಿರುವ ನಮ್ಮ ಜಿಲ್ಲೆ ಹೊಸ ಪರಿಕಲ್ಪನೆಗಳನ್ನೂ ರಾಜ್ಯಕ್ಕೆ ನೀಡಿದೆ ಎಂದರು.
ಕೃಷಿ ಸಾಧಕರಿಗೆ ಸನ್ಮಾನ ಮಾಡಲಾಯಿತು
2020-21 ನೇ ಸಾಲಿನ ಭತ್ತದ ಬೆಳೆಯ ಸ್ಪರ್ಧೆಯಲ್ಲಿ ವಿಜೇತ ಕೃಷಿಕರಾದ ಸೂರ್ಯನಾರಾಯಣ್ ಜೋಯಿಸ್ ಕಿರಿಮಂಜೇಶ್ವರ, ರಾಜೇಂದ್ರ ಪೂಜಾರಿ ನಾವುಂದ, ರಾಮಚಂದ್ರ ನಾವಡ ಕಿರಿಮಂಜೇಶ್ವರ ಹಾಗೂ 2021-22 ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ, ಹೈನುಗಾರಿಕೆಯಲ್ಲಿ ಕೆ ಜಗನ್ನಾಥ್ ಪೂಜಾರಿ ಹೊಂಬಾಡಿ ಮಂಡಾಡಿ, ನೀರು ನಿರ್ವಹಣೆಯಲ್ಲಿ ಆನಂದ ಗಾಣಿಗ ಹೆಮ್ಮಾಡಿ, ತೋಟಗಾರಿಕೆಯಲ್ಲಿ ಎಚ್ ವಿ ರಾಜು ಗಾಣಿಗ ತೆಗ್ಗರ್ಸೆ, ಮೀನುಗಾರಿಕೆಯಲ್ಲಿ ಗಣೇಶ್ ಖಾರ್ವಿ ಉಪ್ಪುಂದ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿ ಸಂದೇಶನೀಡಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಡಿವೈಎಸ್ಪಿ ಶ್ರೀಕಾಂತ್, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ ಪ್ರಭಾಕರ ವಿ, ಗಿರೀಶ್, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ ಜಿಕೆ, ಚಂದ್ರಶೇಖರ್ ಖಾರ್ವಿ, ಪುಷ್ಪ ಶೇಟ್, ರತ್ನಾಕರ್ ಮತ್ತಿತರರು ಇದ್ದರು.
ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಲಾಯಿತು. ಕುಂದಾಪುರ ನಗರ ಠಾಣಾಧಿಕಾರಿ ಸದಾಶಿವ್ ಆರ್ ಗವರೋಜಿ ಗೌರವ ವಂದನೆ ಸಲ್ಲಿಸಿದರು. ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ ಸಿಬ್ಬಂದಿಗಳು ಭಾಗವಹಿಸಿದರು. ಸೈಂಟ್ ಜೋಸೇಫ್ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಪಥಸಂಚಲನಕ್ಕೆ ಸಹಕರಿಸಿ ಮೆರಗೂ ನೀಡಿದರು.
ತಹಸೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರ ಶೇಖರ್ ಬೀಜಾಡಿ ನಿರೂಪಿಸಿದರು.