ಕೋಲಾರ ಜಿಲ್ಲಾಸತ್ತೆಗೆ ಚಿದಾನಂದಗೌಡರಿಂದ ಅಂಬ್ಯುಲೆನ್ಸ್ ಕೊಡುಗೆ ಜನರ ಆರೋಗ್ಯ ರಕ್ಷಣೆಗೆ ಮೋದಿ ಕೊಡುಗೆ ಐತಿಹಾಸಕ – ಡಾ.ವೈ.ಎ.ಎನ್

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕೋವಿಡ್ ಅಲೆಯನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಜನರ ಜೀವ ರಕ್ಷಣೆ , ಆರೋಗ್ಯ ಸುರಕ್ಷತೆಗೆ ಕೇಂದ್ರದ ನರೇಂದ್ರಮೋದಿ ಹಾಗೂ ರಾಜ್ಯದ ಯಡಿಯೂರಪ್ಪಬೊಮ್ಮಾಯಿ ಸರ್ಕಾರಗಳು ನೀಡಿದ ಕೊಡುಗೆ ಐತಿಹಾಸಿಕವಾದದ್ದು ಎಂದು ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು . ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಧಾನಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಅವರು ಎಸ್‌ಎನ್‌ಆರ್ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಅಂಬ್ಯುಲೆನ್ಸ್ ಅನ್ನು ಜಿಲ್ಲಾಶಸ್ತ್ರಚಿಕಿತ್ಸಕರಿಗೆ ಹಸ್ತಂತರಿಸಿ ಅವರು ಮಾತನಾಡುತ್ತಿದ್ದರು . ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆಗೆ ತಮ್ಮ ಅನುದಾನದಿಂದ ಹಾಗೂ ಕೋಲಾರ ಜಿಲ್ಲಾಸತೆಗೆ ಚಿದಾನಂದ ಗೌಡರ ಅನುದಾನದಿಂದ ಸುಸಜ್ಜಿತ , ಆಧುನಿಕ ಐಸಿಯು ಉಳ್ಳ ಮೊಬೈಲ್ ಅಂಬ ನೀಡುತ್ತಿರುವುದಾಗಿ ತಿಳಿಸಿದರು . ಆಂಬ್ಯುಲೆನ್ಸ್ ಲಸಿಕೆ ನೀಡಿಕೆ ಇಂದು ವಿಶ್ವಮಾನ್ಯವಾಗಿದೆ . ಈ ಸಾಧನೆ ಬೇರಾವ ಸರ್ಕಾರದಿಂದಲೂ ಸಾಧ್ಯವಾಗುತ್ತಿರಲಿಲ್ಲ . ಸ್ವದೇಶಿ ಲಸಿಕೆ ತಯಾರಿಸಿ ಜನರಿಗೆ ವಿಶ್ವದಲ್ಲೇ ಮೊದಲು ನೀಡಿದ ಹೆಗ್ಗಳಿಕೆ ಭಾರತದ್ದು ಎಂದರು .

ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದಕ

ಕೋವಿಡ್ ೨ ನೇ ಅಲೆ ಸ೦ದರ್ಭದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯ ೩೪ ತಾಲ್ಲೂಕುಗಳ ಎಲ್ಲಾ ತಾಲ್ಲೂಕು ಜಿಲ್ಲಾಸ್ಪತೆಗಳಿಗೆ ತಮ್ಮ ಕ್ಷೇತಾಭಿವೃದ್ಧಿ ನಿಧಿಯಿಂದ ಆಮ್ಲಜನಕ ಸಾಲವಕಗಳನ್ನು ಒದಗಿಸಿದ್ದಾಗಿ ತಿಳಿಸಿದರು .

ಜಿಲ್ಲಾಸ್ಪತ್ರೆಯಲ್ಲಿ ಶೌಚಾಲಯನೀರಿನ ಸಮಸ್ಯೆಗೆ ಕೊನೆಯಾಡುವಂತೆ ಶಸ್ತ್ರಚಿಕಿತ್ಸಕರಿಗೆ ತಾಕೀತು ಮಾಡಿದರು.

ಉಸುವಾರಿ ಸಚಿವರ ನೇಮಕಕ್ಕೆ ಒತ್ತಾಯ

ಇದೇ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಗೆ ಪೂರ್ಣಪ್ರಮಾಣದಲ್ಲಿ ಉಸ್ತುವಾರಿ ಸಚಿವರ ನೇಮಕಕ್ಕೆ ತಮ್ಮದೇ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ ಅವರು , ಜಿಲ್ಲಾಧಿಕಾರಿಯಾಗಿದ್ದ ಸೆಲಮಣಿ ವರ್ಗಾವಣೆ ಬೇಸರ ತರಿಸಿದೆ , ಸರ್ಕಾರ ಈಗಲಾದರೂ ಮತ್ತೊಬ್ಬ ದಕ್ಷ ಅಧಿಕಾರಿಯನ್ನು ಕೂಡಲೇ ಹಾಕಲಿ ಎಂದು ಕೋರಿದರು .

ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಕೆ

ರಾಜ್ಯ ಸರ್ಕಾರ ರಾಜ್ಯದ ೧೪೫೦೦ ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸಿದೆ .೩೩ ಸಾವಿರ , ಕನಿಷ್ಠ ೨೬ ಸಾವಿರ ವೇತನ ನಿಗದಿ ಮಾಡಿದೆ , ಈ ಉದಾರತೆಗಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ , ಸಚಿವ ಅಶ್ವಥನಾರಾಯಣ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು . ಪ್ರತಿ ತಿ೦ಗಳು ಸ೦ಬಳ ಸಿಗಲಿದೆ . ಮುಂದಿನ ದಿನಗಳಲ್ಲಿ ಸೇವಾ ಭದ್ರತೆ ಕುರಿತು ಹೋರಾಟಕ್ಕೆ ನಿಮ್ಮೊಂದಿಗೆ ನಾನು ಇರುವ ಜೆಒಸಿ ಶಿಕ್ಷಕರನ್ನು ಖಾಯಂ ಮಾಡಿಲ್ಲವೇ , ಅರಿತು ಕೆಲಸಕ್ಕೆ ಬನ್ನಿ ಎ೦ದು ಮನವಿ ಮಾಡಿದರು .

ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ
ತಮ್ಮ ಶಾಸಕರ ನಿಧಿಯಿಂದ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನೀಡಿ ಮಾತನಾಡಿದ ವಿಧಾನ ಪರಿಷತ್ ಶಾಸಕ ಚಿದಾನಂದ ಎಂ ಗೌಡ , ಕೋವಿಡ್ ೧,೨,೩ ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ , ಜನರ ಜೀವ ರಕ್ಷಣೆಗೆ ಒತ್ತು ನೀಡಿದ್ದು , ಆಸ್ಪತ್ರೆಗಳಲ್ಲಿ ಅಮೂಲಾಗ್ರ ಬದಲಾವಣೆ ತಂದು ವೈದ್ಯರ ಕೊರತೆ , ಆಕ್ಸಿಜನ್ ಕೊರತೆ ನೀಗಿಸಲಾಗಿದೆ ಎಂದು ತಿಳಿಸಿದರು . ಸರ್ಕಾರದ ಕಮದಿಂದ ಸರ್ಕಾರಿ ಆಸತ್ರೆಗಳ ಮೇಲಿನ ಅಲವಂಬನೆ ಹೆಚ್ಚಿರುವುದು ಉತ್ತಮ ಬೆಳವಣಿಗೆಯಾಗಿದೆ , ಜೀವಗಳನ್ನು ಉಳಿಸುವ ಕೆಲಸ ಈ ಆಸ್ಪತ್ರೆಗಳಿಂದಲೇ ಸಾಧ್ಯ ಎಂಬುದು ಖಾತರಿಯಾಗಿದೆ ಎಂದು ತಿಳಿಸಿದರು . ಮೊಬೈಲ್ ಐಸಿಯು ಇರುವ ಸುಸಜ್ಜಿತ ಆಂಬ್ಯುಲೆನ್‌ಗೆ ಜಿಲ್ಲಾಸ್ಪತ್ರೆಯಿಂದ ಇದ್ದ ಬೇಡಿಕೆ ಈಡೇರಿಸಿದ್ದು , ಇದನ್ನು ರೋಗಿಗಳ ಜೀವ ಉಳಿಸಲು ಸದುಪಯೋಗ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು . ಈ ಸಂದರ್ಭದಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ರಘುನಾಥರೆಡ್ಡಿ.ಆರ್‌ಎಂಒ ಬಾಲಸುಂದರ್‌ , ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ , ಜಿಲ್ಲಾವಕಾರ ಎಸ್.ಬಿ.ಮುನಿವೆಂಕಟಪ್ಪ , ನಗರಸಭಾ ಸದಸ್ಯ ಎಸ್‌.ಆರ್‌.ಮುರಳಿಗೌಡ , ನಗರಾಧ್ಯಕ್ಷ ತಿಮ್ಮರಾಯಪ್ಪ , ಮಾಗೇರಿ ನಾರಾಯಣಸ.ಕಂಬೋಡಿನಾರಾಯಣ ಸ್ವಾಮಿಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ ಪಕ್ಷದ ಪದಾಧಿಕಾರಿಗಳಾದ ಮಮತಾ , ತೇಜು , ವಿಜಯಕುಮಾರ್‌ , ಚಿನ್ನಾಪುರ ನಾರಾಯಣಸ್ವಾಮಿ , ಸತ್ಯನಾರಾಯಣರಾವ್ ಸಹಾದಿ ವಿಜಯಕುಮಾರ್‌ , ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ವಿಜಾಂಚಿ ಕೆ.ವಿಜಯ್‌ ಮತ್ತಿತರರಿದ್ದರು .