ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ – ಸಿ.ಹೆಚ್.ಗಂಗಾಧರ್‌

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ: ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಿಗೆ ಗಮನ ನೀಡದೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾಭಾಸ್ಯಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್.ಗಂಗಾಧರ್ ಅವರು ತಿಳಿಸಿದರು . ಇಂದು ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ . ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ ( POCSO Act – 2012 ) ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಮಕ್ಕಳ ಮೇಲೆ ಯಾವುದೇ ವ್ಯಕ್ತಿ ಲೈಂಗಿಕ ಅತ್ಯಾಚಾರ ಮಾಡಿದರೆ , 7 ವರ್ಷ ಕಠಿಣ ಶಿಕ್ಷೆ ಅಥವಾ ಜೀವಿತಾವಧಿ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ . ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗಾಗಿ ಬಳಸುತ್ತಿದ್ದಾರೆ . ಇವು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ ಎಂದು ಅವರು ತಿಳಿಸಿದರು . ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರಮೇಶ್.ಎಂ ಅವರು ಮಾತನಾಡಿ ಹಲ್ಲೆ , ಪ್ರಚೋಧನೆ , ಅಶ್ಲೀಲ ವಿಡಿಯೋ ಸಂಗ್ರಹಣೆ ಮಾಡುವುದು ಬೇರೊಬ್ಬರಿಗೆ ಕಳುಹಿಸುವುದು ಅಪರಾಧವಾಗಿರುತ್ತದೆ . ಇದಕ್ಕಾಗಿ ಜಿಲ್ಲೆಯಲ್ಲಿ ಪೋಕ್ಸ್ ಕಾಯ್ದೆ ಎಂಬ ಪ್ರತ್ಯೇಕ ವಿಭಾಗ ಇದೆ . 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌಜನ್ಯ ಮಾಡಿದರೆ ಅಂತವರ ವಿರುದ್ಧ ಪೋ ಕಾಯ್ದೆಯಡಿ ಶಿಕ್ಷೆ ನೀಡಲಾಗುತ್ತದೆ . ಜಿಲ್ಲೆಯಲ್ಲಿ ಮಕ್ಕಳ ಬಾಲ್ಯವಿವಾಹ , ಭಿಕ್ಷಾಟನೆ , ವೇಶ್ಯಾವಾಟಿಕೆ ಕಂಡುಬಂದಲ್ಲಿ ಯಾರೇ ಆಗಲಿ ದೂರವಾಣಿ ಸಂಖ್ಯೆ 1098 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ . ಇಂತಹ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು . ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳ ರಘುಪತಿ ಅವರು ಮಾತನಾಡಿ , ಎಲ್ಲರಿಗೂ ಕಾನೂನಿನ ಬಗ್ಗೆ ಅರಿವಿರಬೇಕು . ಇತ್ತೀಚಿನ ದಿನಗಳಲ್ಲಿ ಆತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು , ಇಂದಿನ ಯುವ ಜನರು ವಿವಾಹ ಮಾಡಿಕೊಳ್ಳುವುದಾದರೆ ತಮ್ಮ ಪೋಷಕರ ಅನುಮತಿ ಪಡೆದುಕೊಳ್ಳಿ ಎಂದು ತಿಳಿಸಿದರು . ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜ ಕಾರ್ಯವಿಭಾಗದ ಸಂಯೋಜಕರಾದ ಡಾ || ಗುಂಡಪ್ಪ ದೇವಿಕೇರಿ , ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ || ಜಯರಾಮ್.ಟಿ , ವಕೀಲರಾದ ಸುರೇಂದ್ರ ಕುಮಾರ್ , ಬಿ.ವಿ.ವೆಂಕಟೇಶ್ , ಗಮನ ಮಹಿಳಾ ಸಮೂಹದ ಶಾಂತಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .