ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ನಟಿ ರೈಮಾ ಶಿಮು, ಶವ ಗೋಣಿಚೀಲದಲ್ಲಿ ಪತ್ತೆ!

JANANUDI.COM NETWORK

ಢಾಕಾ, ಜ .19: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಖ್ಯಾತ ನಟಿ ರೈಮಾ ಇಸ್ಲಾಂ ಇವಳ ಶವವು ಢಾಕಾದ ಹೊರವಲಯದ ಕೆರಣಿಗಂಜ್ನ ಹಜರತ್ಪುರ ಸೇತುವೆಯ ಬಳಿ ಒಂದು ಗೋಣಿಚೀಲದಲ್ಲಿ ಪತ್ತೆಯಾಗಿದೆ.


ರೈಮಾ ಶಿಮು ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೈಮಾ ಶಿಮು 25 ಕ್ಕೂ ಅಧಿಕ ವಿವಿಧ ಚಲನ ಚಿತ್ರಗಳಲ್ಲಿ ನಟಿಸಿದ್ದು, ಬಾಂಗ್ಲಾದಲ್ಲಿ ಜನಪ್ರಿಯರಾಗಿದ್ದರು.