ಕೋಟ ಸಾಂತ್ ಮಾರಿ ಹಬ್ಬಕ್ಕಾಗಿ ತೆರಳುತಿದ್ದ ಸಣ್ಣ ಪ್ರಾಯದ ಮಹಿಳೆ ಅವಘಡದಿಂದ ದಾರುಣ ಸಾವು

JANANUDI.COM NETWORK


ಕೋಟಾ,ಜ.19 ಉದ್ಯಾವರದ ಗೃಹಿಣಿಯೋರ್ವರು ಬ್ರಹ್ಮಾವರದಲ್ಲಿ ರಸ್ತೆ ಅಪಘಾತಕ್ಕೆ ( ಅವರು ಸವಾರಿ ಮಾಡುತ್ತಿದ್ದ ಸ್ಕೂಟಿಯ ಟಯರ್ ಬಸ್ಟ್ ಆಗಿ)
ಒಳಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದ್ದ ಸಣ್ಣ ಪ್ರಾಯದ ಮಹಿಳೆ, ಸರಿತಾ ಪಿಂಟೊ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಕೆಲವೇ ದಿನಗಳ ಹಿಂದೆ ಕುವೈಟ್ ನಿಂದ ಆಗಮಿಸಿದ್ದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗನೊಂದಿಗೆ. ಸರಿತಾ ಪಿಂಟೊ ಕೋಟದಲ್ಲಿರುವ ತನ್ನ ತವರು ಮನೆಗೆ ಕೋಟಾ ಚರ್ಚಿನ ಸಾಂತ್ ಮಾರಿ ಹಬ್ಬಕ್ಕೆ ಒಂದು ದಿವಸ ಮೊದಲೇ ದ್ವಿಚಕ್ರ ವಾಹನದಲ್ಲಿ ಸೋಮವಾರ ತೆರಳುತ್ತಿದ್ದ ಸಂದರ್ಭದಲ್ಲಿ ಸರಿತಾ ಪಿಂಟೊ (38), ಬ್ರಹ್ಮಾವರದಲ್ಲಿ ಅವಘಡಕ್ಕೆ ತುತ್ತಾಗಿ ದಾರುಣ ಸಾವನ್ನಪ್ಪಿದ್ದಾರೆ.
ಪತಿ ಮತ್ತು ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಸರಿತಾ ಪಿಂಟೊ ತಲೆಗೆ ಗಂಭೀರ ಗಾಯಗೊಂಡಿದ್ದ ಪರಿಣಾಮ ಮಣೆಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, 2 ದಿನಗಳ ಜೀವನ್ಮರಣ ಹೋರಾಟದಲ್ಲಿದ್ದ ಸರಿತಾ ಇಂದು ಇಹ ಲೋಕ ತ್ಯಜಿಸಿದರು. ಅವರ ಬದುಕಬೇಕೆಂದು ಬಹು ಜನರ ನಿರೀಕ್ಷೆಯಾಗಿತ್ತು, ಅದಕ್ಕಾಗಿ ಚರ್ಚುಗಳಲ್ಲಿ, ಮತ್ತು ಜನರು ಪ್ರಾರ್ಥತಿಸಿದ್ದರು. ಆದರೆ ದೇವರ ಇಚ್ಚೆಯೆ ಬೇರಾಗಿದ್ದು ಅವರು ಇಹ ಲೋಕ ತ್ಯಜಿಸಿದ್ದಾರೆ.
ಅನಿತಾ ಪಿಂಟೊ ಕೋಟದವರಾಗಿದ್ದು, ಹತ್ತು ವರ್ಷಗಳ ಹಿಂದೆ ಉದ್ಯಾವರದ ಅಂಕುದ್ರು ನಿವಾಸಿ ಅನಿಲ್ ಪಿಂಟೊರವರೊಂದಿಗೆ ವಿವಾಹವಾಗಿದ್ದ ಸರಿತಾ, ಸರಳ ಮತ್ತು ಶಾಂತ ಸ್ವಭಾವದವರಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಪತಿ, ಪುತ್ರಿ, ಪುತ್ರ, ತಾಯಿ, ಸಹೋದರ ಧರ್ಮಗುರು, ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಗುರುವಾರ ಜ.20 ರಂದು ಉದ್ಯಾವರದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.