ಮಾಹಿತಿ ಹಕ್ಕಿಗೆ ಸ್ಪಂದಿಸದಿದ್ದಕ್ಕೆ ಶ್ರೀನಿವಾಸಪುರ ಪೊಲೀಸ್ ನಿರೀಕ್ಷಕರಿಗೆ ರೂ .5,000 / -ಗಳ ದಂಡ

JANANUDI.COM NETWORK

ಶ್ರೀನಿವಾಸಪುರ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು, ಈ ಹಿಂದೆ. ಆಯೋಗವು ಸದರಿ ಪ್ರಕರಣವನ್ನು ದಿನಾಂಕಃ10.11,2021ರಂದು ವಿಚಾರಣೆ ನಡೆಸಿ, ಶ್ರೀ ಎಸ್. ಮಂಜುನಾಥ, ಪ್ರದ.ಸ. ಲೆಕ್ಕ ಶಾಖೆ, ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ರವರ ವಿರುದ್ಧ ತನಿಖೆ ನಡೆಸಿ, ಆಯೋಗಕ್ಕೆ ತನಿಖಾ ವರದಿಯನ್ನು ಮುಂದಿನ ವಿಚಾರಣಾ ದಿನಾಂಕದ ಒಳಗಾಗಿ ಪ್ರಕರಣದ ಕಡತದಲ್ಲಿರುವಂತೆ ಆಯೋಗಕ್ಕೆ ಸಲ್ಲಿಸಬೇಕೆಂದು ಪ್ರತಿವಾದಿಯಾದ ಶ್ರೀ ರವಿಕುಮಾರ್, ಪೊಲೀಸ್ ನಿರೀಕ್ಷಕರು, ಶ್ರೀನಿವಾಸಮರ’ ಪೊಲೀಸ್ ಠಾಣೆ, ಶ್ರೀನಿವಾಸಪುರ, ಕೋಲಾರ ಜಿಲ್ಲೆ ರವರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 18(3)(ಎ)ಸ(ಡಿ)ರನ್ಹಯ ನಿರ್ದೇಶಿಸಿ, ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 3005ರ ಕಲಂ 20(1) ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿತ್ತು.


ಆದರೆ ಪ್ರತಿವಾದಿಯಾದ ಶ್ರೀ ರವಿಕುಮಾರ್, ಪೊಲೀಸ್ ನಿರೀಕ್ಷಕರು, ಶ್ರೀನಿವಾಸಮರ’ ಪೊಲೀಸ್ ಠಾಣೆ, ಶ್ರೀನಿವಾಸಪುರ, ಕೋಲಾರ ಜಿಲ್ಲೆ. ಇವರು ವಿಚಾರಣೆ ದಿ ಹಾಜರಿರದ ಕಾರಣ, ಆಯೋಗವು ಅವರಿಗೆ ರೂ . ೫೦೦೦/ ಗಾಲ ದಂಡ ವಿಧಿಸಿದೆ. ಈ ದಂಡವನ್ನು ಅವರ ವೇತನದಿಂದ ಕಡಿತ ಮಾಡಿಕೊಳ್ಳಬೇಕೆಂದು ಆಯೋಗ ಸೂಚಿಸಿದೆ.