ಬಾಲ್ಯ ವಿವಾಹ ಬೇಡ, ಶಿಕ್ಷಣ ಬೇಕು – ಶಿವರಾಜ್ ಕುಮಾರ್ .ಎಂ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಜೀವನ , ಆರೋಗ್ಯ , ಸಮಾನತೆ ಮತ್ತು ಮುಕ್ತವಾದ ಆಯ್ಕೆಯ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಶಿವರಾಜ್‌ಕುಮಾರ್.ಎಂ ರವರು ಮಕ್ಕಳಿಗೆ ಅರಿವು ಮೂಡಿಸಿದರು . ಬೆಗಿಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸಮಾಜಕಾರ್ಯ ವಿಭಾಗ , ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೋಲಾರ ಮತ್ತು ಸರ್ಕಾರಿ ಪ್ರೌಢಶಾಲೆ ಬೆಗ್ಲಿಹೊಸಹಳ್ಳಿ ರವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಬಾಲ್ಯವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತಾದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ಕಾರ್ಯಕ್ರಮದ ಅಧ್ಯಕತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವನಾಯ್ಕ .ಬಿ.ಆರ್‌ ರವರು ವಹಿಸಿಕೊಂಡಿದ್ದರು . ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿ ರಕ್ಷಣಾಧಿಕಾರಿಗಳಾದ ಶ್ರೀನಾಥ್ , ಮತ್ತು ಕಾನೂನು ಪರಿವೀಕ್ಷಣಾಧಿಕಾರಿಗಳಾದ ನ ೦ ದನ ರವರು ಬಾಲ್ಯವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತಂತೆ ಮಾಹಿತಿ ನೀಡಿದರು . ಈ ಕಾರ್ಯಕ್ರಮಕ್ಕೆ ಸಂಪನ್ಮೂಲಗಳನ್ನು ಒದಗಿಸಿದಂತಹ ಬೆಗ್ಲಿಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ಚರಣ್ ರಾಜ್ .ಕೆ.ಸಿ , ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸುಚಿತ್ .ಪಿ.ಎಂ , ಶಾಲೆಯ ಮುಖ್ಯೋಪಾಧ್ಯಾಯ ರವರುಗಳಿಗೆ ಪ್ರಶಿಕ್ಷಣಾರ್ಥಿಗಳು ಧನ್ಯವಾದಗಳನ್ನು ತಿಳಿಸಿದರು .

ಈ ಸಂದರ್ಭದಲ್ಲಿ ಜಿಲ್ಲಾಮಕ್ಕಳ ರಕ್ಷಣಾ ಘಟಕದ ಶ್ರೀನಾಥ್ , ನಂದನ , ಪವಿತ್ರ , ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯತಿಯ ಪಿ.ಡಿ.ಓ ಮಧುಮತಿ ಶಾಲೆಯ ಶಿಕ್ಷಕವೃಂದ , ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳಾದ ವೇಣು .ಎನ್ , ಸುಪ್ರಿಯ .ಕೆ.ವಿ , ಸೌಮ್ಯ .ಸಿ , ನವೀನ್‌ ಕುಮಾರ್‌ .ಜೆ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು , ಆಶಾ ಕಾರ್ಯಕರ್ತರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು .