ಕೋವಿಡ್ ಎಡ್ ಉಲ್ಬಣ ಕಚೇರಿ ಸಿಬ್ಬಂದಿಗೆ ಶೇ .೫೦ : ೫೦ ಅನುಪಾತದಲ್ಲಿ ಹಾಜರಿಗೆ ಅವಕಾಶ ಕಲ್ಪಿಸಲು ಡಿಸಿಗೆ ಸುರೇಶ್‌ಬಾಬು ಮನವಿ

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : – ಕೋವಿಡ್ ಹಾಗೂ ಓಮಿಕಾನ್ ವೈರಸ್ ಶೀಘ್ರಗತಿಯಲ್ಲಿ ಹರಡುತ್ತಿದ್ದು , ಸಾರ್ವಜನಿಕರು ಹಾಗೂ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಕಚೇರಿಗಳಲ್ಲಿ ೫೦ : ೫೦ ರ ಅನುಪಾತದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಪಧಾರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಯುಕೇಶ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಬಂಧ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಅವರು , ಕೋವಿಡ್ ಸೋಂಕು ಈಗಾಗಲೇ ಜಿಲ್ಲೆಯಲ್ಲಿ ಉಲ್ಬಣಿಸುತ್ತಿದೆ.
ಜಿಲ್ಲಾಧಿಕಾರಿಗಳ ಕಚೇರಿ ಒಳಗೊಂಡಂತೆ ಅನೇಕ ಇಲಾಖೆಗಳ ಕಚೇರಿಗಳಲ್ಲಿ

ಈಗಾಗಲೇ ೩೦ ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು ತಾಗಿ ಪಾಸಿಟೀವ್ ವರದಿಯೂ ಬಂದಿದೆ ಎಂದು ತಿಳಿಸಿದರು.ಸೋಂಕು ಇದೇ ರೀತಿ ಉಲ್ಬಣಗೊಂಡರೆ ಕಚೇರಿಗಳೆಲ್ಲಾ ಸೀಲ್‌ಡೌನ್‌ ಮಾಡಬ ಸಂದರ್ಭ ಒದಗಿ ಬರುವ ಆತಂಕವೂ ಇದ್ದು , ಇದನ್ನು ತಪ್ಪಿಸಲು ಕಚೇರಿಗಳಲ್ಲಿ ಸಿಬ್ಬಂದಿ ಶೇ .೫೦ : ೫೦ ಅನುಪಾತದಲ್ಲಿ ಕೆಲಸ ನಿರ್ವಹಿಸಲು ಆದೇಶಿಸಬೇಕು ಎಂದು ಕೋರಿದರು.


ಸರ್ಕಾರಿ ನೌಕರರು ಕೋಡ್ ೨ ಮತ್ತು ೩ ನೇ ಅಲೆಯಲ್ಲೂ ಆತಂಕವನ್ನು ಹಿಮ್ಮೆಟ್ಟಿ ಕರ್ತವ್ಯ ನಿರ್ವಹಿಸಿದ್ದೇವೆ , ಕೋವಿಡ್ ವಾರಿಯರ್ ಆಗಿಯೂ ಕೆಲಸ ಮಾಡಿ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡಿದ್ದೇವೆ. ಈ ಸಂದರ್ಭದಲ್ಲಿ ಅನೇಕ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರು.


ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆ ಸಲ್ಲಿಸುವ ನೌಕರರಿಗೆ ೫೦:೫೦ ಅನುಪಾತದಲ್ಲಿ ಹಾಜರಿಗೆ ಅವಕಾಶ ಕಲ್ಪಿಸಲು ಕೋರಿದರು . ಕೋವಿಡ್ ೩ ನೇ ಅಲೆಯ ಆತಂಕದಲ್ಲಿಯೂ ಕರ್ತವ್ಯ ನಿರ್ವಹಣೆಗೆ ನಾವು ಸಿದ್ಧರಿದ್ದೇವೆ ಆದರೆ ಸೋ ೦ ಕು ವ್ಯಾಪಿಸುವುದನ್ನು ತಡೆಯಲು ಶೇ .೫೦ : ೫೦ ಅನುಪಾತದಲ್ಲಿ ಕಚೇರಿಗೆ ಸಿಬ್ಬಂದಿ ಬರುವಂತೆಯೂ , ಸಾರ್ವಜನಿಕರು ಕಚೇರಿಗಳಿಗೆ ಬರುವಾಗ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆಯೂ ಅಗತ್ಯ ಕ್ರಮವಹಿಸಬೇಕಾದ ಅನಿವಾರ್ಯತೆ ಇದೆ ಎ ೦ ದು ತಿಳಿಸಿದರು . ಮನವಿಗೆ ಸ ೦ ದಿಸಿದ ಪಭಾರಿ ಜಿಲ್ಲಾಧಿಕಾರಿ ಯುಕೇಶ್‌ಕುಮಾರ್ , ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಅಗತ್ಯ ಕಮವಹಿಸುವುದಾಗಿ ಭರವಸೆ ನೀಡಿದರು . ಈ ಸಂದರ್ಭದಲ್ಲಿ ನೌಕರರ ಸಂಘದ ಗೌರವಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ , ಪ್ರಧಾನ ಕಾ ರ್ಯದರ್ಶಿ ಎಸ್.ಚೌಡಪ್ಪ , ಖಜಾಂಚಿ ಕೆ.ವಿಜಯ್ , ಹಿರಿಯ ಉಪಾಧ್ಯಕ್ಷ ಸುಬ್ರಮಣಿ , ಉಪಾದಕರಾದ ಮಂಜುನಾಥ್ , ಅಜಯ್ ಕುಮಾರ್.ಎಂ.ನಾಗರಾಜ್ ಮತ್ತಿತರರಿದ್ದರು .