ಶ್ರೀನಿವಾಸಪುರ: ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ದೇವತಾ ವಿಗ್ರಹಗಳಿಗೆ ವಿವಿಧ ಅಲಂಕಾರ ಮಾಡಲಾಗಿತ್ತು.
ತಾಲ್ಲೂಕಿನ ಗನಿಬಂಡ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯ, ಯಲ್ದೂರಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಸಿ.ಹೊಸೂರಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಯಲ್ದೂರಿನ ಕೋದಂಡರಾಮಸ್ವಾಮಿ ದೇವಾಲಯ, ವೈ.ಹೊಸಕೋಟೆಯ ವೆಂಕಟರಮಣಸ್ವಾಮಿ ದೇವಾಲಯ, ಜೆವಿ ಕಾಲೋನಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಶ್ರೀನಿವಾಸಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಹಳೆಪೇಟೆಯ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಎಲ್ಲ ದೇವಾಲಯಗಳಲ್ಲೂ ಕೋವಿಡ್ ನಿಯಮ ಪಾಲನೆ ದೃಷ್ಟಿಯಿಂದ ಸರಳವಾಗಿ ಪೂಜಾ ಕಾರ್ಯ ಮುಗಿಸಲಾಯಿತು. ಕೊರೊನಾ ಭಯದಿಂದಾಗಿ ಜನರು ದೇವಾಲಯಗಳಿಗೆ ಭೇಟಿ ನೀಡುವ ಉತ್ಸಾಹ ತೋರಲಿಲ್ಲ. ಎಲ್ಲ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಎಲ್ಲೇ ಆಗಲಿ ಜಾತ್ರೆ ಅಥವಾ ಉತ್ಸವದ ವಾತಾವರಣ ಇರಲಿಲ್ಲ.
ದೇವಾಲಯಗಳಲ್ಲಿ ಸ್ಯಾನಿಟೈಸರ್ ಬಳಕೆ ಸಾಮಾನ್ಯವಾಗಿತ್ತು. ದೇವರ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಧರಿಸಿದ್ದರು. ಅಂತರ ಪಾಲನೆ ಮಾಡಿ ದೇವರ ದರ್ಶನ ಪಡೆದು ಹಿಂದಿರುಗಿದರು.

ಗನಿಬಂಡ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯ


ಶ್ರೀನಿವಾಸಪುರ ತಾಲ್ಲೂಕಿನ ಗನಿಬಂಡ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಗುರುವಾರ ವೈಕುಂಠ ಏಕಾದಶಿ ಪ್ರಯುಕ್ತ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಂಕರ ಮಠದ ಸಮೀಪ ರಾಮ ಮಂದಿರ


ಶ್ರೀನಿವಾಸಪುರದ ಶಂಕರ ಮಠದ ಸಮೀಪ ರಾಮ ಮಂದಿರದಲ್ಲಿ ಗುರುವಾರ ವೈಕುಂಠ ದ್ವಾರದ ಮೂಲಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ರಾಮ ದೇವಾಲಯಲಯದಲ್ಲಿ

ಶ್ರೀನಿವಾಸಪುರದ ರಾಮ ದೇವಾಲಯಲಯದಲ್ಲಿ ಗುರುವಾರ ವೈಕುಂಠ ಏಕಾದಶಿ ಪ್ರಯುಕ್ತ ರಾಮ, ಸೀತಾ, ಲಕ್ಷ್ಮಣ ಮೂರ್ತಿಗಳಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.

ಶಿರಡಿ ಸಾಯಿಬಾಬಾ ದೇವಾಲಯಲಯದಲ್ಲಿ


ಶ್ರೀನಿವಾಸಪುರದ ಶಿರಡಿ ಸಾಯಿಬಾಬಾ ದೇವಾಲಯಲಯದಲ್ಲಿ ಗುರುವಾರ ವೈಕುಂಠ ಏಕಾದಶಿ ಪ್ರಯುಕ್ತ ಬಾಬಾ ವಿಗ್ರಹಕ್ಕೆ ವೆಂಕಟರಮಣಸ್ವಾಮಿ ಅಲಂಕಾರ ಮಾಡಲಾಗಿತ್ತು.