ವರ್ಗಾವಣೆ ದುರದೃಷ್ಟಕರ ಜಿಲ್ಲಾಧಿಕಾರಿ ಡಾ.ಆರ್‌ . ಸಲ್ವಮಣಿ ಆಡಳಿತ ಪಕ್ಷ ಆತ್ಮಾವಲೋನ ಮಾಡಿಕೊಳ್ಳಲಿ – ಗೋವಿಂದರಾಜು

ವರದಿ :ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ಹಲವಾರು ವರ್ಷಗಳ ನಂತರ ಕೋಲಾರ ಜಿಲ್ಲೆಗೆ ಬಂದಿದ್ದ ಉತ್ತಮ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ , ಆಡಳಿತ ಪಕ್ಷವಾದ ಬಿಜೆಪಿಯವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಿಡಿಕಾರಿದ್ದಾರೆ .

ಈ ಕುರಿತು ಹೇಳಿಕೆ ನೀಡಿರುವ ಅವರು , ಡಿ.ಕೆ.ರವಿಯವರ ನಂತರ ಜಿಲ್ಲೆಗೆ ಡಾ.ಆರ್.ಸೆಲ್ವಮಣಿಯವರು ಓರ್ವ ಉತ್ತಮ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು , ಆದರೆ ಕೇವಲ ೧೦ ತಿಂಗಳಲ್ಲೇ ವರ್ಗಾವಣೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ . ಜಿಲ್ಲೆ ಹಾಗೂ ನಗರದ ಅಭಿವೃದ್ಧಿ ಕುರಿತಂತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು , ಸೆಲ್ವಮಣಿ ಅವರ ವರ್ಗಾವಣೆ ಹಿ೦ದೆ ಕಾಣದ ಕೈಗಳು ಕೆಲಸ ಮಾಡಿರಬಹುದು ಎಂದು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿಯ ಶಾಸಕರಾರು ಇಲ್ಲ. ಇದಕ್ಕೆ ಸಂಸದರು ಮಾತ್ರ ಉತ್ತರ ನೀಡಬೇಕು , ಆಡಳಿತ ಪಕ್ಷದವರು ಓರ್ವ ಉತ್ತಮ ಡಿಸಿ ವರ್ಗಾವಣೆ ಸರಿಯೇ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ . ನಗರವನ್ನು ಸುಂದರಗೊಳಿಸುವ ಕನಸು ಹೊಂದಿದ್ದ ಡಿಸಿಯವರು ಇತ್ತೀಚೆಗೆ ಜಿಲ್ಲಾಸ್ಪತೆಗೆ ಮೂಲ ಸೌಲಭ್ಯಗಳ ಅಭಿವೃದ್ಧಿ ಕುರಿತಂತೆಯೂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದರು . ಇಂತಹ ಉತ್ತಮ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ಜಿಲ್ಲೆಗೆ ದೋಹ ಬಗೆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ .
ಕೋವಿಡ್ ನಿರ್ವಹಣೆ , ನಗರದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಜನರ ಸಮಸ್ಯೆಗಳಿಗೆ ದಿಢೀರ್‌ ಸ್ಪಂದಿಸುತ್ತಿದ್ದ ಡಾ.ಆರ್.ಸೆಲ್ವಮಣಿ , ೧೦ ತಿಂಗಳ ಅಧಿಕಾರಾವಧಿಯಲ್ಲೇ ಜನರ ಮನಗೆದಿದರು ಎಂದು ತಿಳಿಸಿದ್ದಾರೆ .
ಕೋಲಾರ ಜಿಲ್ಲೆಯ ದುರಾದೃಷ್ಟವೋ ಏನೋ , ಇಲ್ಲಿಗೆ ಯಾರೇ ಉತ್ತಮ ಅಧಿಕಾರಿ ಬಂದರೂ ಹೆಚ್ಚು ಕಾಲ ಉಳಿಸುವುದಿಲ್ಲ . ಅದೇ ಜಿಲ್ಲೆಯ ಅಭಿವೃದ್ಧಿಗೆ ಶಾಪವಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ .
ಜಿಲ್ಲೆಯ ಸಮಸ್ಯೆಗಳನ್ನು ಅರಿತು ಕ್ರಿಯಾಶೀಲರಾಗುವ ಮುನ್ನವೇ ಅವರ ವರ್ಗಾವಣೆ ಎಷ್ಟು ಸರಿ ಎಂದು ಪಶ್ನಿಸಿರುವ ಅವರು , ಕನಿಷ್ಟ ೨ ವರ್ಷವಾದರೂ ಅವರನ್ನು ಜಿಲ್ಲೆಯಲ್ಲಿ ಉಳಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ .
ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿಯೆತ್ತಬೇಕು , ಅವರ ವರ್ಗಾವಣೆ ರದ್ದುಗೊಳಿಸಿ ಇಲ್ಲಿ ಕನಿಷ್ಠ ೨ ವರ್ಷವಾದರೂ ಮುಂದುವರೆಸುವ ಆಲೋಚನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ .