ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗಕ್ಕೆ ಸಾಲಸೌಲಭ್ಯ ಒದಗಿಸಿ , ಬಡತನ ನಿರ್ಮೂಲನೆಗೆ ಸಹಕರಿಸಿ – ಡಾ.ಆರ್.ಸೆಲ್ವಮಣಿ

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ನಗರ ಪ್ರದೇಶದ ಬಡ ಜನತೆ ಮತ್ತು ಗುಂಪುಗಳಿಗೆ ಅವರಲ್ಲಿನ ಕುಶಲತೆ , ತರಬೇತಿ , ಆಸಕ್ತಿ ಆಧರಿಸಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಿರು ಉದ್ದಿಮೆ ಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುವ ಮೂಲಕ ಬಡತನ ನಿರ್ಮೂಲನೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು . ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ( ಡೇ – ನಲ್ ) ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ , ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮ ಹಾಗೂ ಪಿಎಂನಿಧಿ ಯೋಜನೆಯ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು . ನಗರ ಪ್ರದೇಶದ ಬಡ ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ಅವರಲ್ಲಿ ಇರುವ ಕೌಶಲ್ಯತೆ ಪರಿಗಣಿಸಿ ಸ್ವಯಂ ಉದ್ಯೋಗ ಆರಂಭಿಸಲು ನೆರವಾದರೆ ಅದರಿಂದ ನಿರುದ್ಯೋಗ ಸಮಸ್ಯೆಗೂ ಕಡಿವಾಣ ಬೀಳುತ್ತದೆ , ಸಮಾಜದಲ್ಲಿ ಆರ್ಥಿಕ ತಾರತಮ್ಯವೂ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು . ಈ ಹಿನ್ನಲೆಯಲ್ಲಿ ಸ್ವಯಂ ಉದ್ಯೋಗ ಉದ್ದಿಮೆಗಳು ಮತ್ತು ಕಿರು ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ವ್ಯಕ್ತಿಗತ ಮತ್ತು ಗುಂಪು ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಆರ್ಥಿಕ ನೆರವು ನೀಡಲು ಹಾಗೂ ಬೀದಿ ಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗೆ ಅಗತ್ಯವಾದ ಸಾಲ ಸೌಲಭ್ಯ ನೀಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು .
ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಲ್ಲಿ ಸಾಕಷ್ಟು ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶವಿದ್ದು , ಈ ಹಿನ್ನೆಲೆಯಲ್ಲಿ ಸ್ವಯಂ ಉದ್ಯೋಗ ಯೋಜನೆಗಳಿಗೆ ಸಾಲ ಮಂಜೂರಾತಿಯನ್ನು ತರಿತಗೊಳಿಸಬೇಕು ಎಂದು ತಿಳಿಸಿದರು . ಅನಗತ್ಯ ಕಾರಣಗಳನ್ನು ನೀಡುವ ಮೂಲಕ ನಿಜವಾದ ಉದ್ಯಮಿಗಳಿಗೂ ನೆರವು ನೀಡದೇ ಅಲೆದಾಡಿಸುವ ದೂರುಗಳು ಇವೆ , ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕು , ಉದ್ಯಮ ಸ್ಥಾಪಿಸುವ ಬದ್ಧತೆ ಇರುವವರ ಕುರಿತು ಸ್ಥಳೀಯವಾಗಿ ಪರಿಶೀಲನೆ ನಡೆಸಿ ಸಾಲ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರೆ ನೀಡಿದರು . ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ ಮಾತನಾಡಿ , ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ – ನಲ್ಸ್‌ ಯೋಜನೆಯಡಿ ನಗರ ಬಡತನ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು , ವಿವಿಧ ರೀತಿಯ ಸ್ವಯಂ ಉದ್ಯೋಗಗಳಿಗೆ ಮಾರುಕಟ್ಟೆಯಲ್ಲಿ ಅವಕಾಶವಿದೆ ಎಂದು ತಿಳಿಸಿದರು .
ಈ ನಿಟ್ಟಿನಲ್ಲಿ ಸಿಎಂಕಕವ್ಯ ಹಾಗೂ ಪಿಎಂಕಕಟ್ಟಿ ಯೋಜನೆಯಡಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸರ್ಕಾರದ ವಿವಿಧ ಸ್ವಯಂ ಉದ್ಯೋಗ ಯೋಜನೆಗಳಿಗೆ ಬ್ಯಾಂಕ್ ಸಾಲದ ಬೆಂಬಲದೊಂದಿಗೆ ಜಾರಿಗೊಳಿಸಬಹುದಾಗಿದೆ ಎಂದು ತಿಳಿಸಿದರು . ಆತ್ಮನಿರ್ಭರ ಭಾರತದ ಪ್ರಧಾನಿಯವರ ಆಶಯದಂತೆ ಉದ್ಯೋಗ ಸ್ಥಾಪನೆಗೆ ಒತ್ತು ನೀಡುವ ಮೂಲಕ ಸಮಾಜದಲ್ಲಿನ ಬಡತನ ಹೋಗಲಾಡಿಲು ಕ್ರಮವಹಿಸಬೇಕು . ಸಾಲ ಸೌಲಭ್ಯ ಒದಗಿಸಿದರೆ ಸ್ವಾವಲ ೦ ಬನೆಯ ಜತೆಗೆ ಮತ್ತಷ್ಟು ನಿರುದ್ಯೋಗಿಗಳಿಗೂ ಉದ್ಯೋಗದ ಅವಕಾಶಗಳು ಸಿಗಲಿದೆ ಎಂದು ಅಭಿಪ್ರಾಯಪಟ್ಟರು .
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ರಾಪುರಿ ಮಾತನಾಡಿ , ಕಿರು ಉದಿ ಮೆ ಪಾರಂಭಿಸಲು ಯೋಜನೆಗಳು ಸಂಪನ್ಮೂಲ ಅಗತ್ಯತೆ , ವೈಯುಕ್ತಿಕ ಹಾಗೂ ಗುಂಪು ಸಾಲ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು . ಪ್ರಧಾನ ಮಂತ್ರಿ ಆತ್ಮನಿರ್ಭಾರ್ ಯೋಜನೆಯಡಿಯ ಪಿಎಂ ಸೈನಿಧಿಯ ಬಗ್ಗೆ ವಿವರವಾಗಿ ತಿಳಿಸಿಕೊಟ್ಟ ಅವರು ಈ ಯೋಜನೆಯಡಿ ಕೌಶಲ್ಯತೆ ಇರುವ ಉದ್ಯಮಿಗಳು ಮುಂದೆ ಬಂದರೆ ಸಾಲ ಸೌಲಭ್ಯವೂ ಸಿಗಲಿದೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಕೆಜಿಎಫ್ ನಗರಸಭೆ ಸಮುದಾಯ ಸಂಘಟಕರಾದ ಬಿ.ಶಿವಕುಮಾರ್ , ಬಂಗಾರಪೇಟೆ ಸಮುದಾಯ ಸಂಘಟಣಾಧಿಕಾರಿ ವೆಂಕಟೇಶ್ , ಮಾಲೂರು ಸಂಘಟನಾಧಿಕಾರಿ ಮಂಜುನಾಥ್ ಮತ್ತಿತರರಿದರು .