ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ವೃತ್ತಿ ತರಬೇತಿ ಕೇಂದ್ರದ ಹೊಲಿಗೆ ತರಬೇತಿಯ ಉದ್ಘಾಟನೆ

JANANUDI.COM NETWORK

ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ವೃತ್ತಿ ತರಬೇತಿ ಕೇಂದ್ರದ ಭಾಗವಾಗಿ ಹೊಲಿಗೆ ತರಬೇತಿಯ ಉದ್ಘಾಟನೆಯು ದಿನಾಂಕ 10.01.2022 ರಂದು ನಡೆಯಿತು. ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ತಲ್ಲೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಿರೀಶ್‌ರವರು ನೆರವೇರಿಸಿ ವೃತ್ತಿ ತರಬೇತಿ ಕೇಂದ್ರಗಳು ಸ್ಥಳೀಯವಾಗಿ ಜನರಲ್ಲಿ ಕೌಶಲ್ಯವನ್ನು ಬೆಳೆಸಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅರಂಭಿಸಿರುವ ಈ ತರಬೇತಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಈ ಹೊಲಿಗೆ ತರಬೇತಿ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಡಿಎಮ್.ಸಿ ಸದಸ್ಯರು ಮತ್ತು ನಿವೃತ್ತ ಶಿಕ್ಷಕರಾದ ಮಹಾಲಿಂಗ ಕೊಠಾರಿ ಮತ್ತು ತಲ್ಲೂರು ರೋಟರಿ ಸಮುದಾಯ ದಳದ ಮಾಜಿ ಅಧ್ಯಕ್ಷರಾದ ಸದಾನಂದ ಆಚಾರ್ಯ ಹಾಗೂ ಹೊಲಿಗೆ ತರಬೇತುದಾರರಾದ ಶ್ರೀಮತಿ ಮಹಾಲಕ್ಷ್ಮೀ ಉಪಸ್ಥಿತರಿದ್ದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮತ್ತೋರ್ವ ಟ್ರಸ್ಟಿ ಮನೋರಮಾರವರು ವಂದಿಸಿದರು. ನಾರಾಯಣ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾರವರು ಕಾರ್ಯಕ್ರಮ ನಿರೂಪಿಸಿದರು.