ಮನುಷ್ಯನಿಗೆ ಹಂದಿಯ ಹೃದಯ ಕಸಿ ಮಾಡಿದ್ದು ಯಶಸ್ವಿ: ವೈದ್ಯಕೀಯದಲ್ಲಿ ಹೊಸ ಮುನ್ನುಡಿ ಬರೆದ ವೈದ್ಯರು.

JANANUDI.COM NETWORK

ಹೃದ್ರೋಗದ ಕಾಯಿಲೆಯಲ್ಲಿ ಬಳಲುತಿರುವರಿಗೆ ಬದುಕಲು ಹೊಸ ಆಶಾಕಿರಣ ಮೂಡಿಬಂದಿದೆ


ವಾಶಿಂಗ್ಟನ್: ಹಂದಿಯ ಹೃದಯವನ್ನು ಮಾನವನಿಗೆ ಕಸಿ ಮಾಡುವಲ್ಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವೈದ್ಯಕೀಯದಲ್ಲಿ ಕ್ಷೇತ್ರದಲ್ಲಿ ವಿನೂತನ ಸಾಧನೆಯನ್ನು ಮಾಡಿ, ಅಮೇರಿಕದ ವೈದ್ಯರುಗಳು ವೈದ್ಯಕೀಯದಲ್ಲಿ ಹೊಸ ಮುನ್ನುಡಿ
ಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದೆಂದು ತೊರೀಸಿಕೊಟ್ಟು ಹ್ರದಯ ತೊಂದರೆ, ಹ್ರದಯ ಬದಲಿಸುವ ಸಮಸ್ಯೆಗೆ ಒಳಗಾಗಿರುವ ರೋಗಿಗಳಿಗೆ ಆಶಾ ಕಿರಣವನ್ನು ಮೂಡಿಸಿದ್ದಾರೆ. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕಾರ ಮಾಡುವ ಮೂಲಕ ಮನುಷ್ಯನ ಪ್ರಾಣ ಉಳಿಸಲು ಇನ್ನಷ್ಟು ಅವಕಾಶಗಳಿವೆ ಎಂದು ತೋರಿಸಿಕೊಟ್ಟಿದೆ.
ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ 57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಿ ಡೇವಿಡ್ ಬೆನೆಟ್ ಇವರನ್ನು ಬದುಕಿಸಲಾಗಿದೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ. ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಂಗಗಳ ಕೊರತೆಯಿರುವ ಈ ಸಂದರ್ಭದಲ್ಲಿ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಅನ್ವೇಷಣೆಗಳು ನಡೆಯುತ್ತಾ ಇತುವಾಗ ಈಗ ಅತ್ಯಂತ ಅಗತ್ಯವಿರುವುದು, ಮಾನವನಿಗೆ ಪರ್ಯಾಯವಾದ ಕಿಡ್ನಿ. ಮಾನವನಿಗೆ ಪರ್ಯಾಯವಾದ ಕಿಡ್ನಿಯನ್ನು ಅವಿಷ್ಕರಿಸಿದರೆ, ಹಲವರ ಪ್ರಾಣ ಉಳಿಯುವುದು ಮಾತ್ರವಲ್ಲ, ಕಿಡ್ನಿ ತೊಂದರೆಯಿಂದ ನರಳುತ್ತಾ ಇರುವರ ಸಮಸ್ಯೆ ಪರಿಹಾರವಾಗಿ ಅನೇಕ ಜನರ ಪ್ರಾಣ ಉಳಿಯುವುದು ಖಂಡಿತ.