ಖ್ಯಾತ ಹಿರಿಯ ಸಾಹಿತಿ ಚಂಪಾ (ಚಂದ್ರಶೇಖರ್ ಪಾಟೀಲ) ಇನ್ನಿಲ್ಲ

JANANUDI.COM NETWORK

ಬೆಂಗಳೂರು: ಕವಿ, ನಾಟಕಕಾರ, ಕನ್ನಡಪರ ಹೋರಾಟಗಾರ ಸಂಕ್ರಮಣದ ಸಾಹಿತಿ ಎಂದೇ ಖ್ಯಾತರಾದ ಚಂದ್ರಶೇಖರ್ ಪಾಟೀಲ (ಚಂಪಾ) ಅವರು ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. 83 ವಯಸ್ಸಿನ ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು.ಪೆÇ್ರ.ಚಂದ್ರಶೇಖರ್ ಪಾಟೀಲ್ (ಚಂಪಾ) ನಿಧನರಾಗಿದ್ದಾರೆ.
ಅನಾರೋಗ್ಯ ದಿಂದ ಬಳಲುತ್ತಿದ್ದ ಪೆÇ್ರ.ಚಂದ್ರಶೇಖರ್ ಪಾಟೀಲ್ ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೂಲತಃ ಹಾವೇರಿ ಜಿಲ್ಲೆಯವರಾದ ಚಂಪಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿವಿಧ ನೆಲೆಗಳಲ್ಲಿ ಚಂದ್ರಶೇಖರ ಪಾಟೀಲರು ಹೆಸರು ಗಳಿಸಿದ್ದರು.
ಚಂದ್ರಶೇಖರ್ ಪಾಟೀಲ್ ಕನ್ನಡ ನಾಡಿನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ಬಹುಮುಖ ವ್ಯಕ್ತಿತ್ವದಿಂದ ಪ್ರಸಿದ್ಧರಾಗಿದ್ದರು. ಕಳೆದ ಕೆಲ ದಿನಗಳಿಂದ ಚಂಪಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಚಂಪಾ ಅವರು ಕನ್ನಡ ನಾಡು, ನುಡಿ, ಜಲ, ನೆಲ, ಸಂಸ್ಕøತಿ ರಕ್ಷಣೆಗಾಗಿ ಸದಾ ಹೋರಾಟ ಮಾಡಿಕೊಂಡು ಬಂದಿದ್ದ ಇವರು ಕನ್ನಡಪರ, ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಯುವಕರನ್ನು ಪೆÇ್ರೀತ್ಸಾಹಿಸುತ್ತಾ ಬಂದಿದ್ದರು. ಗೋಕಾಕ ಚಳುವಳಿ, ಕನ್ನಡ ಚಳುವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು, ಮಾತ್ರವಲ್ಲದೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸುಮಾರು 26 ದಿನ ಜೈಲುವಾಸವನ್ನನುಭವಿಸಿದ್ದರು. ಚಂಪಾ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ.
ಹಲವಾರು ಗಣ್ಯ ರಾಜಕಾರಣಿಗಳು ಕೂಡ ಕಂಬನಿ ಮಿಡ್ದಿದಾರೆ ಮಾಜಿ ಮುಖ್ಯ ಮಂತ್ರಿ ನನ್ನ ದೀರ್ಘ ಕಾಲದ ಮಿತ್ರರಾಗಿದ್ದ ಚಂಪಾ ಅವರು ನನ್ನ ವೈಚಾರಿಕ ಗುರುವಾಗಿದ್ದರು, ಅನ್ಯಾಯ, ಅಸಮಾನತೆ, ಸರ್ವಾಧಿಕಾರದ ವಿರುದ್ದ ಹೋರಾರಗಾರಾಗಿದ್ದ ಅವರು ಹುಟ್ಟು ಬಂಡಾಯಗಾರನೆಂದು” ಅವರ ನಿಧನಕ್ಕೆ ಅತ್ಯಂತ ಸಂತಾಪ ವ್ಯಕ್ತ ಪಡ್ಸಿದ್ದಾರೆ.