ಸಮಾಜ ಸೇವೆ ಮಾಡುವ ಕನಸನ್ನು ಸಾಕಾರೊಳಿಸ ಬೇಕಾದರೆ ಸರಕಾರಿ ಕೆಲಸಕ್ಕೆ ಸೇರಬೇಕು

JANANUDI.COM NETWORK


ಕುಂದಾಪುರ: ಸಮಾಜ ಸೇವೆಯನ್ನು ಮಾಡುವ ಕನಸನ್ನು ಸಾಕಾರೊಳಿಸ ಬೇಕಾದರೆ ಸರಕಾರಿ ಕೆಲಸಕ್ಕೆ ಸೇರಬೇಕು ಎಂದು ಕುಂದಾಪುರ ಪೋಲೀಸ್ ಠಾಣಾ ಉಪನಿರೀಕ್ಷಕರಾದ ಸದಾಶಿವ ಆರ್.ಗವರೋಜಿ ಅವರು ಹೇಳಿದರು. ಅವರು ಜನವರಿ 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಟಿಸಿ ಮಾತನಾಡಿದರು.
ನಿಷ್ಠೆ, ಕಠಿಣ ಪರಿಶ್ರಮ, ನಿರಂತರ ಓದಿನಿಂದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಿಮಗೆ ಕುತೂಹಲವಿದ್ದರೆ ಸಾಲದು ಅಥವಾ ಅರ್ಜಿ ಹಾಕಿದರೆ ಸಾಲದು ಅದಕ್ಕೆ ತಕ್ಕ ಪೂರ್ವ ತಯಾರಿಗಳು ಬೇಕಾಗುತ್ತದೆ. ನಿಮಗೆ ವಯಸ್ಸಿದೆ. ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ಅವಕಾಶಗಳಿವೆ. ಕೇವಲ ಯುಪಿಎಸ್ಸಿ ಪರೀಕ್ಷೇಗಳಲ್ಲದೇ ಸಬ್ ಇನ್‍ಸ್ಪೆಕ್ಟರ್, ಕಿರಿಯ ದರ್ಜೆ, ಹಿರಿಯ ದರ್ಜೆ ಸಹಾಯಕರು, ಗಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಾಗಿರಬಹುದು ಹೀಗೆ ಹಲವಾರು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪಡೆಯಬಹುದಾಗಿದೆ. ಅದಕ್ಕೆ ದೃಢ ನಿರ್ಧಾರ ಮತ್ತು ಪರಿಶ್ರಮ ಮತ್ತು ಆಸಕ್ತಿ ಬೇಕಾಗಿರುವುದು. ಜೊತೆಯಲ್ಲಿ ನಿಮಗೆ ನಾನು ಸಹ ತರಗತಿಗಳನ್ನು ತೆಗೆದುಕೊಳ್ಳುವ ಆಸಕ್ತಿಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕರಾದ ಹರೀಶ್ ಶೆಟ್ಟಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಉಡುಪಿ ಶಾಸಕರ ಆಪ್ತ ಸಹಾಯಕರಾದ ಗಿರೀಶ್ ಶೆಟ್ಟಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರ ಸಮಿತಿಯ ಸಂಚಾಲಕರಾದ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಡಾ.ಶುಭಕರ ಆಚಾರಿ ವಂದಿಸಿದರು. ವಿದ್ಯಾರ್ಥಿನಿ ಸಾಧನಾ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.