ಮೂಡ್ಲಕಟ್ಟೆ ಎಂ ಐ ಟಿ: ಸೈಬರ್ ಭದ್ರತೆ ಕಾರ್ಯಾಗಾರ.

JANANUDI.COM NETWORK

ಯು.ಜಿ.ಸಿ ನವದೆಹಲಿಯ  ನಿರ್ದೇಶನದಂತೆ, ರಾಷ್ಟ್ರೀಯ ಸೈಬರ್ ಭದ್ರತಾ ದಿನಾಚರಣೆ  ಅಂಗವಾಗಿ  ಮೂಡ್ಲಕಟ್ಟೆ  ಎಂಜಿನಿಯರಿಂಗ್ ಕಾಲೇಜಿನಲ್ಲಿ  ಸೈಬರ್ ಸೇಫ್ ಕ್ಯಾಂಪಸ್ ಎಂಬ ವಿಷಯದ ಮೇಲೆ ಕಾರ್ಯಾಗಾರ ನಡೆಸಲಾಯಿತು. – ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿಯ ಸೈಬರ್  ಕಾನೂನು ಹಾಗೂ  ಸೈಬರ್ ಭದ್ರತೆ ತರಬೇತುದಾರಾದ  ಡಾ.ಅನಂತ್ ಪ್ರಭು ಜಿ, ಪ್ರೊಫೆಸರ್,  ಸಹ್ಯಾದ್ರಿ ಕಾಲೇಜು ಇವರು ಆಗಮಿಸಿದ್ದರು. ಅವರು ಮಾತನಾಡಿ ವಿವಿಧ ಬಗೆಯ ಸೈಬರ್ ಕ್ರೈಮ್ ಗಳ ವಿವರ ತಿಳಿಸಿ ಅವುಗಳಿಂದ ಹೇಗೆ ಜಾಗರೂಕರಾಗಿರಬೇಕು ಎಂಬುದನ್ನ ವಿವರಿಸಿದರು.– ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳು ಯಾವ ರೀತಿಯಲ್ಲಿ ಅಂತರ್ಜಾಲಕ್ಕೆ ಸಂಭಂದಿಸಿದಂತೆ  ಸೈಬರ್ ಅಪರಾಧಿಗಳ ಕೃತ್ಯದಿಂದ ಮೋಸಕ್ಕೆ ಒಳಗಾಗಿ ತೊಂದರೆ ಅನುಭವಿಸುತ್ತಾ ಇದ್ದಾರೆ ಎಂಬುದನ್ನು ವಿವರಿಸಿ,  ಜೊತೆಗೆ ವಿವಿಧ ರೀತಿಯ  ಹ್ಯಾಕಿಂಗ್ ಗಳಿಂದ  ತಮ್ಮ ಮೊಬೈಲ್ ಹಾಗೂ ಕಂಪ್ಯೂಟರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. — ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರರಾವ್ ಮದಾನೆ, ಉಪ ಪ್ರಾಂಶುಪಾಲರಾದ  ಪ್ರೊ.ಮೆಲ್ವಿನ್ ಡಿಸೋಜ,   ಕಾಲೇಜಿನ ಡೀನ್ ಗಳು, ವಿಭಾಗ ಮುಖ್ಯಸ್ಥರು, ಸಿಬ್ಬಂದಿ  ವರ್ಗ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಶ್ವೇತ ಎಸ್ ಪರಿಚಯ ಭಾಷಣ ಮಾಡಿದರು. ಪ್ರೊ. ಪ್ರಣಾಮ್ ಆರ್ ವಂದಿಸಿದರು.  ಪ್ರೊ.ಸಾಕ್ಷಿ ಶೆಟ್ಟಿ  ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.