ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಲಸಿಕೆ ಅಭಿಯಾನಕ್ಕೆ ಚಾಲನೆ

JANANUDI.COM NETWORK


ಕುಂದಾಪುರ: ಶಾಲಾ ಕಾಲೇಜುಗಳಲ್ಲಿ 15ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕೋವಿಡ್ ವಿರುದ್ದ ಲಸಿಕೆ ನೀಡುವ ಅಭಿಯಾನ ರಾಜ್ಯಾದ್ಯಂತ ಆರಂಭಗೊಂಡಿದ್ದು, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.ಕುಂದಾಪುರದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ಡಿ ಸೋಜಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಅಸುಂತಾ ಲೋಬೋ ವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕರ ಶೆಟ್ಟಿ, ಡಾ.ಪ್ರತಿಭಾ ಕಾರಂತ,ಡಾ.ಪೂರ್ಣಿಮಾ,ದಾದಿಯಾರಾದ ಪ್ರವಿತಾ,ಅಶ್ವಿನಿ,ಸವಿತಾ,ಸಿಂಗಾರಿ,ವಿಶ್ವನಾಥ,ಕಿರಣ್, ಆಶಾ ಕಾರ್ಯಕರ್ತರಾದ ಅನಿತಾ, ಶ್ರೀಮತಿ, ಶಾಲಾ ಶಿಕ್ಷಕರಾದ ಭಾಸ್ಕರ ಗಾಣಿಗ, ಸಿಸ್ಟರ್ ಚೇತನಾ, ಪ್ರೀತಿ ಪಾಯಸ್, ಚಂದ್ರಶೇಖರ ಬೀಜಾಡಿ, ಸುಶೀಲಾ, ಸ್ಮಿತಾ ಡಿ ಸೋಜಾ, ಡೀನಾ ಪಾಯಸ್ ಮೊದಲಾದವರು ಸಹಕರಸಿದರು.