ಕುಂದಾಪುರ ರೋಜರಿ ಚರ್ಚ್: ನವೀಕರಿಸಿದ ಶೌಚಾಲಯಗಳ ಆಶಿರ್ವವಚನ

JANANUDI.COM NETWORK


ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚಿನ 450 ವರ್ಷಗಳ ಸಂಭ್ರಮ ಒಕ್ಟೋಬರ್ ತಿಂಗಳಲ್ಲಿ ಸಮಾರೋಪ ಸಂಭ್ರಮ ಕಾರ್ಯ ನಡೆದಿತು, ಈ 450 ವರ್ಷಗಳ ವಿಶೇಷ ಸಂಭ್ರಮದ ಪ್ರಯುಕ್ತ ಚರ್ಚ್ ಮಂಡಳಿ ಚರ್ಚ್ ಆಧುನಿಕರಣ ಒಳಗೊಂಡು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಯಶಸ್ವಿಪೂರ್ಣಗೊಳಿಸಿ ಕುಂದಾಪುರ ರೋಜರಿ ಮಾತಾ ಚರ್ಚ್ ನೂತನ ಇಗರ್ಜಿಯಂತೆ ಕಂಗೊಳಿಸುತ್ತದೆ.
ಅದರ ಒಂದು ಭಾಗವಾಗಿ ಶೌಚಾಲಯ ನವೀಕ್ರತ ಗೊಳಿಸುವ ಯೋಜನೆ ಹಮ್ಮಿಕೊಂಡಿದ್ದು, ಅದೀಗ ಪೂರ್ಣಗೊಂಡು 2021 ರ ಕೊನೆಯ ದಿವಸ, ಹಳೆ ವರ್ಷದಲ್ಲಿ ದೇವರು ನಮಗೆ ಮಾಡಿದ ಒಳಿತಿಗಾಗಿ ಕ್ರತ್ಜನತೆ ಸಲ್ಲಿಸಿ, ಮತ್ತು ಹೊಸ ವರ್ಷವನ್ನು ಸ್ವಾಗತಿಸಲಿಕ್ಕಾಗಿ ದಿವ್ಯ ಬಲಿದಾನ ಅರ್ಪಿಸಲಾಗಿತ್ತು, ಅಂದು ದಿವ್ಯ ಬಲಿದಾನದ ಬಳಿಕ 450 ವರ್ಷಗಳ ಹಲವಾರು ಯೋಜನೆಗಳಲ್ಲಿ ಒಂದಾಂದ ನವೀಕರಿಸಲ್ಪಟ್ಟ ಶೌಚಾಲಯಗಳನ್ನು ಆಶಿರ್ವದಿಸಿ ಉದ್ಘಾಟಿಸಲಾಯಿತು.
ಅಂದು ಬಲಿದಾನದ ಪ್ರಧಾನ ಯಾಜಕರಾದ ಮಂಗಳೂರು ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಸಂಸ್ಥೆಯ ಮತ್ತು ಕ್ರೈಸ್ತ ಶಿಕ್ಷಣ ಸಮಿತಿಯ ನಿರ್ದೇಶಕರಾದ ವಂ|ಸ್ಟೀಪನ್ ಡಿಸೋಜಾ ಉದ್ಘಾಟಿಸಿದರು. ಚರ್ಚಿನ ಪ್ರಧಾನ ಯಾಜಕರಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಆಶಿರ್ವದಿಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ|ಫಾ|ವಿಜಯ್ ಡಿಸೋಜಾ, ಚರ್ಚಿನ ಪಾಲನ ಮಂಡಳಿ ಸದಸ್ಯರು, ಆರ್ಥಿಕ ಮಂಡಳಿ ಸದಸ್ಯರು ಇನ್ನಿತರರು ಉಪಸ್ಥಿರಿದ್ದರು.