ಮೇರಿ ಮಾತೆಯಂತೆ ದೇವರ ಇಚ್ಚೆಗೆ ವಿಧೇಯರಾಗಿ ದೇವರ ಇಚ್ಚೆಯನ್ನು ಜ್ಯಾರಿಗೊಳಿಸೋಣ

JANANUDI.COM NETWORK


ಕುಂದಾಪುರ, ಜ.1: ‘ದೇವರ ಇಚ್ಚೆಯನ್ನು ಜ್ಯಾರಿ ಗೊಳಿಸಲು ಮೇರಿ ಮಾತೆ ತನ್ನ ಜಿವಿತದ ಕೊನೆಯತನಕ ಮೇರಿ ಮಾತೆ ದೇವರಿಗೆ ವಿಧೇಯಳಾಗಿ ಬದುಕಿದಳು. ಮೇರಿ ಮಾತೆಗೆ ತನ್ನ ಜಿವಿತದಲ್ಲಿ ಹಲವಾರು ಕಷ್ಟಕಾರ್ಪಣ್ಯಗಳು ಬಂದವು. ಪುತ್ರ ಯೇಸು ಕ್ರಿಸ್ತನನ್ನು ಶಿಲುಭೆ ಎರಿ ಬಲಿಯಾಗುವುದನ್ನು ನೋಡ ಬೇಕಾಯ್ತು. ಆದರೂ ಮೇರಿ ಮಾತೆ ದೇ ಅದನ್ನೆಲ್ಲ ಅನುಭವಿಸಿ ದೇವರಿಗೆ ವಿಧೇಯಳಾದಳು. ಅದರಂತೆ ನಾವು ದೇವರ ಇಚ್ಚೆಯಂತೆ ಬದುಕಿ ಜೀವನಕ್ಕೆ ಹೊಸ ರೂಪ ನೀಡೊಣ’ ಎಂದು ಮಂಗಳೂರು ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಸಂಸ್ಥೆಯ ಮತ್ತು ಕ್ರೈಸ್ತ ಶಿಕ್ಷಣ ಸಮಿತಿಯ ನಿರ್ದೇಶಕರಾದ ವಂ|ಸ್ಟೀಪನ್ ಡಿಸೋಜಾ ನುಡಿದರು.
ಅವರು 451 ವರ್ಷಗಳ ಸುಧಿರ್ಘ ಇತಿಹಾಸ ಇರುವ ಕುಂದಾಪುರ ರೋಜರಿ ಮಾತ ಚರ್ಚಿನಲ್ಲಿ ಹೊಸ ವರ್ಷದ ಪ್ರಯುಕ್ತ ಪ್ರದಾನ ಯಾಜಕರಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು. ‘ನಾವುಗಳು ನಮ್ಮ ಪ್ರತಿಭೆಯಿಂದಲೇ ಎಲ್ಲಾ ಆಗುವುದೆಂದು ಭಾವಿಸುವುದು ಬೇಡ, ದೇವನೊಬ್ಬನು ಇದ್ದಾನೆ ಎಲ್ಲವೂ ಆತನಿಂದಲೇ ಆಗುವುದು, ಏಸು ಕ್ರಿಸ್ತನು ತನ್ನ ಪಿತನ ಇಚ್ಚೆಯಂತೆ ನಡೆದುಕೊಂಡ, ನಾವು ದೇವರ ಇಚ್ಚೆಯಂತೆ ನಡಯಲು ಏಸು ಕ್ರಿಸ್ತನು ನಮಗೆ ಪ್ರೇರಣೆಯಾಗಲಿ’ ಎಂದು ಅವರು ಹೇಳಿದರು.
ಬಲಿದಾನಕ್ಕೂ ಮೊದಲು ವಂ|ಫಾ|ವಿಜಯ್ ಡಿಸೋಜಾ ಕಳೆದ ವರ್ಷ ದೇವರು ಮಾಡಿದ ಉಪಕಾರಗಳಿಗಾಗಿ ವಂದನೆಗಳನ್ನು ಸಲ್ಲಿಸಲು, ಪರಮ ಪ್ರಸಾದದ ಆರಾಧನೆಯನ್ನು ನಡೆಸಿಕೊಟ್ಟರು. ಪ್ರಧಾನ ಯಾಜಕರಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹೊಸ ವರುಷದ ಶುಭಾಶಯಗಳನ್ನು ನೀಡಿ ವಂದನೆಗಳನ್ನು ಸಲ್ಲಿಸಿದರು.