ಕುಂದಾಪುರ, ಆರ್. ಎನ್. ಶೆಟ್ಟಿ ಪ. ಪೂ. ಕಾಲೇಜಿನಲ್ಲಿ ರಾಷ್ಟ್ರಕವಿ ‘ಕುವೆಂಪು ಬದುಕು-ಬರಹ ಉಪನ್ಯಾಸ‌ ‘ ಮತ್ತು ರಾಜ್ಯ‌ಮಟ್ಟದ ಚಿತ್ರ-ಪತ್ರ ಬಹುಮಾನ ವಿತರಣೆ

JANANUDI.COM NETWORK

ಕುಂದಾಪುರ: ದೊಡ್ಡ ಲೇಖಕನಾಗುವುದು ಎಷ್ಟು ಮುಖ್ಯವೋ, ಒಳ್ಳೆಯ ಮನುಷ್ಯನಾಗುವುದೂ ಅಷ್ಟೇ ಮುಖ್ಯ. ಸಮನ್ವಯ, ಸಹಬಾಳ್ವೆ ಹಾಗೂ ಸರ್ವೋದಯಗಳಂಥ ಮೌಲ್ಯಗಳ ಮೂಲಕ ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕತೆ, ವಿನೋಭಾ ಭಾವೆಯವರ ತಾತ್ವಿಕತೆ ಮೇಳೈಸಿದ ಕುವೆಂಪುರವರ ಬದುಕು- ಬರಹಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ” ಎಂದು ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ ಉಪಪ್ರಾಂಶುಪಾಲರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ  ಡಾ. ರೇಖಾ ಬನ್ನಾಡಿಯವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗವು ರಾಷ್ಟ್ರಕವಿ ಕುವೆಂಪುರವರ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಚಿತ್ರ- ಪತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ‘ಕುವೆಂಪು ಬದುಕು-ಬರಹ’ ಉಪನ್ಯಾಸ ಕಾರ್ಯಕ್ರಮದಲ್ಲಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ವಿ.ಕೆ. ಆರ್. ಆಂಗ್ಲ ಮಾಧ್ಯಮ ಹೈಸ್ಕೂಲ್ ನ ಉಪಪ್ರಾಂಶುಪಾಲರಾದ ಶ್ರೀಮತಿ ಶುಭಾ ಕೆ. ಎನ್. ರವರು ವಿದ್ಯಾರ್ಥಿಗಳು ಹಿರಿಯರ ಅನುಭವಯುಕ್ತ ಮಾರ್ಗದರ್ಶೀಯ ನುಡಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ರಾಜ್ಯಮಟ್ಟದ ಚಿತ್ರ- ಪತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ‌ ವಿತರಣೆ
ಮಾಡಲಾಯಿತು ಕಾಲೇಜಿನ ಕಲಾತಂಡದ ವಿದ್ಯಾರ್ಥಿಗಳು  ಕುವೆಂಪು ರಚಿತ ಪದ್ಯಗಳನ್ನು ಹಾಡಿದರು.
ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಡಿ.ಬಿ. ಕೃಷ್ಣಮೂರ್ತಿಯವರು ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕಿ ಶ್ರೀಮತಿ ದೀಪ್ತಿ.ಕೆ ಯವರು ಧನ್ಯವಾದ ಸಲ್ಲಿಸಿದರು. ಹಿಂದಿ ಉಪನ್ಯಾಸಕಿ ಶ್ರೀಮತಿ ಜಯಶೀಲಾ ಪೈಯವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.  ದ್ವಿತೀಯ ಪಿ.ಯು.ಸಿ ತರಗತಿಯ ಅರುಂಧತಿ ಕಾರ್ಯಕ್ರಮ ನಿರೂಪಿಸಿದರು.