ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಿ : ಸರ್ಕಾರಕ್ಕೆ ಕೋಲಾರ ರೈತ ಸಂಘದ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,27, ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ರೈತ ಸಂಘದಿಂದ ಅತಿಥಿ ಉಪನ್ಯಾಸಕರ ಹೋರಾಟದಲ್ಲಿ ಭಾಗವಹಿಸಿ ಕಡಲೆಕಾಯಿ ಮಾರುವ ಮುಖಾಂತರ ಸರ್ಕಾರಕ್ಕೆ ತಹಶೀಲ್ದಾರ್ ನಾಗರಾಜ್‍ರವರ ಮುಖಾಂತರ ಮನವಿ ನೀಡಿ ಆಗ್ರಹಿಸಲಾಯಿತು.
ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸಿ ಇಲ್ಲವೆ ಸ್ವಯಂ ಉದ್ಯೋಗ ಮಾಡಲು ಪ್ರತಿ ಅತಿಥಿ ಉಪನ್ಯಾಸಕರಿಗೆ 10 ಲಕ್ಷ ಬಡ್ಡಿ ರಹಿತ ಸಾಲ ನೀಡಿ ಎಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಸರ್ಕಾರವನ್ನು ಒತ್ತಾಯಿಸಿದರು.
ದೇಶಾದ್ಯಂತ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ ಅದರಲ್ಲಿಯೂ ಕರ್ನಾಟಕ ರಾಜ್ಯವು ನೀತಿಯನ್ನು ಅನುಷ್ಠಾನಗೊಳಿಸುವುದಲ್ಲಿ ದೇಶದಲ್ಲಿಯೇ ಮೊದಲ ರಾಜ್ಯವಾಗಿದೆ. ಹೊಸ ಶಿಕ್ಷಣ ನೀತಿಯ ಮುಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಸಮೂಹವನ್ನು ಸಜ್ಜುಗೋಳಿಸುವ ನಿಟ್ಟಿನಲ್ಲಿ ಅತ್ಯುತ್ತಮ ಎಂದು ಹೇಳಲಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿಗಳನ್ನು ನೀಡುವ ಸರ್ಕಾರ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಮಲತಾಯಿ ದೋರಣೆ ಅನುಸರಿಸುತ್ತಿದ್ದು, ಅವರ ಪ್ರಾಮಾಣಿಕ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷರ ಕೆ.ನಾರಾಯಣಗೌಡ ಮಾತನಾಡಿ ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ಎರಡು ವರ್ಷಗಳು ಕಾಲೇಜುಗಳಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ. ಅದರ ಜೊತೆಗೆ ಈ ವರ್ಷ ಕಾಲೇಜುಗಳ ಪ್ರಾರಂಭಕ್ಕೆ ಕ್ಷನಗಣನೆಗೆ ಆರಂಭವಾಗಿ ಈಗ ರಾಜ್ಯಾದ್ಯಂತ ಸುಮಾರು 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ಧಿಷ್ಟಕಾಲ ಮುಷ್ಕರ ಮಾಡುತ್ತಿರುವುದರಿಂದ ರಾಜ್ಯಾಧ್ಯಂತ 411 ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಾ ವಾಣಿಜ್ಯ ವಿಜ್ಞಾನ ವಿಭಾಗದಲ್ಲಿ 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಉಪನ್ಯಾಸಕರ ಮುಷ್ಕರ ದಿಂದ ತರಗತಿಗಳು ಅಸ್ತವ್ಯಸ್ಥವಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ ಎಂದು ಸರ್ಕಾರದ ವಿರದ್ದ ಅಸಮದಾನ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಮುಷ್ಕರದಿಂದಕಾಲೇಜುಗಳಲ್ಲಿ ತರಗತಿಗಳುನಡೆಯದೇ ಏರು ಪೇರಾಗಿರುವ ಜೊತೆಗೆ ಕಾಲೇಜಿನ ಪ್ರಾಂಶುಪಾಲರು ಇರುವ ಖಾಯಂ ಪ್ರಾದ್ಯಾಪಕರನ್ನು ತರಗತಿ ನಡೆಸಲು ಬೇಡಿಕೊಳ್ಳುವ ಮಟ್ಟಕ್ಕಿದೆ. ಆದರೂ ಸಹ ಖಾಯಂ ಪ್ರಾಧ್ಯಾಪಕರು ಸಮರ್ಪಕವಾಗಿ ಕಾಲೇಜಿನ ತರಗತಿಗಳನ್ನು ತೆಗೆದುಕೊಳ್ಳದೆ ಕಾಲಾಹರಣ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಕೊಠಡಿಗಳು ಹಸಿಸ್ತು ಮೊಬೈಲ್ ಹುಚ್ಚಿಗೆ ಬೀಳುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ಒಟ್ಟೆ ಬಟ್ಟೆ ಕಟ್ಟಿ ಕೂಲಿ ಮಾಡಿ ತಾವು ಪಡುವ ಕಷ್ಟ ಮಕ್ಕಳು ಪಡುಬಾರದೆಂಬ ದೃಷ್ಟಿಯಿಂದ ಶಾಲೆಗೆ ಕಳುಹಿಸಿದರೆ ಸರ್ಕಾರದ ವಿರೋದಿ ನೀತಿಗಳಿಗೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ವಿವರಣೆ ನೀಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಸರ್ಕಾರ ಉನ್ನತ ಶಿಕ್ಷಣ ಇಲಾಖೆ ತಾಸ್ತಾರಕ್ಕೆ ಒಳಗಾಗಿ ಯಾರಿಗೂ ಬೇಡವಾದ ರೀತಿಯಲ್ಲಿ ಕಳೆದ 15-20 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಒಮ್ಮೆ ಅತಿಥಿ ಹೆಸರಿನಲ್ಲಿ ಇನ್ನೊಮ್ಮೆ ಬಾಡಿಗೆ ಹೆಸರಿನಲ್ಲಿ ಮತ್ತೊಮ್ಮೆ ಅರೇಕಾಲಿಕ ಹೆಸರಿನಲ್ಲಿ ಬದುಕಿಗಾಗಿ ಷಡ ಪಡಿಸುತ್ತಿರುವ ಅರೆ ಜೀವದ ಜಾತಕ ಪಕ್ಷಿಗಳಂತಾಗಿದೆ ಅತಿಥಿ ಉಪನ್ಯಾಸಕರ ಸ್ಥಿತಿ. ತಮ್ಮ ಹಾಗೆಯೇ ಓದಿ ನೇಮಕಾತಿಯಲ್ಲಿ ಸ್ವಲ್ಪದರಲ್ಲೇ ಆಯ್ಕೆಯಾಗದವರಿಂದ ಒಂದು ರೀತಿಯಲ್ಲಿ ತಿರಸ್ಕಾರಕ್ಕೆ ಅಸಹಾನೆಗೆ ಒಳಗಾಗಿ ಕಾಲೇಜಿನಲ್ಲಿ ಕುಳಿತುಕೊಳ್ಳಲು ಕುರ್ಚಿಯು ಸಿಗದೆ ಮಾಡುವ ಕೆಲಸಕ್ಕೆ ಬಿಡಗಾಸು ಎಂಬ ಗೌರವಧನ ಪಡೆಯಲು ವಾರಗಟ್ಟಲೆ ಕಾಯುವ ಕ್ಲರ್ಕ್ ಪ್ರಿನ್ಸಿಪಾಲರ ಮುಂದು ಕೈಕಟ್ಟಿ ನಿಲ್ಲುವ ಅವರು ಕೊಟ್ಟಾಗ ಪಡೆದುಕೊಂಡು ಮಾಡಿದ ಸಾಲಕ್ಕೆ ಹೊಂದಿಸುವ ಜೊತೆಗೆ ಕುಟುಂಬ ನಿರ್ವಹಣೆ ಚಿಂತೆಯಲ್ಲಿ ಅತಿಥಿ ಉಪನ್ಯಾಸಕರ ಪರಿಸ್ಥಿತಿ ಇದ್ದರೂ ಸರ್ಕಾರ ಸಮಸ್ಯೆ ಬಗೆಹರಿಸುತ್ತಿಲ್ಲವೆಂದು ಆರೋಪ ಮಾಡಿದರು.
ಒಂದು ವಾರದೊಳಗೆ ಸರ್ಕಾರ ಮಕ್ಕಳ ಭವಿಷ್ಯದ ಜೊತೆಗೆ ಅತಂತ್ರದಲ್ಲಿ ಕುಟುಂಬ ನಿರ್ವಹಣೆ ಸಾದ್ಯವಾಗದೆ ತಮ್ಮ ಬೇಡಿಕೆಗಳನ್ನು ಈಡೆರಿಸುವಂತೆ ಬೀದಿಗೆ ಬಂದಿರುವ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಇಲ್ಲವಾದರೆ ಪೋಷಕರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಲಕ್ಷಾಂತರ ಮಂದಿ ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‍ರವರು ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ನಳಿನಿ.ವಿ ತಾ.ಅ.ಈಕಂಬಳ್ಳಿ ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ನಗರ ಸಂಚಾಲಕ ಮಂಗಸಂದ್ರ ನಾಗೇಶ್, ಮಾಲೂರು ತಾ.ಅ. ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ಕೂವಣ್ಣ, ವೆಂಕಟೇಶಪ್ಪ, ಅಶ್ವತಪ್ಪ, ಚಂದ್ರಪ್ಪ, ಶಿವಾರೆಡ್ಡಿ, ಮರಗಲ್ ಮುನಿಯಪ್ಪ, ಮುಂತಾದವರು ಇದ್ದರು.