ಮದುವೆ, ಶುಭ ಸಮಾರಂಭ , ಕಾನ್ಸರೆನ್ಸ್ , ಇನ್ನಿತರ ಎಲ್ಲಾ ಸಭೆ- ಕಾರ್ಯಕ್ರಮಗಳಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ

ಬೆಂಗಳೂರು,ರಾಜ್ಯದಲ್ಲಿ ಡಿ. 28 ರಿಂದ ಮದುವೆ, ಶುಭ ಸಮಾರಂಭ , ಕಾನ್ಸರೆನ್ಸ್ , ಇನ್ನಿತರ ಎಲ್ಲಾ ಸಭೆ- ಕಾರ್ಯಕ್ರಮಗಳಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ. ಮಾಸ್ಕ್ , ಸ್ಯಾನಿಟೈಜರ್ ಸೇರಿದಂತೆ ಕೋವಿಡ್ ತಡೆಗೆ ಕೈಗೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಆಯೋಜಕರು ಸಮಾರಂಭದಲ್ಲಿ ಕಡ್ಡಾಯವಾಗಿ ಅನುಸರಿಸಬೇಕು ಎಂದು ಸರಕಾರ ಸೂಚಿಸಿದೆ.
ಡಿ. 28 ರಿಂದ ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗೆ 10 ದಿನ ರಾತ್ರಿ ಕರ್ಪ್ಯೂ ಜಾರಿ ಮಾಡಲಾಗಿದ್ದು ಇದರ ಪ್ರಕಾರ ಮದುವೆ, ಶುಭ ಸಮಾರಂಭ , ಕಾನ್ಸರೆನ್ಸ್ , ಇನ್ನಿತರ ಎಲ್ಲಾ ಸಭೆ- ಕಾರ್ಯಕ್ರಮಗಳಲ್ಲಿ 300 ಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದು ತಿಳಿಸಿದೆ .
ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ತಡೆಗೆ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ.