ಕುಂದಾಪುರದಲ್ಲಿ ಕ್ರಿಸ್ಮಸ್ ಆಚರಣೆ: ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರರನ್ನು ಪ್ರೀತಿಸಬೇಕು – ಫಾ| ಅಂಟೋನಿ ಸೆರಾವೊ

JANANUDI.COM NETWORK

ಕುಂದಾಪುರ, ಡಿ.25: “ದೇವರ ದೊಡ್ಡ ಕುಟುಂಬದಲ್ಲಿ ಯೇಸು ಹಿರಿಯವನು ಮತ್ತು ನಾವೆಲ್ಲ ಅವನ ಅಕ್ಕ ತಮ್ಮಂದಿರಾಗಬೇಕೆಂಬುದು ದೇವರ ಆಸೆ. ದೇವ ಪುತ್ರನಾದ ಯೇಸು ನಮಗಾಗಿ ಮಾನವನಾಗಿ ಜನಿಸಿ ನಮಗೆ ಅಮೂಲ್ಯ ಸಂದೇಶ ನೀಡಿದ್ದಾನೆ,

‘ನನ್ನ ತಂದೆ ದೇವರು ಬಹಳ ನನನ್ನು ಪ್ರೀತಿಸುತ್ತಾರೆ, ನಾನು ನಿಮ್ಮನ್ನು ಬಹಳ ಪ್ರೀತಿಸುವೇನು, ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರರನ್ನು ಪ್ರೀತಿಸಬೇಕು’ ಎಂದು ಹೇಳಿರುವನು ನಾವು ಅದರಂತೆ ಪರರನ್ನು ಪ್ರೀತಿಸಿ ಜೀವಿಸಬೇಕು” ಎಂದು ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ವಿಧ್ಯಾ ಮಂಡಳಿಯ ಕಾರ್ಯದರ್ಶಿಗಳಾದ ವಂ|ಧರ್ಮಗುರು ಅಂಟೋನಿ ಸೆರಾವೊ ಸಂದೇಶ ನೀಡಿದರು.


ಅವರು ಉಡುಪಿ ಧರ್ಮಪ್ರಾಂತ್ಯದ ಅತೀ ಪುರಾತನವಾದ ಮತ್ತು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರ ಇಗರ್ಜಿಯಲ್ಲಿ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ “ದೇವನಾಗಿದ್ದ ಯೇಸು ನಮಗಾಗಿ ನಮ್ಮ ಮಧ್ಯೆ ಸಾಧರಣ ಮನುಷ್ಯನಾಗಿ ಹುಟ್ಟಿದ್ದ ಆತ ಶಿಲುಭೆಯ ಮೇಲೆ ಸಾವನ್ನಪ್ಪುವತನಕ ವಿಧೇಯಕನಾಗಿ ಜೀವಿಸಿದನು. ಆದಿಯಲ್ಲಿ ಶಬ್ದ ದೇವರೊಡನೆ ಇದ್ದು, ಶಬ್ದ ದೇವನಾಗಿದ್ದವನು, ದೇವ ಪುತ್ರ ಯೇಸು ಮನುಷ್ಯನಾಗಿ ನಮ್ಮ ಮಧ್ಯೆ ಜನ್ಮ ತಾಳಿದ ಆತ ಈ ಪ್ರಪಂಚದ ಅಂತ್ಯವಾಗುವ ತನಕ ತಮ್ಮಡೊನೆ ಇರುತ್ತಾನೆ. ದೇವರು ಈ ಪ್ರಪಂಚವನ್ನು ಇಷ್ಟೊಂದು ಪ್ರೀತಿಸಿದನೆಂದರೆ, ದೇವನು ಆತನ ಒಬ್ಬನೇ ಮಗನನ್ನು ಈ ಪ್ರಪಂಚಕ್ಕೆ ಕಳುಹಿಸಿದ, ಯಾಕೆಂದರೆ ಈ ಪ್ರಪಂಚದ ಮನುಜರಿಗೆ ಸ್ವರ್ಗದ ದಾರಿ ತೋರಿಸಲು, ನಮ್ಮ ಆತ್ಮದ ಒಳಿತಿಗಾಗಿ, ನಾವು ದೇವರ ಮಕ್ಕಳಾಗಬೇಕೆಂದು ದೇವರ ಇಚ್ಚೆ. ಯೇಸು ‘ಒಳ್ಳೆಯ ಮನಸ್ಸಿನ ಮನುಜರಿಗೆ ಶಾಂತಿ ಸಮಾದಾನ ಕೊಡಲು ನಾನು ಬಂದಿರುವೇನು’ ಎಂದು ನಮಗೆ ಯೇಸು ಸಂದೇಶ ನೀಡಿದ್ದಾನೆ, ಅದರಂತೆ ಶಾಂತಿ ಸಮಾದಾನದಿಂದ ಬದುಕಿ ನಾವು ದೇವರ ಮಕ್ಕಳಾಗೋಣ. ಜೀವನ ದೇವರು ಕೊಟ್ಟಿದ್ದು, ಆ ಜೀವನಕ್ಕೆ ನಾವು ಅರ್ಥ ಸಿಗುವಂತೆ ಬದುಕಿ ನಮ್ಮ ಜೀವನಕ್ಕೆ ಅರ್ಥ ಕೊಡೋಣ” ಎಂದು ಅವರು ತಿಳಿಸಿದರು.
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಹಬ್ಬದ ಭವ್ಯ ಭಕ್ತಿ ಪ್ರಧಾನ ಬಲಿಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾಗಿದ್ದರು. ಬಲಿದಾನದ ಬಳಿಕ ವಾಳೆವಾರು ಭಾಗ್ಯಶಾಲಿ ಕುಟುಂಬಗಳಿಗೆ, ಹೌಸಿ ಆಟದ, ಮತ್ತು ಗೋದಲಿ ಸ್ಪರ್ಧಾ ವಿಜೇತರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು
.