ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಕೊರೆದಿರುವ ಕೊಳವೆ ಬಾವಿ ಕಾಮಗಾರಿ ಹಣ ಬಿಡುಗಡೆಗೆ ಸದನದಲ್ಲಿ ಗೋವಿಂದರಾಜು ಆಗ್ರಹ

ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೋಲಾರ ಜಿಲ್ಲೆಯ ಗಾಮೀಣ ಪ್ರದೇಶಗಳಲ್ಲಿ ತುರ್ತು ಕುಡಿಯುವ ನೀರಿಗಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ಕೂಡಲೇ ಬಾಕಿ ಹಣವನ್ನು ಬಿಡುಗಡೆಗೊಳಿಸುವಂತೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದ ರಾಜು ಆಗ್ರಹಿಸಿದರು.
ವಿಧಾನ ಪರಿಷತ್ತಿನಲ್ಲಿ , ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು , ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಸಲುವಾಗಿ , ಕೊರೆದಿರುವ ಕೊಳವೆ ಬಾವಿಗಳು ಹಾಗೂ ಇತರೆ ಕಾಮಗಾರಿಗಳಿಗೆ , ತಾಲ್ಲೂಕು ಟಾಸ್ಕ್‌ಪೋರ್ಸ್ ಸಮಿತಿಗಳಲ್ಲಿ , ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ , ಕೋಲಾರ ರವರು ೧೩೭೧ ಕಾಮಗಾರಿಗಳಿಗೆ ರೂ . ೪೨೮೪.೫೮ ಲಕ್ಷಗಳಿಗೆ ಆಯಾ ತಾಲ್ಲೂಕು ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ಘಟನೋತ್ತರ ಮಂಜೂರಾತಿಯನ್ನು ಪಡೆಯಲಾಗಿದೆ.
ಆದರೇ ಈ ಕಾಮಗಾರಿಗಳು ಯಾವುದೇ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಂಡಿರುವುದಿಲ್ಲ . ಹಾಗೂ ಈ ಕಾಮಗಾರಿಗಳನ್ನು ನಿರ್ವಹಿಸಿರುವ ಏಜೆನ್ಸಿ / ಗುತ್ತಿಗೆದಾರರಿಗೆ ಹಣವನ್ನು ಪಾವತಿಸದಿದ್ದಲ್ಲಿ ಮುಂದೆ ಯಾವುದೇ ಕಾಮಗಾರಿಗಳನ್ನು ನಿರ್ವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಲಿದೆ ಎಂದರು.
ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ಕೋಲಾರ -೧೩೨ , ಮಾಲೂರು -೧೮೩ ಬಂಗಾರಪೇಟೆ -೧೩೯ . ಕೆ.ಜಿ.ಎಫ್ -೧೫೩ , ಮುಳಬಾಗಿಲು -೨೪೬ , ಶ್ರೀನಿವಾಸಪುರ -೫೧೮ . ಕಾಮಗಾರಿಗಳಾಗಿದ್ದು , ಇದರ ಅ ೦ ದಾಜು ಮೊತ್ತ ೪೨೮೪.೫೮ ಲಕ್ಷ ರೂಪಾಯಿಗಳಾಗಿದೆ ಎಂದು ತಿಳಿಸಿದರು.
ಇದರ ಅನುಮೋದನೆಗಾಗಿ , ಜಿಲ್ಲಾ ಪಂಚಾಯತ್‌ನಿಂದ , ಗಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಿಗೆ ಫೆ .೧೯ ರಂದೇ ಪ್ರಸ್ತಾವನೆ ಕಳುಹಿಸಿದ್ದು , ಉದುವರೆಗೂ ಅನುಮೋದನೆಯಾಗಿಲ್ಲ ಎಂದು ದೂರಿದರು .
ಮುಂದಿನ ದಿನಗಳಲ್ಲಿ ಈ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುವ ಸಾಧ್ಯತೆ ಇರುವುದಿರಂದ ಈಗಾಗಲೇ ಪೂರ್ಣಗೊಂಡಿರುವ ೧೩೭೧ ಕಾಮಗಾರಿಗಳಿಗೆ ರೂ : ೪೨೮೪.೫೮ ಲಕ್ಷಗಳ ಪ್ರಸ್ತಾವನೆಗೆ ಕೂಡಲೇ ಅನುಮೋದನೆ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಒತ್ತಾಯಿಸಿದರು.
ಇದಕ್ಕೆ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಉತ್ತರ ನೀಡಿ , ಸಂಬಂಧಪಟ್ಟ ಇಲಾಖೆಗೆ ಸೂಚಿಸಿ , ತ್ವರಿತವಾಗಿ ಅನುಮೋದನೆ ನೀಡಲಾಗುವುದಾಗಿ ಭರವಸೆ ನೀಡಿದರು.