ವಿಶ್ವ ರೈತ ದಿನಾಚರಣೆ ಪ್ರಯುಕ್ತ ರೈತ ಸಂಘದಿಂದ ರೈತರ ನೇತ್ರದಾನ ನೋಂದಣಿ ಜೊತೆಗೆ ದವಸ ದಾನ್ಯ ಹಂಚಿಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ-ಡಿ-23, ವಿಶ್ವ ರೈತ ದಿನಾಚರಣೆ ಪ್ರಯುಕ್ತ ರೈತ ಸಂಘದಿಂದ ರೈತರ ನೇತ್ರದಾನ ನೋಂದಣಿ ಮಾಡುವ ಜೊತೆಗೆ ರಾಗಿ ಭತ್ತ ತರಕಾರಿ ದವಸ ದಾನ್ಯ ಹಂಚುವ ಮೂಲಕ ಮಂಗಸಂದ್ರದ ಪ್ರಗತಿ ಪರ ರೈತ ಈರಣ್ಣ ರವರ ತೋಟದಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ದೇಶ ಕಾಯುವ ಸೈನಿಕ ಅನ್ನ ನೀಡುವ ಅನ್ನದಾತ ನೆಮ್ಮದಿಯಾಗಿದ್ದರೆ ದೇಶ ಸುಭಿಕ್ಷವಾಗಿರುತ್ತದೆ ರೈತರ ಒಡನಾಡಿಗಳಾದ ಕಂದಾಯ,ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಕೃಷಿ ಅಧಿಕಾರಿಗಳು ನಮ್ಮ ತಾಯಿನಾಡಿಗೆ ಏನಾದರೂ ಮಾಡಬೇಕು ಎಂಬ ಇಚ್ಚಾಶಕ್ತಿ ಇರಬೇಕು ಮತ್ತು ಇಲಾಖೆಗಳಲ್ಲಿನ ಭ್ರಷ್ಟಾಚಾರ ಕಡಿಮೆಯಾಗಿ ರೈತ ಪರ ಇಲಾಖೆಗಳಾಗಿ ಮಾರ್ಪಾಡಾಗುವ ಜೊತೆಗೆ ಮಾರುಕಟ್ಟೆಯ ಅವ್ಯವಸ್ಥೆ ಸರಿಪಡಿಸುವಂತೆ ಸರ್ಕಾರಕ್ಕೆ ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು
ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ರವರು ಮಾತನಾಡಿ ರೈತರು ಸರ್ಕಾರದಿಂದ ಬರುವ ಯೋಜನೆಗಳನ್ನು ಸಮರ್ಪಕವಾಗಿ ಬಳಿಸಿಕೊಂಡು ಏಕ ರೂಪದ ಬೆಳೆಯದೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಜೊತೆಗೆ ಆರ್ಥಿಕವಾಗಿ ಸಬಲರಾಗುವ ಜೊತೆಗೆ ಅನ್ನದಾತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳಬಾರದು ಜಿಲ್ಲಾಡಳಿತ ರೈತರ ಪರ ನಿಲ್ಲುತ್ತದೆ ಎಂದು ರೈತರಿಗೆ ಸಲಹೆ ನೀಡಿದರು. ಮತ್ತು ರೈತಸಂಘದ ಬೇಡಿಕೆ ಯಾದ ಎ.ಪಿ.ಎಂ.ಸಿ ಮಾರುಕಟ್ಟೆಗೆ 1 ತಿಂಗಳೊಳಗೆ ಜಮೀನು ಮಂಜೂರು ಮಾಡುವ ಭರವಸೆ ನೀಡಿದರು.
ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ಹಾಗೂ ಕೆ.ಎನ್.ಎನ್. ಪ್ರಕಾಶ್ ಮಾತನಾಡಿ ರೈತರು ಕೀಟನಾಶಕಗಳ ಬಳಕೆ ಕಡಿಮೆ ಮಾಡಿ ಸಾಯವಯ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜೊತೆಗೆ ಸರ್ಕಾರಗಳು ನಕಲಿ ಬಿತ್ತನೆ ಬೀಜ ಗೊಬ್ಬರ ತಡೆಗಟ್ಟಲು ಪ್ರಬಲ ಕಾನೂನು ಕಾಯ್ದೆ ಜಾರಿ ಮಾಡಬೇಕು ಮತ್ತು ರೈತರಿಗೆ ಸ್ವಾಂತನ ಕೇಂದ್ರಗಳನ್ನು ತೆರೆಯಬೇಕು. ಕೃಷಿ ಆದಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡುವ ಮುಖಾಂತರ ಅತಿವೃಷ್ಟಿ ಅನಾವೃಷ್ಟಿ ಸಮಯದಲ್ಲಿ ರೈತರ ಪರ ನಿಲ್ಲಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ನಾಗರಾಜ್‍ರವರು ಮತ್ತು ತೋಟಗಾರಿಕೆ ಅಧಿಕಾರಿ ಮಂಜುನಾಥ್‍ರವರು ಮಾತನಾಡಿ ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳು ರೈತರ ಮನೆಭಾಗಿಲಿಗೆ ತಲುಪುವ ಕೆಲಸ ಮಾಡುತ್ತೇವೆ. ಹನಿ ನೀರಾವರಿಗೆ ಅರ್ಜಿ ಆಹ್ವಾನ ಮಾಡಿದ್ದು ಎಲ್ಲಾ ರೈತರು ಸದುಪಯೋಗ ಪಡೆದುಕೊಳ್ಳಬೇಕು, ರೈತ ಬೆಳೆ ಸಮೀಕ್ಷೆ ಯಲ್ಲಿ ಏನಾದರೂ ಗೊಂದಲಗಳಿದ್ದರೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಸಂಪರ್ಕ ಮಾಡಬಹುದೆಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ಅದ್ಯಕ್ಷರಾದ ಮುನಿರಾಜು ಮತ್ತು ಕೆ.ಎಸ್.ಗಣೇಶ್ ರವರು ಮಾತನಾಡಿ ಸರ್ಕಾರ ರೈತರ ಕಡೆ ಗಮನ ಕೊಡಬೇಕು ಮತ್ತು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ನೀಡಬೇಕು , ಎನ್,ಇ,ಪಿ ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚು ಕೃಷಿ ವಿಧ್ಯಾಬ್ಯಾಸಕ್ಕೆ ಆದ್ಯತೆ ಕೊಡಬೇಕು. ರೈತರನ್ನು ರಕ್ಷಣೆ ಮಾಡಬೇಕೆಂದು ಸಲಹೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂಧಿಸದ ಸರ್ಕಾರ ಜನ ಪ್ರತಿನಿಧಿಗಳ ಜನ ವಿರೋಧಿ ನೀತಿಗೆ ರೈತರು ರೋಷಿಹೋಗಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರದ ಕಛೇರಿಗಳಾಗಿವೆ, ಪ್ರತಿಯೊಂದು ಇಲಾಖೆಯಲ್ಲೂ ಲಂಚ ವಿಲ್ಲದೆ ಜನ ಸಾಮಾನ್ಯರ ಕೆಲಸವಾಗುತ್ತಿಲ್ಲ. ಕೆಲಸವಾಗಬೇಕಾದರೆ ದಲ್ಲಾಳಿಗಳ ಜೋಬು ತುಂಬಿಸಿ ಆನಂತರ ಅಧಿಕಾರಿಗಳ ಸಂಪರ್ಕ ಮಾಡಬೇಕಾದ ಪರಿಸ್ತಿತಿ ಇದೆ ಇದನ್ನು ಸರಿಪಡಿಸಿ ಸರ್ಕಾರ ರೈತರಿಗೆ ನೀಡುತ್ತಿರುವ ಬೆಳೆ ಪರಿಹಾರದ ಹಣ ಹೆಚ್ಚಳ ಮಾಡಿ ಕನಿಷ್ಠ ಪಕ್ಷ ಒಂದು ಲಕ್ಷ ಒಂದು ಎಕರೆಗೆ ನೀಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ವಿವರಣೆ ನೀಡಿದರು.
ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಮಾತನಾಡಿ ಕೇಂದ್ರ ಸರ್ಕಾರ ವಾಪಸ್ಸು ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರವು ವಾಪಸ್ಸು ಪಡೆಯಬೇಕು. ಎ.ಪಿ.ಎಂ.ಸಿ.ಗಳನ್ನು ಅಭಿವೃದ್ದಿಪಡಿಸುವ ಜೊತೆಗೆ ಐತಿಹಾಸಿಕ ಹೋರಾಟದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡಿ ರೈತರ ಮೇಲಿನ ಕೇಸುಗಳನ್ನು ವಾಪಸ್ಸು ಪಡೆಯಬೆಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಎ.ಪಿ.ಎಂಸಿ ಕಾರ್ಯದರ್ಶಿ ರವಿಕುಮಾರ್, ವಕ್ಕಲೇರಿ ರಾಜಪ್ಪ, ಬ್ಯಾಲಹಳ್ಳಿ ಶಂಕರೇಗೌಡ, ಡಾ. ನಾರಾಯಣಸ್ವಾಮಿ, ರೇಷ್ಮೇ ಇಲಾಖೆ ಉಪ ನಿರ್ದೇಶಕರಾದ ಕಾಳಪ್ಪ, ಪಿ.ಯು ಉಪನಿರ್ದೇಶಕರು, ರಮೇಶ್, ಚೌಡಪ್ಪ. ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ನಳಿನಿ.ವಿ ಜಿಲ್ಲಾಕಾರ್ಯಾಧ್ಯಕ್ಷ ಹನುಮಯ್ಯ, ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶ್ರೀನಿವಾಸಪುರ ತಾ.ಅ.ಆಂಜಿನಪ್ಪ, ಮುಳಬಾಗಿಲು ತಾ.ಅ.ಯಲುವಳ್ಳಿ ಪ್ರಬಾಕರ್, ಮಾಲೂರು. ತಾ.ಅ.ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ವೇಣು, ಕೇಶವ, ನವೀನ್, ಮಂಗಸಂದ್ರ ನಾಗೇಶ್, ಮಂಗಸಂದ್ರ ತಿಮ್ಮಣ್ಣ ವೆಂಕಟೇಶಪ್ಪ, ಕೂವಣ್ಣ, ಅಶ್ವತಪ್ಪ, ಚಂದ್ರಪ್ಪ ರಾಮಸಾಗರ ವೇಣು, ಪಾರಂಡಹಳ್ಳಿ ಮಂಜುನಾಥ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಯುವ ಮುಖಂಡ ನಂಗಲಿ ಕಿಶೋರ್, ಹೆಬ್ಬಣಿ ರಾಮಮೂರ್ತಿ, ಪುತ್ತೇರಿ ರಾಜು, ಐತಂಡಹಳ್ಳಿ ಮುನ್ನ, ಇಮ್ರಾನ್, ಹಸಿರು ಸೇನೆ ಜಿ.ಅ.ಕಿರಣ್, ಚಾಂದ್‍ಪಾಷ, ನವಾಜ್, ಮಂಜುನಾಥರೆಡ್ಡಿ, ಸೌಂದರ್ಯ, ರೈತ ಮಹಿಳೆಯರು ಮತ್ತು ಮಂಗಸಂದ್ರ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.