ಬಡ್ಡಿ ಮಾಫಿಯಾದಿಂದ ಮಹಿಳೆಯರನ್ನು ರಕ್ಷಿಸುವ ಸಂಕಲ್ಪದಿಂದಲೇ ಡಿಸಿಸಿ ಬ್ಯಾಂಕಿನಿಂದ ಬಡ್ಡಿರಹಿತ ಸಾಲ ವಿತರಣೆ ಶಾಸಕಿ ರೂಪ ಶಶಿಧರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : – ಜಿಲ್ಲೆಯ ಕೆಜಿಎಫ್ ಗಡಿ ಭಾಗದ ಬಡವರ ರಕ್ತ ಹೀರುತ್ತಿರುವ ಬಡ್ಡಿ ಮಾಫಿಯಾದಿಂದ ಮಹಿಳೆಯರನ್ನು ರಕ್ಷಿಸುವ ಸಂಕಲ್ಪದೊಂದಿಗೆ ಡಿಸಿಸಿ ಬ್ಯಾಂಕ್ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಿದ್ದು , ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಿ ಮತ್ತಷ್ಟು ನೆರವು ಪಡೆಯಿರಿ ಎಂದು ಶಾಸಕಿ ರೂಪಕಲಾ ಶಶಿಧರ್ ಕರೆ ನೀಡಿದರು .
ಜಿಲ್ಲೆಯ ಗಡಿ ಭಾಗದ ಬೆನವಾರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ ಮೂಲಕ ಮಹಿಳಾ ಸಸಹಾಯ ಸಂಘಗಳಿಗೆ ೨ ಕೋಟಿ ರೂ ಬಡ್ಡಿರಹಿತ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು . ಹೆಣ್ಣು ಮಕ್ಕಳ ಸ್ವಾವಲಂಬಿ ಬದುಕಿಗೆ ಪಕ್ಷಾತೀತವಾಗಿ ನೆರವಾಗುವ ಅಗತ್ಯವಿದೆ ಎಂದ ಅವರು , ತಾಯಂದಿರಿಗೆ ನೀಡುವ ಸಾಲ ಸೌಲಭ್ಯದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿ , ಸಾಲ ನೀಡುವಾಗ ಧರ್ಮ , ಪಕ್ಷಜಾತಿಯನ್ನು ಮೀರಿ ಮಾನವೀಯ ನೆಲಗಟ್ಟಿನ ಮೇಲೆ ಡಿಸಿಸಿ ಬ್ಯಾಂಕ್ ನೆರವಾಗುತ್ತಿದೆ ಎಂದು ತಿಳಿಸಿದರು .
ಪ್ರತಿ ಕುಟುಂಬದ ಜೀವಾಳವಾಗಿರುವ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬಿದ್ದೇ ಆದಲ್ಲಿ ಅದು ಇಡೀ ಕುಟುಂಬಕ್ಕೆ ಆಸರೆಯಾಗುತ್ತದೆ ಎಂಬುದನ್ನು ಅರಿತೇ ಈ ಸಾಲ ಸೌಲಭ್ಯ ಒದಗಿಸುತ್ತಿದ್ದು , ಮಹಿಳೆಯರು ಪಡೆದ ಸಾಲವನ್ನು ಸಮರ್ಪಕವಾಗಿ ಮರುಪಾವತಿ ಮಾಡಿ ಎಂದು ಕಿವಿಮಾತು ಹೇಳಿದರು .
ಡಿಸಿಸಿ ಬ್ಯಾಂಕ್‌ ಎಂದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಬ್ಯಾಂಕ್ ಎಂಬ ಖ್ಯಾತಿಗೆ ಒಳಗಾಗಿದೆ , ಇದಕ್ಕೆ ಕಾರಣವೂ ಇದೆ . ಅವಿಭಜಿತ ಜಿಲ್ಲೆಯಲ್ಲಿ ೭ ಲಕ್ಷ ತಾಯಂದಿರಿಗೆ ಬ್ಯಾಂಕ್ ನೆರವಾಗಿದೆ , ಆ ತಾಯಂದಿರೂ ಸಹಾ ಅಷ್ಟೇ ಮುತುವರ್ಜಿಯಿಂದ ಸಾಲ ಮರುಪಾವತಿಸಿ ತಮ್ಮ ಉಳಿತಾಯದ ಹಣ ಬ್ಯಾಂಕಿನಲ್ಲಿಟ್ಟು ಬ್ಯಾಂಕನ್ನು ಪೋಷಿಸುತ್ತಿದ್ದಾರೆ ಎಂದರು .

ಎಟಿಎಂ ಕಾರ್ಡ್ ಕ್ರಾಂತಿಕಾರಿ ಹೆಜ್ಜೆ

ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ , ಬಡವರು , ಮಹಿಳೆಯರು , ರೈತರ ಪಾಲಿಗೆ ಡಿಸಿಸಿ ಬ್ಯಾಂಕ್ ದೇವಾಲ ಕಾಲಯವಿದ್ದಂತೆ , ಇದನ್ನು ಕಾಪಾಡಿಕೊಂಡು ಹೋಗುವ ಹೊಣೆಯೂ ನಿಮ್ಮದೇ ಆಗಿದೆ ಎಂದು ಮಹಿಳೆಯರಿಗೆ ಕರೆ – ನೀಡಿದರು . ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ಮಹಿಳೆಯರು , ರೈತರು ವಂಚನೆಗೆ ಒಳಗಾಗಬಾರದು , ಭ್ರಷ್ಟಾಚಾರದ ಆರೋಪ ಕೇಳಿಬರಬಾರದು ಎಂಬ ಸದುದ್ದೇಶದಿಂದ ಪ್ರತಿ ಮಹಿಳೆಯರಿಗೂ ಎಟಿಎಂ ಕಾರ್ಡ್ ನೀಡಲಾಗುತ್ತಿದ್ದು , ಅವರ ಸಾಲದ ಹಣವೂ ಎಟಿಎಂ ಮೂಲಕವೇ ಡಾಗೆ ಅವಕಾಶ ಕಲ್ಪಿಸಲಾಗಿದೆ , ಇದೊಂದು ಕಾಂತಿಕಾರಿ ಹೆಜ್ಜೆ ಎಂದು ತಿಳಿಸಿದರು . ಮಹಿಳೆಯರು ಸಾಲ ಪಡೆದು ಸದೃಢರಾಗಿ , ವಾರದ ಸಭೆ ನಡೆಸಿ , ಉಳಿತಾಯದ ಹಣ ಸಂಗ್ರಹಿಸಿ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಟ್ಟು ಬಡ್ಡಿ ಪಡೆಯುವ ಜತೆಗೆ ಮತ್ತಷ್ಟು ತಾಯಂದಿರು , ಬಡವರಿಗೆ ನೆರವು ನೀಡುವ ಶಕ್ತಿಯನ್ನು ಬ್ಯಾಂಕಿಗೆ ತುಂಬಿ ಎಂದು ತಿಳಿಸಿ , ಈಗ ನೀಡುತ್ತಿರುವ ೫೦ ಸಾವಿರ ಸಾಲವನ್ನು ಲಕ್ಷಕ್ಕೇರಿಸುವ ಆಶಯ ನಮ್ಮದಾಗಿದೆ ಎಂದರು . ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಮಾತನಾಡಿ , ಅವಿಭಜಿತ ಜಿಲ್ಲೆಯಲ್ಲಿ ಬಡ ಮಹಿಳೆಯರಿಗೆ ಡಿಸಿಸಿ ಬ್ಯಾಂಕ್‌ ಆಸರೆಯಾಗಿದೆ . ಖಾಸಗಿ ಬಡ್ಡಿ ಮಾಫಿಯಾದವರಿಂದ ಮಹಿಳೆಯರನ್ನು ರಕ್ಷಿಸುವ ಬ್ಯಾಂಕಿನ ಪಯತ , ಶ್ಲಾಘನೀಯ ಎಂದರು .
ಜಿಪಂ ಮಾಜಿ ಉಪಾಧ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ ಕಳೆದ ೧೦ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಜನರ ಮನಸ್ಸಿನಿಂದ ದೂರವಾಗಿತ್ತು . ಆದರೆ ಈಗ ಗೋವಿಂದಗೌಡರು ಅಧ್ಯಕ್ಷರಾದ ನಂತರ ಬ್ಯಾಂಕ್ ರಾಜ್ಯದ ನಂಗೆ ಆಗಿ ಮಹಿಳೆಯರು ರೈತರ ಜೀವನಾಡಿಯಾಗಿದೆ ಎ೦ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಾಲಕೃಷ್ಣ , ರಾಧಾಕೃಷ್ಣಾರೆಡ್ಡಿ , ಎಪಿಎಂಸಿ ಮಾಜಿ ಅಧ್ಯಕ್ಷೆ ಭಾಗ್ಯಮ ಸೇರಿದಂತೆ ಜಕ್ಕರಸನಕುಪ್ಪ ಹಾಗೂ ಶ್ರೀನಿವಾಸಸಂದ್ರ ಗ್ರಾಮ ಪಂಚಾಯತಿಯ ಸದಸ್ಯರು ಹಾಜರಿದರು
.