ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ಗಂಗೊಳ್ಳಿಯಲ್ಲಿ ಸೌಹಾರ್ದ ಕ್ರಿಸ್ಮಸ್

JANANUDI.COM NETWORK


ನಾವೆಲ್ಲ ಒಂದೇ ದೇವರ ಮಕ್ಕಳು: ವೇ.ಮೂ.ಜಿ.ವೇದವ್ಯಾಸ ಕೆ.ಆಚಾರ್ಯ


ಕುಂದಾಪುರ, “ಇಂದು ನಮ್ಮಲ್ಲಿ ಸೌಹಾರ್ದತೆ ಕುಂದಿದೆ, ಮನುಷ್ಯ ತಾನೇ ಎಂದು ಮೆರೆಯುತಿದ್ದವನಿಗೆ ಕೊರೊನಾ ಬಂದು ಹೊಡೆತ ನೀಡಿತು, ಪ್ರಕ್ರತಿ ಮೇಲೆ ಆಗುತಿದ್ದ ಅನ್ಯಾಯ ನಿಂತು ಪ್ರಕ್ರತಿಗೆ ಸಮಾದಾನವಾಯಿತು. ಪ್ರಕ್ರತಿಯೇ ಮನುಷ್ಯರು ಸೌಹಾರ್ದತೆಯಿಂದ ಬಾಳಬೇಕು ಎಂದು ಸಂದೇಶ ಸಾರಿದಂತಾಯಿತು. ಸೌರ್ಹಾದತೆ ಅಂದರೆ ಇಲ್ಲದವನ ಜೊತೆ ಬದುಕಬೇಕು, ಇನ್ನೊಬ್ಬರಿಗೆ ಸಹಾಯ ಮಾಡಿ ಬದುಕಿದರೆ ಅದು ಸೌಹಾರ್ದತೆ” ಎಂದು ರೆವೆರೆಂಡ್ ಕಿಶೋರ್ ಕುಮಾರ್ ಅಭಿಪ್ರಾಯ ಪಟ್ಟರು. ಅವರು ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನ್ (ರಿ) ಕುಂದಾಪುರ ಇವರ ವತಿಯಿಂದ ಗಂಗೊಳ್ಳಿ ಚರ್ಚ್ ಸಭಾಭವನದಲ್ಲಿ ನಡೆದ(12-13-21) ಸೌಹಾರ್ದ ಕ್ರಿಸ್ಮಸ್ ಹಾಗೂ ಫಲಾನುಭವಿಗಳಿಗೆ ಸಹಾಯ ಹಸ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಸಂದೇಶ ನೀಡಿದರು ಉಡುಪಿ ಸಿ.ಎಸ್.ಐ. ಜುಬಿಲಿ ಚರ್ಚಿನ ಸಭಾಪಾಲಕರಾದ ಅವರು “ ನಾವು ಪರರಿಗೋಸ್ಕರ ಬದುಕ ಬೇಕು, ನಾವು ಚಿಕ್ಕವರಿರುವಾಗ ನಾವೆಲ್ಲ ಎಲ್ಲ ಧರ್ಮದವರೊಡನೆ ಕೂಡಿ ಬಾಳುತಿದ್ದೇವು, ಅಂತಾಹ ವಾತವರಣ ಇಂದು ಅಗತ್ಯವಿದೆ’ ಎಂದು ಹೇಳಿದರು.


ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ “ಯೇಸು ಸ್ವಾಮಿ ಜಗತ್ತಿಗೆ ಶಾಂತಿ ದೂತನಾಗಿ ಆಗಮಿಸಿದ, ಸಹೋದರರಂತೆ ಬಾಳಬೇಕೆಂಬುದೇ ಆತನ ಇಚ್ಚೆ’ ಎಂದು ಕ್ರಿಸ್ಮಸ್ ಸಂದೇಶ ನೀಡಿದರು.
ವೇ.ಮೂ.ಜಿ.ವೇದವ್ಯಾಸ ಕೆ.ಆಚಾರ್ಯ ಶುಭಾಸಂಶನೆ ಗೈಯುತ್ತಾ “ಸಿಂಹ ಕಾಡಿಗೆ ರಾಜನಾದರೂ, ಹಿಂದೆ ತಿರುಗಿ ನೋಡಿ ಸಿಂಹಾಅಲೋಕನ ಮಾಡುತ್ತೆ, ಮನುಷ್ಯರಾದ ನಾವು ಹಾಗೆ ಮಾಡುವುದಿಲ್ಲ, ಮಾನವರಾದ ನಾವೂ ಸಿಂಹಾಅವಲೋಕನ ಮಾಡಬೇಕು, ನಾವೆಲ್ಲ ಒಂದೇ ತಾಯಿಯ ಮಕ್ಕಳು, ಎಲ್ಲಿ ತಪ್ಪಾಗಿದೆ ಎಂದು ಅರಿತು ನಾವೆಲ್ಲಾ, ಒಂದಾಗಿ, ಐಕ್ಯದಿಂದ, ಪರ್ಸಪರ ಪ್ರೀತಿ ಮಮತೆ ಸಂತೋಷದಿಂದ ಬದುಕಬೇಕು ಅದುವೇ ಸೌಹಾರ್ದತೆ’ ಎಂದರು. 24/7 ಅಂಬ್ಯುಲೆನ್ಸ್ ಇದರ ಮಾಲೀಕರರಾದ ಸಮಾಜ ಸೆವಕರಾದ ಮೊಹಮ್ಮದ್ ಇಬ್ರಾಹಿಂ ಮಾತನಾಡಿ “ನಾವು ಕಶ್ಟ ಕಾಲದಲ್ಲಿ ಒಬ್ಬರನೊಬ್ಬರು ಜಾತಿ ಭೇದ ಮರೆತು ಸಹಾಯ ಮಾಡುತ್ತೇವೆ, ಕಶ್ಟ ಕಾಲದಲ್ಲಿ ಸ್ಪಂದಿಸುತ್ತೇವೆ, ಆದರೆ ಕೆಲವೊಮ್ಮೆ ನಡಯಬಾರದ ಸಂಗತಿಗಳು ನಡೆಯುತ್ತವೆ, ಇಂತಹ ಸಣ್ಣ ಪುಟ್ಟ ವೈಮನಷು ಮೆರೆತು ಜೀವಿಸೋಣ’ ಎಂದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಅಧ್ಯಕ್ಷತೆ ವಹಿಸಿ “ಜಾತಿ ಭೇದ ಮರೆತು, ಇನ್ನೋಬ್ಬರಿಗೆ ಸಹಾಯ ಹಸ್ತ ನೀಡಿ ಶಾಂತಿಯಿಂದ ಬದುಕುವ” ಎಂದು ಸಂದೇಶ ನೀಡಿದರು.


ವಿನೋದ್ ಕ್ರಾಸ್ಟೊ ಇವರ ಅಧ್ಯಕ್ಷತೆಯಲ್ಲಿ ಶೆವೊಟ್ ಪ್ರತಿಷ್ಠಾನ್ ಇವರಿಂದ ಕೊಡಮಾಡುವ ಕುಂದಾಪುರ ವಲಯ ಪ್ರಧಾನರಾದ ಅತೀ ವಂ. ಧರ್ಮಗುರು ಸ್ಟ್ಯಾನಿ ತಾವ್ರೊರವರು ಸಹಾಯಧನವನ್ನು ಫಲಾನುಭವಿಗಳಿಗೆ ವಿತರಸಿದರು. ಕೋವಿಡ್ ವಾರಿಯರ್ಸಗಳಾದ, ಶ್ರೀ ವಿಲ್ಸನ್ ರೇಬೆರೊ, ಶ್ರೀ ರಜ್ಜಬ್ ಬುಡ್ಡಾ ಹಾಗೂ ಶ್ರೀ ಶಾಂತಿ ಸಾಗರ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೆ. ಜೋಯೆಲ್ ಸುಹಾಸ್, ಸಭಾಪಾಲಕರು, ಸಿ.ಎಸ್.ಐ. ಕ್ರಪಾ ಚರ್ಚ್, ಕುಂದಾಪುರ ಸಹಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ಗಂಗೊಳ್ಳಿ ಚರ್ಚ್ ವತಿಯಿಂದ ಕಿರು ನಾಟಕ, ನ್ರತ್ಯ, ಕುಂದಾಪುರ ಸಿ.ಎಸ್.ಐ. ಚರ್ಚಿನಿಂದ ಕ್ರಿಸ್ಮಸ್ ಕೆರೋಲ್ಸ್ ಗೀತೆಗಳ ಮನೋರಂಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಚಾಲಕ ಕಥೊಲೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷ ರೋಶನ್ ಲೋಬೊ ಸ್ವಾಗತಿಸಿದರು. ಸಹ ಸಂಚಾಲಕ ಜೀವನ್ ಸಾಲಿನ್ಸ್ ವಂದಿಸಿದರು. ಒವಿನ್ ರೆಬೆಲ್ಲೊ, ರೆನಿಟಾ ಬಾರ್ನೆಸ್, ಜಾಸ್ಮಿನ್ ವಾಜ್ ಮತ್ತು ನವೀಶ್ ಕರ್ಕಡ ಕಾರ್ಯಕ್ರಮಗಳನ್ನು ನಿರೂಪಿಸಿದರು.